YouTube : ಯೂಟ್ಯೂಬ್ ನೋಡುತ್ತಾ ಸ್ವಯಂ ಚಿಕಿತ್ಸೆ ಪಡೆಯಲು ಪ್ರಯತ್ನಿಸಿದರೆ ಏನಾಗಬಹುದು ಎಂಬುದಕ್ಕೆ ಈ ಒಂದು ಘಟನೆ ತಾಜಾ ಉದಾಹರಣೆಯಾಗಿದೆ. ಉತ್ತರ ಪ್ರದೇಶದ ಮಥುರಾದಲ್ಲಿ ವ್ಯಕ್ತಿಯೊಬ್ಬ ಯೂಟ್ಯೂಬ್ ನೋಡುತ್ತಾ ತನ್ನ ಹೊಟ್ಟೆನೋವಿಗೆ ತಾನೇ “ಆಪರೇಷನ್” ಮಾಡಿಕೊಳ್ಳಲು ಪ್ರಯತ್ನಿಸಿ, ಇದೀಗ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
32 ವರ್ಷದ ರಾಜಾ ಬಾಬು ಎಂಬ ವ್ಯಕ್ತಿಗೆ ಆಗಾಗ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿತ್ತು. ಈ ಹಿಂದೆ ಹಲವಾರು ಬಾರಿ ವೈದ್ಯರನ್ನು ಸಂಪರ್ಕಿಸಿದರು. ಆದರೆ, ಯಾವುದೇ ಪರಿಹಾರ ಸಿಗಲಿಲ್ಲ. ಇದರಿಂದ ಮನನೊಂದಿದ್ದ ಬಾಬು, ಕೊನೆಗೆ ಯೂಟ್ಯೂಬ್ ಸಹಾಯದಿಂದ ಶಸ್ತ್ರಚಿಕಿತ್ಸೆ ಮಾಡಿಕೊಳ್ಳಲು ನಿರ್ಧರಿಸಿದ.
ಯೂಟ್ಯೂಬ್ ಟುಟೋರಿಯಲ್ಗಳನ್ನು ನೋಡಿದ ಬಾಬು, ಮೆಡಿಕಲ್ ಶಾಪ್ಗೆ ಹೋಗಿ, ಆಪರೇಷನ್ಗೆ ಬೇಕಾದ ಔಷಧಿಗಳು, ಸರ್ಜಿಕಲ್ ಬ್ಲೇಡ್ ಖರೀದಿಸಿದ್ದಾನೆ. ಬುಧವಾರ (ಮಾರ್ಚ್ 19) ಸಂಜೆ ತನ್ನ ರೂಮಿಗೆ ಹೋದ ಬಾಬು, ಒಳಗಿಂದ ಲಾಕ್ ಮಾಡಿಕೊಂಡಿದ್ದಾನೆ. ಬಳಿಕ ಮರಗಟ್ಟುವಿಕೆ ಇಂಜೆಕ್ಸನ್ ನೀಡಿ, ಸರ್ಜಿಕಲ್ ಬ್ಲೇಡ್ನಿಂದ ಹೊಟ್ಟೆಯ ಕೆಳಗಿನ ಬಲಭಾಗದಲ್ಲಿ ಏಳು ಇಂಚಿನಷ್ಟು ಕೊಯ್ದಿದ್ದಾನೆ.
ಇದನ್ನೂ ಓದಿ: IPL-2025: ಈ ಸಲ ಐಪಿಎಲ್ನಲ್ಲಿ ಬೌಲರ್ಗಳಿಗೆ ಬಲ! ಹೊಸ ನಿಯಮಗಳಿಂದ ಹೆಚ್ಚಲಿದೆ ಸ್ಪರ್ಧಾತ್ಮಕತೆ!
ಆದರೆ, ಸರ್ಜಿಕಲ್ ಬ್ಲೇಡ್ ಉದ್ದೇಶಿಸಿದ್ದಕ್ಕಿಂತ ಆಳಕ್ಕೆ ಹೋದಂತೆ, ನೋವು ತೀವ್ರಗೊಂಡು ರಕ್ತಸ್ರಾವ ಆರಂಭವಾಗಿದೆ. ಇದಾದ ನಂತರ ಬಾಬು ಸ್ವತಃ ಗಾಯವನ್ನು ಹೊಲಿಯಲು ಪ್ರಯತ್ನಿಸಿದ್ದಾನೆ. ಆದರೆ, ರಕ್ತಸ್ರಾವ ನಿಲ್ಲದಿದ್ದಾಗ ಆತಂಕಗೊಂಡ ಬಾಬು, ತಮ್ಮ ಕುಟುಂಬಕ್ಕೆ ಮಾಹಿತಿ ನೀಡಿದರು. ಬಾಬು ನಡೆಯನ್ನು ನೋಡಿ ಒಂದು ಕ್ಷಣ ದಿಗ್ಭ್ರಮೆಗೊಂಡ ಕುಟುಂಬಸ್ಥರು ತಕ್ಷಣ ಆತನನ್ನು ಮಥುರಾದ ಜಿಲ್ಲಾಸ್ಪತ್ರೆಗೆ ದಾಖಲಿಸಿದರು.
ಬಾಬು ಸ್ಥಿತಿ ಗಂಭೀರವಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಆತನನ್ನು ದೊಡ್ಡ ವೈದ್ಯಕೀಯ ಸೌಲಭ್ಯವಿರುವ ಆಗ್ರಾದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಗುರುವಾರವೂ ಆತನ ಸ್ಥಿತಿ ಗಂಭೀರವಾಗಿತ್ತು. ಸದ್ಯ ಆತನಿಗೆ ಚಿಕಿತ್ಸೆ ಮುಂದುವರಿದಿದೆ.
ತಮ್ಮ ಗ್ರಾಮವಾದ ಸುನ್‌ರಾಖ್‌ನಲ್ಲಿ ಬ್ಯಾಂಕ್ವೆಟ್ ಹಾಲ್ ನಡೆಸುತ್ತಿರುವ ರಾಜಬಾಬು, ಈ ಹಿಂದೆ ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾಗಿ ಮತ್ತು ಅದೇ ಪ್ರದೇಶದಲ್ಲಿ ನೋವು ಅನುಭವಿಸುತ್ತಿರುವುದಾಗಿ ಹೇಳುತ್ತಿದ್ದರು ಎಂದು ರಾಜಬಾಬು ಅವರ ಸೋದರಳಿಯ ರಾಹುಲ್ ಕುಮಾರ್ ಹೇಳಿದ್ದಾರೆ. (ಏಜೆನ್ಸೀಸ್)
ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಹೇಗೆ ಮಲಗುತ್ತಾರೆ? ಇಲ್ಲಿದೆ ನೋಡಿ ಅಚ್ಚರಿಯ ಸಂಗತಿ! Sunita Williams
ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಸ್ನಾನ ಹೇಗೆ ಮಾಡ್ತಾರೆ? ಇಲ್ಲಿದೆ ನಿಮಗೆ ಗೊತ್ತಿರದ ಅಚ್ಚರಿಯ ಸಂಗತಿ! Astronauts
ಶತ್ರುವಿನ ಕಣ್ಮುಂದೆಯೇ ಮಾಯಾವಾಗುವ ಮ್ಯಾಜಿಕಲ್ ಪವರ್ ಹೊಂದಿರೋ ವಿಶ್ವದ ಏಕೈಕ ಜೀವಿ ಇದು! Magical Creature