ಐಪಿಎಲ್​ ಉದ್ಘಾಟನಾ ಪಂದ್ಯಕ್ಕೆ ಮಳೆ ಭೀತಿ; ಚೆಪಾಕ್​ ಅಂಗಳ ಯಾರಿಗೆ ಹೆಚ್ಚು ಸಹಕಾರಿ? ಇಲ್ಲಿದೆ ಕಂಪ್ಲೀಟ್​ ಡೀಟೇಲ್ಸ್​

Chepauk Stadium
Published on

ಚೆನ್ನೈ: ಮಿಲಿಯನ್​ ಡಾಲರ್​ ಟೂರ್ನಿ ಐಪಿಎಲ್​ ಆರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು, 17ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್​ ಹಾಗೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಮುಖಾಮುಖಿಯಾಗಲಿವೆ. ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಎರಡು ತಂಡಗಳು ಗೆಲುವಿನೊಂದಿಗೆ ತಮ್ಮ ಅಭಿಯಾನವನ್ನು ಆರಂಭಿಸಲು ತಯಾರಿ ನಡೆಸಿವೆ.

ಕೇಳಿ ಬಂದಿರುವ ಮಾಹಿತಿ ಪ್ರಕಾರ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದೆ. ಆರ್​ಸಿಬಿ ಹಾಗೂ ಸಿಎಸ್​ಕೆ ನಡುವೆ ನಡೆಯಲಿರುವ ಪಂದ್ಯದ ದಿನದಂದು ಚೆನ್ನೈನಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ. ಇದೇ ವೇಳೆ ಶೇ 2ರಷ್ಟು ಮಳೆಯಾಗುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ. ಮಾರ್ಚ್ 21 ರಂದು ಚೆನ್ನೈನಲ್ಲಿ ಮಳೆಯ ಸಂಭವನೀಯತೆ ಶೇಕಡಾ 45 ರಷ್ಟಿತ್ತು. ಅದೇ ಸಮಯದಲ್ಲಿ, ಎರಡೂ ದಿನಗಳಲ್ಲಿ ತಾಪಮಾನವು 32 ಡಿಗ್ರಿಗಳವರೆಗೆ ಇರಲಿದೆ ಎಂದು ಹವಾಮಾನ ವರದಿಯಾಗಿದೆ.

ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂನ ಪಿಚ್ ಸ್ಪಿನ್ನರ್‌ಗಳಿಗೆ ಸ್ವರ್ಗ ಎಂದು ಪರಿಗಣಿಸಲಾಗಿದೆ. ಈ ಮೈದಾನದಲ್ಲಿ ಸ್ಪಿನ್ನರ್‌ಗಳಿಗೆ ಸಾಕಷ್ಟು ನೆರವು ಸಿಗುತ್ತದೆ. ಕಳೆದ ಐಪಿಎಲ್​ನಲ್ಲಿ ಮೊದಲ ಇನಿಂಗ್ಸ್‌ನ ಸರಾಸರಿ ಸ್ಕೋರ್ 170 ರನ್ ಆಗಿತ್ತು. ಇಲ್ಲಿ ಯಾವ ತಂಡ ಟಾಸ್ ಗೆದ್ದರೂ ಮೊದಲು ಬೌಲಿಂಗ್ ಮಾಡಲು ನೋಡುತ್ತದೆ. ಏಕೆಂದರೆ ಎರಡನೇ ಇನ್ನಿಂಗ್ಸ್​ ವೇಳೆಗೆ ಪಿಚ್​ನಲ್ಲಿ ಬದಲಾವಣೆ ಕಂಡುಬರುವುದರಿಂದ ಇಲ್ಲಿ ಎರಡನೇ ಬಾರಿಗೆ ಬ್ಯಾಟಿಂಗ್ ಮಾಡಿದ ತಂಡಕ್ಕೆ ಗೆಲುವಿಗಿಂತ ಹೆಚ್ಚಾಗಿ ಸೋಲು ಕಂಡಿವೆ.

