ಅರ್ಧ ಭಾಗ ತುಂಡಾದ ಸ್ಥಿತಿಯಲ್ಲಿ ಯುವತಿಯ ದೇಹ ಸಿಕ್ಕ ಪ್ರಕರಣ; ಆಕೆಯ ಪ್ರಿಯಕರನ ಬಂಧನದಿಂದ ಬಯಲಾಯ್ತು ಹತ್ಯೆಗೆ ಕಾರಣ…

Murder Cause
Published on

ಬಾಗಲಕೋಟೆ: ಯುವತಿ ದೇಹದ ಅರ್ಧ ಭಾಗ ತುಂಡಾದ ಸ್ಥಿತಿಯಲ್ಲಿ ಸಿಕ್ಕ ಪ್ರಕರಣ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಇದೀಗ ಈ ಪ್ರಕರಣಕ್ಕೆ ಮಹತ್ವದ ತಿರುವು ಲಭಿಸಿತದ್ದು, ಅನ್ಯರ ಜೊತೆಗೆ ಸಂಬಂಧ ಇದೆ ಎಂಬ ಸಂಶಯದಿಂದ ಆಕೆಯೆ ಪ್ರಿಯಕರನೇ ಕೊಲೆ ಮಾಡಿರುವುದು ಬಯಲಾಗಿದೆ. 18ರ ಹರೆಯದ ಚೈತ್ರಾ ಹೋಳಿ ಕೊಲೆಯಾದ ದುರ್ದೈವಿ.

ಆರೋಪಿ ಮುತ್ತಪ್ಪ ಆಸಂಗಿ(26) ಯುವತಿಯ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದ. ಕೊಲೆಯಾದ ಚೈತ್ರಾ ಹೋಳಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ. ಆರೋಪಿ ಮುತ್ತಪ್ಪ ಕಾರು ಚಾಲಕನಾಗಿದ್ದ. ಫೆಬ್ರುವರಿ 20ರಂದು ಹೊಸೂರು ಗ್ರಾಮದ ಕಬ್ಬಿನ ಹೊಲವೊಂದರಲ್ಲಿ ಮುತ್ತಪ್ಪ ಕೊಲೆ ಮಾಡಿದ್ದ.

ಮಾರ್ಚ್ 2 ರಂದು ಕೊಲೆಯಾದ ಯುವತಿಯ ದೇಹದ ಕೆಳಭಾಗ, ಮೇಲ್ಭಾಗದ ಎಲುಬುಗಳು ಹಾಗೂ ಕೂದಲು ಪತ್ತೆಯಾಗಿದ್ದವು. ಪ್ರಾಣಿಗಳು ಯುವತಿಯ ಮೃತದೇಹದ ಮೇಲ್ಭಾಗವನ್ನು ತಿಂದಿದ್ದವು. ಈ ಬಗ್ಗೆ ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ, ಪೊಲೀಸರು ತನಿಖೆಗೆ ಇಳಿದಿದ್ದರು.

ಇದೀಗ ಚೈತ್ರಾಳನ್ನು ಹತ್ಯೆಗೈದು ತಲೆ ಮರೆಸಿಕೊಂಡಿದ್ದ ಮುತ್ತಪ್ಪ ಹುನಗುಂದನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸುತ್ತಿದ್ದಂತೆ ಸತ್ಯ ಹೊರ ಬಂದಿದೆ. ಯುವತಿಯನ್ನು ಗುರುತು ಮಾಡಿ, ತಾನೇ ಕೊಲೆ ಮಾಡಿರುವುದಾಗಿ ಮುತ್ತಪ್ಪ ಒಪ್ಪಿಕೊಂಡಿದ್ದಾನೆ.

ಮುತ್ತಪ್ಪ ಹುನಗುಂದ ತಾಲೂಕಿನ ಮುಳ್ಳೂರು ಗ್ರಾಮದ ಹಾಗೂ ಚೈತ್ರಾ ಹುನಗುಂದ ತಾಲೂಕಿನ ಧನ್ನೂರು ಗ್ರಾಮದ ನಿವಾಸಿ. ಮುಳ್ಳೂರು ಯುವತಿಯ ತಾಯಿ ತವರು ಮನೆಗೆ ಬಂದಾಗ ಇಬ್ಬರ ಮಧ್ಯೆ ಪ್ರೀತಿ ಶುರುವಾಗಿತ್ತು. ಆದರೆ ಮುತ್ತಪ್ಪನ ಅನುಮಾನ ಯುವತಿ ಚೈತ್ರಾಳ ಜೀವವನ್ನೇ ಕಸಿದುಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net