ಸುಳ್ಯ: ಬೆಳ್ಳಾರೆ ಪೇಟೆಯಲ್ಲಿ ಯುವಕನೊಬ್ಬನ ಮೇಲೆ ತಂಡವೊಂದು ಹಲ್ಲೆ ನಡೆಸಿ ಯುವಕನ ತಲೆಗೆ ಗಾಯವಾಗಿ ಸುಳ್ಯ ಆಸ್ಪತ್ರೆಗೆ ದಾಖಲಾದ ಟನೆ ಶನಿವಾರ ನಡೆದಿದೆ. ಹಲ್ಲೆಗೊಳಗಾದ ಯುವಕನನ್ನು ಬೆಳ್ಳಾರೆಯ ಆಶೀರ್ ಎಂದು ಗುರುತಿಸಲಾಗಿದೆ.
ಆರೋಪಿಗಳನ್ನು ಅಜರುದ್ದೀನ್ ಮತ್ತು ಜಮಾಲ್ ಬೆಳ್ಳಾರೆ ಎಂದು ಗುರುತಿಸಲಾಗಿದೆ. ಆಶೀರ್ ಬೈಕ್ನಲ್ಲಿ ಬರುವ ವೇಳೆ ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದು ಕೊಲೆಗೆ ಯತ್ನಿಸಲಾಗಿದೆ. ಗಾಯಾಳನ್ನು ಪೊಲೀಸರು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.