ನವದೆಹಲಿ: ಸಾಮಾನ್ಯವಾಗಿ ಶಾಲೆಗಳಿಂದ ಕರೆದುಕೊಂಡು ಹೋಗುವ ಟ್ರಿಪ್ಗೆ ಮಕ್ಕಳನ್ನು ಕಳಿಸಲು ಕೆಲ ಪೋಷಕರು ಹಿಂದೇಟು ಹಾಕುತ್ತಾರೆ. ಕೆಲವರು ಹಣಕಾಸಿನ ಕೊರತೆಯಿಂದ ತಮ್ಮ ಮಕ್ಕಳನ್ನು ಕಳಿಸದಿದ್ದರೆ ಮತ್ತಷ್ಟು ಜನ ಭಯದಿಂದಾಗಿ ಕಳಿಸುವುದಿಲ್ಲ. ಆದರೆ, ಇಲ್ಲೊಂದು ಹೃದಯಸ್ಪರ್ಶಿ ಘಟನೆಯಲ್ಲಿ ಸಹಪಾಠಿಗಳೆಲ್ಲ ಸೇರಿ ಸ್ನೇಹಿತನನ್ನು ತಮ್ಮೊಟ್ಟಿಗೆ ಟ್ರಿಪ್ಗೆ ಕರೆದುಕೊಂಡು ಹೋಗಲು ಹಣ ಕೂಡಿಸಿ ಅದನ್ನು ಟೀಚರ್ ಬಳಿ ನೀಡಿದ್ದು, ವಿದ್ಯಾರ್ಥಿಗಳ ಈ ನಡೆ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ಘಟನೆಯು ನೇಪಾಳದ ಸ್ಮಾಲ್ ಹೆವನ್ ಶಾಲೆಯಲ್ಲಿ ನಡೆದಿದ್ದು, ವಿದ್ಯಾರ್ಥಿಗಳೆಲ್ಲರೂ ಸೇರಿ ಪ್ರಿನ್ಸ್ ಹೆಸರಿನ ಸಹಪಾಠಿಯನ್ನು ತಮ್ಮೊಟ್ಟಿಗೆ ಕರೆದುಕೊಂಡು ಹೋಗಲು ಹಣ ಕೂಡಿಸಿ ಟೀಚರ್ ಬಳಿ ನೀಡಿದ್ದು, ಇದನ್ನು ಕಂಡ ಶಿಕ್ಷಕಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಸದ್ಯ ಈ ವಿಡಿಯೋ (Video Viral) 2 ಮಿಲಿಯನ್ಗೂ ಅಧಿಕ ಬಾರಿ ವೀಕ್ಷಣೆಗೆ ಒಳಪಟ್ಟಿದ್ದು, ವಿದ್ಯಾರ್ಥಿಗಳ ನಡೆಯನ್ನು ನೆಟ್ಟಿಗರು ಹಾಡಿ ಹೊಗಳುತ್ತಿದ್ದಾರೆ.
ವೈರಲ್ ಆಗಿರುವ ವಿಡಿಯೋ (Video Viral) ನೋಡುವುದಾದರೆ ತರಗತಿಯಲ್ಲಿರುವಾಗ ಟೀಚರ್ ಪ್ರಣವ್ ಎಂದು ವಿದ್ಯಾರ್ಥಿಯ ಹೆಸರನ್ನು ಜೋರಾಗಿ ಕರೆದು ಏನು ಮಾಡುತ್ತಿದ್ದೀಯಾ ಎಂದು ಕೇಳುತ್ತಾರೆ. ಇದಕ್ಕೆ ಉತ್ತರಿಸುವ ವಿದ್ಯಾರ್ಥಿ ಏನಿಲ್ಲವೆಂದು ಹೇಳಿ ತಿರುಗುತ್ತಾನೆ. ಕೆಲಕ್ಷಣದ ಬಳಿಕ ತಮ್ಮ ಸ್ನೇಹಿತ ಪ್ರಿನ್ಸ್‌ನ ಸ್ಕೂಲ್ ಪಿಕ್ನಿಕ್‌ಗಾಗಿ ಹಣ ಸಂಗ್ರಹಿಸುತ್ತಿದ್ದು, ಬಳಿಕ ಶಿಕ್ಷಕಿಯ ಬಳಿ ಸಂಗ್ರಹವಾದ ಹಣವನ್ನು ನೀಡುತ್ತಾರೆ. ಈ ವೇಳೆ ಶಿಕ್ಷಕಿ ಈ ಹಣ ಬೇಡ ಪ್ರಿನ್ಸ್‌ನ ಪಿಕ್ನಿಕ್ ಖರ್ಚು ತಾವು ಭರಿಸುವುದಾಗಿ ಹೇಳುತ್ತಾರೆ. ಇದಕ್ಕೆ ವಿದ್ಯಾರ್ಥಿಗಳು ಆಗಲ್ಲ ಎಂದು ಹೇಳಿದ್ದು, ತನ್ನ ಸಹಪಾಠಿಗಳ ಪ್ರೀತಿ ಮತ್ತು ಕಾಳಜಿಯನ್ನು ಕಂಡು ಪ್ರಿನ್ಸ್ ಕಣ್ಣೀರು ಹಾಕಿದ್ದು, ಪುಟ್ಟ ಮನಸ್ಸುಗಳ ಕೆಲಸವಯ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ಒಂದು ವಾರದ ಹಂಚಿಕೊಳ್ಳಲಾದ ಈ ವಿಡಿಯೋ 2 ಮಿಲಿಯನ್ಗೂ ಅಧಿಕ ಬಾರಿ ವೀಕ್ಷಣೆಗೆ ಒಳಪಟ್ಟಿದ್ದು, ನೆಟ್ಟಿಗರು ವಿದ್ಯಾರ್ಥಿಗಳ ಪೋಷಕರು ಹಾಗೂ ಶಿಕ್ಷಕರಿಗೆ ಧನ್ಯವಾದಗಳನ್ನು ಹೇಳಿದ್ದು, ವಿದ್ಯಾರ್ಥಿಗಳನ್ನು ಈ ರೀತಿ ತಯಾರು ಮಾಡುವಂತೆ ಸಲಹೆ ನೀಡಿ ಕಮೆಂಟ್ ಹಾಕುತ್ತಿದ್ದಾರೆ.
ಅನುಭವವು ನನ್ನ ನಾಯಕತ್ವದ ಪಾತ್ರದಲ್ಲಿ… RCB ಕ್ಯಾಪ್ಟನ್ ಆದ ಬೆನ್ನಲ್ಲೇ ರಜತ್ ಪಾಟಿದಾರ್ ಮೊದಲ ಪ್ರತಿಕ್ರಿಯೆ
ಆರ್ಟ್ ಆಫ್ ಲಿವಿಂಗ್ನಿಂದ 10ನೇ ಅಂತಾರಾಷ್ಟ್ರೀಯ ಮಹಿಳಾ ಸಮಾವೇಶ; ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗಿ