More

  ಜನುಮದಿನದಂದೇ ತಲ್ವಾರ್ ಝಳಪಿಸಿ ಮಾಜಿ ಮೇಯರ್​ ಪುತ್ರನ ಅಟ್ಟಹಾಸ; ಯುವಕ ಸಾವು

  ಬೆಂಗಳೂರು: ಮಾಜಿ ಮೇಯರ್​ ಪುತ್ರನಿಂದ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನಲ್ಲಿ ಮೃತಪಟ್ಟಿದ್ದಾನೆ. ಮಾಜಿ ಮೇಯರ್ ನಾಗಮ್ಮನ ಮಗ ರಘು ತನ್ನ ಹುಟ್ಟುಹಬ್ಬವನ್ನ ಅದ್ದೂರಿಯಾಗಿ ಆಚರಣೆ ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದಿ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

  ಮೃತ ಯುವಕನನ್ನು ತಿಪ್ಪೇಸ್ವಾಮಿ ಎಂದು ಗುರುತಿಸಲಾಗಿದ್ದು, ಮಾರ್ಚ್​ 05ರಂದು ಬಳ್ಳಾರಿಯ ಹುಸೇನ್​ ನಗರದಲ್ಲಿ ಈ ಘಟನೆ ನಡೆದಿತ್ತು. ತಲೆ ಭಾಗಕ್ಕೆ ದೊಣ್ಣೆಯಿಂದ ಜೋರಾಗಿ ಹೊಡೆದಿದ್ದ ಕಾರಣ ತೀವ್ರ ರಕ್ತಸ್ರಾವವಾಗಿತ್ತು ಹೀಗಾಗಿ ಗಾಯಾಳು ಯುವಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಯುವಕ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

  ಬಳ್ಳಾರಿ ಮಾಜಿ ಮೇಯರ್​ ನಾಗಮಮ್ಮ ಅವರ ಪುತ್ರ ರಘು ತನ್ನ ಹುಟ್ಟುಹಬ್ಬದ ಪ್ರಯುಕ್ತ ಹುಸೇನ್ ನಗರದ ತುಂಬಾ ಲೈಟಿಂಗ್​, ಡಿಜೆ ಹಾಕಿಸಿ ಅದ್ದೂರಿಯಾಗಿ ಜನುಮದಿನ ಆಚರಿಸಿಕೊಳ್ಳುತ್ತಿದ್ದ. ಇದೇ ವೇಳೆ ಯುವಕ ತಿಪ್ಪೇಸ್ವಾಮಿ ತನ್ನ ಸಂಬಂಧಿಕರ ಮನೆಗೆ ಹೋಗಬೇಕು ಅಂತಾ ಬಳ್ಳಾರಿಯ ಕಪ್ಪಗಲ್ ರಸ್ತೆಯಲ್ಲಿರುವ ತನ್ನ ಮನೆಯಿಂದ ಹುಸೇನ್ ನಗರಕ್ಕೆ ಬೈಕ್ ನಲ್ಲಿ ತನ್ನ ಗೆಳೆಯರೊಂದಿಗೆ ಬಂದಿದ್ದಾನೆ.

  Bellary Raghu

  ಇದನ್ನೂ ಓದಿ: ಮೂರನೇ ಬಾರಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಿಗ್​ಬಾಸ್ ಮಾಜಿ ​ ಸ್ಪರ್ಧಿ

  ಈ ವೇಳೆ ದಾರಿ ಮಧ್ಯೆ ರಘು ಆ್ಯಂಡ್ ಟೀಂ ಕೈಯಲ್ಲಿ ತಲ್ವಾರ ಹಿಡಿದು ಕೇಕ್ ಕಟ್ ಮಾಡುತ್ತಾ ಕುಣಿದು ಕುಪ್ಪಳಿಸುತಿದ್ದ ಸಮಯದಲ್ಲಿ ಸ್ವಲ್ಪ ಜಾಗ ಬಿಡಿ ನಾನು ಆ ಕಡೆ ಹೋಗಬೇಕು ಅಂತಾ ರಘು ಆಂಡ್ ಗ್ಯಾಂಗ್‌ಗೆ ಯುವಕ ತಿಪ್ಪೇಸ್ವಾಮಿ ಮನವಿ ಮಾಡಿದ್ದಾನೆ. ದಾರಿ ಬಿಡುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ವಾಕ್ಸಮರ ನಡೆದಿದ್ದು, ರಘು ಮತ್ತು ಸಂಘಡಿಗರು ತಿಪ್ಪೇಸ್ವಾಮಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

  ಹಲ್ಲೆ ಮಾಡಿದ ಪರಿಣಾಮ ತೀವ್ರ ರಕ್ತಸ್ರಾವವಾಗಿ ತಿಪ್ಪೇಸ್ವಾಮಿ ಅಲ್ಲಿಯೇ ರಸ್ತೆಯಲ್ಲಿ ಬಿದ್ದಿದ್ದಾನೆ. ನಂತರ ಆತನನ್ನ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ತಿಪ್ಪೇಸ್ವಾಮಿ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಆರೋಪಿ ರಘು ಹಾಗೂ ಸಂಗಡಿಗರನ್ನು ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆ ನಡೆಸುತ್ತಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts