1 ಕೋಟಿ ರೂ. ಬೆಲೆ ಬಾಳುವ ಮರ್ಸಿಡೀಸ್ ಬೆಂಜ್ ಇ ಕ್ಲಾಸ್ ಕಾರು ಖರೀದಿಸಿದ ನಟ ರಮೇಶ್ ಅರವಿಂದ್

ramesh
Published on

ಬೆಂಗಳೂರು: ಸ್ಟಾರ್​​ ನಟ, ನಟಿಯರ ಜತೆ ದುಬಾರಿ ಬೆಲೆ ಬಾಳುವ ಕಾರುಗಳಿವೆ. ಇದೇ ಸಾಲಿಗೆ ಸ್ಯಾಂಡಲ್​ವುಡ್​​ ನಟ ರಮೇಶ್ ಅರವಿಂದ್ ಕೂಡಾ ಸೇರ್ಪಡೆಯಾಗುತ್ತಿದ್ದಾರೆ. ರಮೇಶ್ ಹೊಚ್ಚ ಹೊಸ ಮರ್ಸಿಡೀಸ್ ಬೆಂಜ್ ಇ ಕ್ಲಾಸ್ ಕಾರು ಖರೀದಿಸಿದ್ದಾರೆ.

ರಮೇಶ್ ಅರವಿಂದ್ ಬಳಿ ಈಗಾಗಲೇ ಕೆಲ ಐಷಾರಾಮಿ ಕಾರುಗಳಿವೆ. ಈ ಬಾರಿ ರಮೇಶ್ ಅವರು ಐಷಾರಾಮಿ ಮರ್ಸಿಡಿಸ್ ಬೆಂಜ್ ಇ ಕ್ಲಾಸ್ ಕಾರು ಖರೀದಿಸಿದ್ದಾರೆ. ಇದರ ಆನ್‌ರೋಡ್ ಬೆಲೆ ಸರಿ ಸುಮಾರು 1 ಕೋಟಿ ರೂಪಾಯಿ. ಕಪ್ಪು ಬಣ್ಣದ ಕಾರು ಇದಾಗಿದೆ.

ಬೆಂಗಳೂರಿನ ಅಧಿಕೃತ ಮರ್ಸಿಡೀಸ್ ಬೆಂಜ್ ಕಾರು ಡೀಲರ್ ಬಳಿಯಿಂದ ರಮೇಶ್ ಅರವಿಂದ್ ಕಾರು ಖರೀದಿಸಿದ್ದಾರೆ. ಕಾರು ಡೆಲಿವರಿ ವೇಳೆ ರಮೇಶ್ ಅರವಿಂದ್ ಕುಟುಂಬ ಸಮೇತ ಶೋ ರೂಂಗೆ ಭೇಟಿ ನೀಡಿದ್ದರು. ಸಿಬ್ಬಂದಿಗಳು ಕಾರು ಕೀ ಹಸ್ತಾಂತರಿಸಿದ್ದಾರೆ. ಬಳಿಕ ಪೂಜೆ ನೆರವೇರಿಸಿ ಕಾರಿನಲ್ಲಿ ಮನೆಗೆ ತೆರಳಿದ್ದಾರೆ.

ಮರ್ಸಿಡಿಸ್ ಬೆಂಜ್ ಇ ಕ್ಲಾಸ್ ಕಾರು ಪೆಟ್ರೋಲ್ ಹಾಗೂ ಡೀಸೆಲ್ ವೇರಿಯೆಂಟ್‌ನಲ್ಲಿ ಲಭ್ಯವಿದೆ. ಪೆಟ್ರೋಲ್ ಎಂಜಿನ್‌ನಲ್ಲಿ 3 ವೇರಿಯೆಂಟ್ ಲಭ್ಯವಿದ್ದರೆ, ಡೀಸೆಲ್ ವೇರಿಯೆಂಟ್‌ನಲ್ಲಿ 2 ವೇರಿಯೆಂಟ್ ಲಭ್ಯವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net