ಡ್ಯಾನ್ಸರ್​ ಹಣೆಗೆ ಕುಂಕಮ ಹಚ್ಚಿ ವಿಭಿನ್ನವಾಗಿ ಪ್ರಪೋಸ್​​; ನೋಡನೋಡುತ್ತಿದ್ದಂತೆ ವೇದಿಕೆ ಮೇಲೆಯೇ ನಡೆದು ಹೋಯಿತು ಯುವಜೋಡಿಯ Marriage

Dancer Marriage
Published on

ಪಟ್ನಾ: ಪ್ರೇಮಿಗಳ ದಿನ ಹತ್ತಿರವಾಗುತ್ತಿದ್ದಂತೆ ಈ ದಿನಕ್ಕಾಗಿ ಹಲವಾರಿ ಜೋಡಿಗಳು ಎದುರು ನೋಡುತ್ತಿವೆ. ಪರಸ್ಪರ ಉಡುಗೊರೆಯನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ತಮ್ಮ ಪ್ರೀತಿಯನ್ನು ವಿನಿಮಯ ಮಾಡಿಕೊಳ್ಳಲು ಸಜ್ಜಾಗಿದ್ದಾರೆ. ಇದೀಗ ಯುವಕನೋರ್ವ ತಾನು ಪ್ರೀತಿಸುತ್ತಿರುವ ಹುಡುಗಿಗೆ ವಿಭಿನ್ನವಾಗಿ ತನ್ನ ಪ್ರೀತಿಯನ್ನು ಹೇಳಿಕೊಂಡಿದ್ದು, ವೇದಿಕೆ ಮೇಲಯೇ ಮದುವೆಯಾಗಿರುವ (Marriage) ವಿಡಿಯೋ ಎಲ್ಲರ ಮನ ಗೆಲ್ಲುತ್ತಿದೆ.

ಬಿಹಾರದಲ್ಲಿ ಈ ಘಟನೆ ನಡೆದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನೇಕರು ಯುವಕನ ನಡೆಯನ್ನು ಹಾಡಿಹೊಗಳುತ್ತಿದ್ದು, ಡ್ಯಾನ್ಸರ್ ಒಬ್ಬರ ಬಳಿ ಆತ ತನ್ನ ಪ್ರೀತಿಯನ್ನು ತೋರ್ಪಡಿಸಿದ ರೀತಿಯನ್ನು ಎಲ್ಲರು ಹಾಡಿ ಹೊಗಳುತ್ತಿದ್ದಾರೆ.

ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಬಂಗಾಳ ಮೂಲದ ಯುವತಿ ವೇದಿಕೆಯಲ್ಲಿ ಡ್ಯಾನ್ಸ್​ ಮಾಡುತ್ತಿದ್ದು, ಆಕೆ ಡ್ಯಾನ್ಸ್​ ಮುಗಿದ ಬಳಿಕ ಯುವಕ ವೇದಿಕೆ ಏರಿದ್ದು, ತಾನು ಇಷ್ಟಪಟ್ಟ ಯುವತಿ ಹಣೆ ಮೇಲೆ ಕುಂಕಮವನ್ನು ಇಟ್ಟು ಆಕೆಯ ತಲೆ ಮೇಲೆ ಟವಲ್​ನಲ್ಲಿ ಸೆರಗನ್ನು ಹೊದಿಸುತ್ತಾನೆ. ಯುವಕನ ನಡೆಗೆ ಭಾವುಕಳಾದ ಯುವತಿ ಒಂದು ಕ್ಷಣ ವಿಚಲಿತಳಾದರೂ ಸಹ ಕೊನೆಯಲ್ಲಿ ಆತನ ಪ್ರೀತಿಯನ್ನು ಒಪ್ಪಿಕೊರ್ಳಳುತ್ತಾಳೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ ಅನೇಕರು ಯುವಕನ ನಡೆಯನ್ನು ಮೆಚ್ಚಿದ್ದು, ಡ್ಯಾನ್ಸರ್ ಒಬ್ಬಳನ್ನು ಆತ ಮದುವೆಯಾಗಿರುವುದು (Marriage) ನಿಜಕ್ಕೂ ಶ್ಲಾಘನೀಯ. ಇವರಿಬ್ಬರ ಮದುವೆಯನ್ನು ಅವರ ಮನೆಗಳಲ್ಲಿ ಒಪ್ಪಿಕೊಳ್ಳುತ್ತಾರಾ ಎಂದು ಮತ್ತಷ್ಟು ಜನ ಪ್ರಶ್ನಿಸಿದ್ದಾರೆ. ಸದ್ಯ ಲವ್ ಪ್ರಪೋಸಲ್ ಕಮ್ ಮದುವೆಯ ವಿಡಿಯೋ ವೈರಲ್​ ಆಗಿದ್ದು, ಅನೇಕರು ನವಜೋಡಿಗೆ ಶುಭ ಹಾರೈಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net