

ಚಿಕ್ಕಮಗಳೂರು: ವೈಎಸ್ ವಿ ದತ್ತ ಮತ್ತೆ ಜೆಡಿಎಸ್ ಗೆ ಬರ್ತಾರಾ? ಎನ್ನುವ ಪ್ರಶ್ನೆಗೆ ಮಾಜಿ ಮುಖ್ಯುಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಖಾರವಾಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಬೀರೂರು ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದವ ಅವರು, ನಮ್ಮದು ಸಣ್ಣ ಪಕ್ಷ, ಅವರು ಇಂಟರ್ನ್ಯಾಷನಲ್ ಪಕ್ಷದ ಜೊತೆ ಹೋಗಿದ್ದಾರೆ. ನಮ್ಮ ಸಣ್ಣ ಪಕ್ಷದಲ್ಲಿ ಅವರಿಗೆ ಎಲ್ಲಿದೆ ಜಾಗ? ಅವರ ಬಗ್ಗೆ ನಾನು ಇಲ್ಲಿ ಏನು ಚರ್ಚೆ ಮಾಡಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.
ಹಾಸನ ಟಿಕೆಟ್ ಹಂಚಿಕೆ ಗೊಂದಲ ವಿಚಾರವಾಗಿ ಮಾತನಾಡಿ, ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಸಾಮಾನ್ಯ ಕಾರ್ಯಕರ್ತ, ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡಿ ಗೆಲ್ಲುವ ಶಕ್ತಿ ಜೆಡಿಎಸ್ಗೆ ಇದೆ.ಈ ವಿಚಾರದಲ್ಲಿ ನನ್ನ ಸ್ಟ್ಯಾಂಡ್ ಎಂದಿಗೂ ಬದಲಾಗುವುದಿಲ್ಲ. ದೇವೇಗೌಡರ ಆಸೆಯೂ ಕೂಡ ಇದೆ ಎಂದು ಹೇಳಿದ್ದಾರೆ.