ಮದುವೆಯಾದ ಅಕ್ಕನ ಮೇಲೇ ಲೈಂಗಿಕ ದೌರ್ಜನ್ಯವೆಸಗಿದ ತಮ್ಮ! ಪ್ರಶ್ನಿಸಿದ್ದಕ್ಕೆ ಅಮ್ಮನ ಮೇಲೂ ಹಲ್ಲೆ!

sister
Published on

ಮುಂಬೈ: ಅಕ್ಕ-ತಮ್ಮನ ಸಂಬಂಧವೆನ್ನುವುದು ಅತಿ ಶ್ರೇಷ್ಠ ಸಂಬಂಧವೆನ್ನುತ್ತಾರೆ. ಒಡಹುಟ್ಟಿದವ ಸದಾ ನಮ್ಮ ರಕ್ಷಣೆ ಮಾಡಲೆಂದು ಹೆಣ್ಣು ಮಕ್ಕಳು ರಕ್ಷೆಯನ್ನೂ ಕಟ್ಟುತ್ತಾರೆ. ಆದರೆ ರಕ್ಷಣೇ ನೀಡಬೇಕಾದ ತಮ್ಮನೇ ಅಕ್ಕನ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಮುಂದಾದರೆ?

ಹೌದು. ಇಂತದ್ದೊಂದು ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಪುಣೆಯ ಪಿಂಪ್ರಿ ಚಿಂಚ್​ವಾಡ್​ನಲ್ಲಿರುವ ಭೋಸಾರಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ವರದಿಯಾಗಿದೆ. 33 ವರ್ಷದ ಮಹಿಳೆಗೆ ಮದುವೆಯಾಗಿದ್ದು, ಗಂಡನಿಂದ ದೂರಾಗಿರುವ ಆಕೆ, ತನ್ನ ತವರು ಮನೆಯಲ್ಲೇ ಬದುಕುತ್ತಿದ್ದಾಳೆ. ಮನೆಯಲ್ಲಿರುವ 25 ವರ್ಷದ ತಮ್ಮ ಡ್ರಗ್ಸ್​ ಮತ್ತು ಮದ್ಯಪಾನ ವ್ಯಸನಿ ಆಗಿದ್ದು, ಅಕ್ಕನ ಮೇಲೇ ಲೈಂಗಿಕ ದೌರ್ಜನ್ಯವೆಸಗಿದ್ದಾನೆ.

ಗುರುವಾರದಂದು ರಾತ್ರಿ ಮನೆಯಲ್ಲಿ ಎಲ್ಲರು ಮಲಗಿರುವ ವೇಳೆ ಕಂಠ ಪೂರ್ತಿ ಕುಡಿದು ಮನೆಗೆ ಬಂದ ಯುವಕ ಮಲಗಿದ್ದ ಅಕ್ಕನ ದೇಹ ಸ್ಪರ್ಶಿಸಲು ಆರಂಭಿಸಿದ್ದಾನೆ. ಆಕೆಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ. ಎಚ್ಚರಗೊಂಡ ಅಕ್ಕ, ಅಮ್ಮನನ್ನು ಕರೆಯುವಷ್ಟರಲ್ಲಿ ಅಲ್ಲೇ ಇದ್ದ ಮರದ ಹಲಗೆಯಿಂದ ಅಕ್ಕನ ಮೇಲೆ ಹಲ್ಲೆ ಮಾಡಿದ್ದಾನೆ. ಪ್ರಶ್ನಿಸಲು ಬಂದ ಅಮ್ಮನ ಮೇಲೂ ಅದೇ ಹಲಗೆಯಿಂದ ಹಲ್ಲೆ ಮಾಡಿದ್ದಾನೆ.

ಸೆಪ್ಟೆಂಬರ್​ ತಿಂಗಳಿನಿಂದಲೂ ಆತ ಇದೇ ರೀತಿ ಅಸಭ್ಯವಾಗಿ ವರ್ತಿಸುತ್ತಿರುವುದಾಗಿ ಕುಟುಂಬ ಹೇಳಿದೆ. ಆತ ಮನೆಯಲ್ಲಿರುವುದಕ್ಕಿಂತ ಜೈಲಿನಲ್ಲಿರುವುದೇ ಸೂಕ್ತ ಎಂದಿರುವ ಕುಟುಂಬ, ಯುವಕನ ಮೇಲೆ ಪೊಲೀಸ್​ ದೂರು ದಾಖಲಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net