ಅಯ್ಯೋ ನನ್ನ ಹೇರ್‌ ಸ್ಟೈಲ್‌ ಚೆನ್ನಾಗಿಲ್ಲ.. ಅಪಾರ್ಟ್‌ಮೆಂಟ್​​​ನಿಂದ ಜಿಗಿದು ಪ್ರಾಣ ಬಿಟ್ಟ!

Haircut
Published on

ಮುಂಬೈ: ಸಣ್ಣ ವಿಚಾರಗಳಿಗೆ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಇಲ್ಲೊಬ್ಬ ಬಾಲಕ ಹೇರ್‌ಕಟ್‌ ವಿಷಯವಾಗಿ ಬೇಸರಗೊಂಡು ಪ್ರಾಣ ಕಳೆದುಕೊಂಡಿದ್ದಾನೆ.

13 ವರ್ಷದ 8ನೇ ತರಗತಿ ವಿದ್ಯಾರ್ಥಿ ಅಪಾರ್ಟ್‌ಮೆಂಟ್‌ನ 16ನೇ ಮಹಡಿಯಿಂದ ಕೆಳಗ್ಗೆ ಬಿದ್ದು ಆತ್ಯಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಬಾಯಂದರ್‌ನಲ್ಲಿ ನಿನ್ನೆ ನಡೆದಿದೆ.

ಹೇರ್‌ ಸಲೂನ್‌ಗೆ ಬಾಲಕನನ್ನು ಕರೆದುಕೊಂಡು ಹೋಗಿ ಹೇರ್‌ ಕಟ್ಟಿಂಗ್‌ ಮಾಡಿಸಲಾಗಿತ್ತು. ಆದರೆ ಈ ಹೇರ್‌ ಸ್ಟೈಲ್‌ ಬಾಲಕನಿಗೆ ಇಷ್ಟವಾಗಲಿಲ್ಲ. ತನ್ನ ಚಿಕ್ಕ ಕೂದಲಿನಿಂದ ಅಸಮಾಧಾನಗೊಂಡಿದ್ದನು. ಮನೊಂದ ಬಾಲಕ ಅಪಾರ್ಟ್‌ಮೆಂಟ್‌ನ 16ನೇ ಮಹಡಿಯಲ್ಲಿದ್ದ ತನ್ನ ಮನೆಯ ಸ್ನಾನದ ಕೊಠಡಿಯ ಕಿಟಕಿಯಿಂದ ಕೆಳಕ್ಕೆ ಹಾರಿದ್ದಾನೆ.

ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು ಎಂದು ಮೃತ ಬಾಲಕನ ಕುಟುಂಬಸ್ಥರು ತಿಳಿಸಿದ್ದಾರೆ. ಪೊಲೀಸರು ಆಕಸ್ಮಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದು, ಈ ಬಗ್ಗೆ ಮುಂದಿನ ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net