ಪಟ್ನಾ: ದೆಹಲಿ ವಿಧಾನಸಭೆ ಚುನಾವಣಾ ಫಲಿತಾಂಶ ಬಿಹಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಬಿಹಾರದಲ್ಲಿ ಆರ್ಜೆಡಿ ಇರುವವರೆಗೂ ಬಿಜೆಪಿ ಮತ್ತು ಎನ್ಡಿಐ ಮೈತ್ರಿಕೂಟ ಅಧಿಕಾರಕ್ಕೆ ಬರುವುದಿಲ್ಲ ಎಂದು ಮಾಜಿ ಕೇಂದ್ರ ಸಚಿವ ಲಾಲು ಪ್ರಸಾದ್ ಯಾದವ್ (Lalu Prasad Yadav) ಹೇಳಿದ್ದಾರೆ.
ಪಟ್ನಾದಲ್ಲಿ ಈ ಕುರಿತು ಮಾತನಾಡಿದ ಲಾಲು ಪ್ರಸಾದ್ (Lalu Prasad), ದೆಹಲಿ ವಿಧಾನಭೆ ಚುನಾವಣೆ ಫಲಿತಾಂಶ ಇಲ್ಲಿ ಪರಿಣಾಮ ಬೀರುವುದಿಲ್ಲ. ಬಿಹಾರದಲ್ಲಿ ಬಿಜೆಪಿ ಸೋಲಲಿದೆ. ಬಿಹಾರದಲ್ಲಿ ನಾವು ಇರುವವರೆಗೂ ಬಿಜೆಪಿ ಸರ್ಕಾರ ರಚಿಸಲು ಸಾಧ್ಯವಿಲ್ಲ. ಇಲ್ಲಿನ ಜನ ಬಿಜೆಪಿಯನ್ನು ಸೋಲಿಸಿದ್ದಾರೆ, ಎನ್‌ಡಿಎಯನ್ನೂ ಸೋಲಿಸಲಿದ್ದಾರೆ.
Patna, Bihar: RJD Supremo Lalu Prasad Yadav says, “It won’t make any difference, BJP will be defeated. How will BJP form a government while we are here? People have understood BJP, they know you well…” pic.twitter.com/9s9V46hf5L
— IANS (@ians_india) February 13, 2025
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅವರು ಮತ್ತೆ ಅಧಿಕಾರಕ್ಕೆ ಬರದಂತೆ ತಡೆಯಲು ನಾವು ಸಾಕು. 2005ರಿಂದಲೂ ಅಧಿಕಾರದಲ್ಲಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಈ ಬಾರಿ ಸೋಲಲಿದ್ದಾರೆ ಎಂದು ಆರ್ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ (Lalu Prasad Yadav) ಭವಿಷ್ಯ ನುಡಿದಿದ್ದಾರೆ.
ಇನ್ನೂ ಲಾಲು ಹೇಳಿಕೆಗೆ ಪ್ರತಿಕ್ರಿಯಿಸಿರುವ ಡಿಸಿಎಂ ವಿಜಯ್ಕುಮಾರ್ ಸಿನ್ಹಾ, ಲಾಲು ಅವರು ಬಿಹಾರದಲ್ಲಿ ಇದ್ದರೂ ಇರದಿದ್ದರೂ, ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರಲಿದೆ. ಲಾಲು ಅವರು ಇರಬೇಕು ಎಂದು ಜನ ಬಯಸುತ್ತಿಲ್ಲ. ಅವರ ಆಡಳಿತವು ಜಾತಿವಾದ ಹಾಗೂ ದುರಾಡಳಿತದಿಂದ ಕೂಡಿತ್ತು. ಇದರಿಂದ ರಾಜ್ಯಕ್ಕೆ ಕೆಟ್ಟ ಹೆಸರು ಬಂದಿತ್ತು ಎಂದು ಕಿಡಿಕಾರಿದ್ದಾರೆ.
ಸ್ನೇಹಿತನನ್ನು ಟ್ರಿಪ್ಗೆ ಕರೆದುಕೊಂಡು ಹೋಗಲು ಹಣ ನೀಡಿದ ವಿದ್ಯಾರ್ಥಿಗಳು; ಪುಟ್ಟ ಬಾಲಕರ ಹೃದಯಸ್ಪರ್ಶಿ Video Viral
ಅನುಭವವು ನನ್ನ ನಾಯಕತ್ವದ ಪಾತ್ರದಲ್ಲಿ… RCB ಕ್ಯಾಪ್ಟನ್ ಆದ ಬೆನ್ನಲ್ಲೇ ರಜತ್ ಪಾಟಿದಾರ್ ಮೊದಲ ಪ್ರತಿಕ್ರಿಯೆ