FAF MSD

ಎರಡು ತಂಡಗಳು ಗೆಲುವಿನ ಸಿಹಿ ಮೂಲಕ ತಮ್ಮ ಅಭಿಯಾನವನ್ನು ಆರಂಭಿಸಲು ಸಜ್ಜಾಗಿವೆ. ಮುಖಾಮುಖಿ ವರದಿ ನೋಡುವುದಾದರೆ, ಆರ್​ಸಿಬಿ ಎದುರು ಚೆನ್ನೈ ಮೇಲುಗೈ ಸಾಧಿಸಿರುವುದು ಸ್ಪಷ್ಟವಾಗಿ ಕಾಣುತ್ತದೆ. ಇದಕ್ಕೆ ಪೂರಕವಾಗಿ ಉದ್ಘಾಟನಾ ಪಂದ್ಯ ಕೂಡ ಸಿಎಸ್​ಕೆ ತವರು ನೆಲದಲ್ಲೇ ನಡೆಯುತ್ತಿದ್ದು, ಇದರ ಹೊರತಾಗಿಯೂ ಬಲಿಷ್ಠ ತಂಡವನ್ನು ಕಟ್ಟಿಕೊಂಡು ಅಖಾಡಕ್ಕಿಳಿಯುತ್ತಿರುವ ಆರ್​ಸಿಬಿ, ಶತಾಯಗತಾಯ ಋತುರಾಜ್ ಪಡೆಯನ್ನು ಸೋಲಿಸುವ ಗುರಿಯೊಂದಿಗೆ ಕಣಕ್ಕಿಳಿಯುತ್ತಿದೆ.

ಟೀಮ್​ ನ್ಯೂಸ್​: ನಾಯಕ ಪ್ಲೆಸಿಸ್ ಜತೆಗೆ ಕೊಹ್ಲಿ ಇನಿಂಗ್ಸ್ ಆರಂಭಿಸಲಿದ್ದು, ತಂಡದ ದುಬಾರಿ ಆಟಗಾರ ಕ್ಯಾಮರಾನ್ ಗ್ರೀನ್ 3ನೇ ಕ್ರಮಾಂಕದಲ್ಲಿ ಆಡುವ ನಿರೀಕ್ಷೆ ಇದೆ. ಮಧ್ಯಮ ಕ್ರಮಾಂಕದಲ್ಲಿ ಫಿನಿಷರ್ ಪಾತ್ರ ನಿರ್ವಹಿಸಬಲ್ಲ ಆಟಗಾರರ ಕೊರತೆ ಇದೆ. ಸಿರಾಜ್ ಬೌಲಿಂಗ್ ವಿಭಾಗ ಮುನ್ನಡೆಸಲಿದ್ದು, 3ನೇ ವೇಗಿ ಸ್ಥಾನಕ್ಕೆ ಯಶ್ ದಯಾಳ್, ಆಕಾಶ್ ದೀಪ್ ನಡುವೆ ತೀವ್ರ ಪೈಪೋಟಿ ಇದೆ. 4ನೇ ವಿದೇಶಿ ಆಟಗಾರನ ಆಯ್ಕೆಯೂ ತಂಡಕ್ಕೆ ಸವಾಲೆನಿಸಿದೆ.

ಸಂಭಾವ್ಯ ತಂಡ: ಫಾಪ್​​ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಕ್ಯಾಮರಾನ್ ಗ್ರೀನ್, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ (ವಿ.ಕೀ), ರಜತ್ ಪಾಟೀದಾರ್, ಮೊಹಮದ್ ಸಿರಾಜ್, ವೈಶಾಕ್ ವಿಜಯ್‌ಕುಮಾರ್, ಟಾಮ್ ಕರ‌್ರನ್/ಲಾಕಿ ರ್ಗ್ಯುಸನ್, ಯಶ್ ದಯಾಳ್/ಆಕಾಶ್ ದೀಪ್, ಮಯಾಂಕ್ ದಾಗರ್/ಕರ್ಣ್ ಶರ್ಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net