ಮೂಲ್ಕಿ: ಗ್ರಾಮೀಣ ವಲಯದ ಮಕ್ಕಳಲ್ಲಿ ಪ್ರಾದೆೇಶಿಕ ಸಂಸ್ಕೃತಿ ಸಂಸ್ಕಾರವೃದ್ಧಿಗೆ ಉನ್ನತ ಶಿಕ್ಷಣ ಪಡೆಯಲು ಅರಸು ರಕ್ಷಕ್, ಅರಸು ಶಿಕ್ಷಣ ಸಮೃದ್ಧಿ ಯೋಜನೆ ಸಹಕಾರಿಯಾಗಲಿದೆ ಎಂದು ಮೂಲ್ಕಿ ಸೀಮೆಯ ಅರಸ ಎಂ.ದುಗ್ಗಣ್ಣ ಸಾವಂತ ಹೇಳಿದರು.
ಮೂಲ್ಕಿ ಅರಮನೆಯ ಧರ್ಮಚಾವಡಿಯಲ್ಲಿ ಅರಸು ರಕ್ಷಕ ಯೋಜನೆ ಹಾಗೂ ಅರಸು ಶಿಕ್ಷಣ ಸಮೃದ್ಧಿ ಯೋಜನೆಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೆಂಗಳೂರು ವಾಣಿ ಸಮೂಹ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಶಾರದಾ ಪ್ರಸಾದ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮೂಲ್ಕಿ ಅರಮನೆ ವೆಲ್ಫೇರ್ ಚಾರಿಟೆಬಲ್ ಟ್ರಸ್ಟ್ ನಡೆಸುವ ಸವಾಜ ಅಭಿವೃದ್ಧಿ ಕಾರ್ಯಕ್ರಮಗಳು ಅಭಿನಂದನೀಯ, ಜನರಿಗೆ ಉಪಯೋಗವಾಗುವಂತಹ ಇಂಥ ಕಾರ್ಯಕ್ರಮಗಳು ಮುಂದೆಯೂ ನಡೆಯುತ್ತಿರಲಿ ಎಂದರು.
ಮೂಲ್ಕಿ ಅರಮನೆ ವೆಲ್ಫೇರ್ ಚಾರಿಟೆಬಲ್ ಟ್ರಸ್ಟ್ ನಿರ್ದೇಶಕ ಎಂ.ಗೌತಮ್ ಜೈನ್, ಪ್ರಿಯದರ್ಶಿನಿ ಕಾರ್ಪೊರೇಟಿವ್ ಸೊಸೈಟಿಯ ಅಧ್ಯಕ್ಷ ಎಚ್.ವಸಂತ್ ಬೆರ್ನಾಡ್, ಮೂಲ್ಕಿ ನಾರಾಯಣ ಗುರು ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಹರೀಂದ್ರ ಸುವರ್ಣ, ನಿರೂಪಕ ನವೀನ್ ಶೆಟ್ಟಿ ಎಡ್ಮೆವಾರ್ ಹಾಗೂ ವಿದ್ಯಾಶಂಕರ್ ಉಪಸ್ಥಿತರಿದ್ದರು.
ವಿನೋದ್ ಸಾಲ್ಯಾನ್ ನಿರೂಪಿಸಿದರು.