More

    ಉರಿಗೌಡ – ದೊಡ್ಡ ನಂಜೇಗೌಡರ ಹೆಸರಿನ ತಾತ್ಕಾಲಿಕ ದ್ವಾರ ತೆರವುಗೊಳಿಸಿದ್ರೆ ಏನಾಯ್ತು? ನಾವು ಶಾಶ್ವತ ದ್ವಾರ ನಿರ್ಮಾಣ ಮಾಡ್ತೇವೆ; ಸಿ.ಟಿ.ರವಿ

    ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ಮಂಡ್ಯದಲ್ಲಿ ರೋಡ್​ ಶೋ ನಡೆಸಿದ ರಸ್ತೆಯ ಮಹಾದ್ವಾರಕ್ಕೆ ‘ಉರಿಗೌಡ ಮತ್ತು ದೊಡ್ಡ ನಂಜೇಗೌಡ’ ಹೆಸರನ್ನು ಇರಿಸಲಾಗಿತ್ತು. ಇದು ಸಾಕಷ್ಟು ಟೀಕೆಗೂ ಕಾರಣವಾಗಿತ್ತು. ಬಳಿಕ ದ್ವಾರಕ್ಕೆ ಇಟ್ಟಿದ್ದ ಹೆಸರನ್ನು ರಾತ್ರೋರಾತ್ರಿ ತೆರವುಗೊಳಿಸಿ, ಅದಕ್ಕೆ ಬಾಲಗಂಗಾಧರ ನಾಥ ಸ್ವಾಮೀಜಿ ಮಹಾದ್ವಾರ ಎಂದು ಹೆಸರಿಡಲಾಗಿತ್ತು.

    ಇದನ್ನೂ ಓದಿ: ಮಂಡ್ಯದಲ್ಲಿ ಪ್ರಧಾನಿ ಮೋದಿ ರೋಡ್‌ ಶೋ; ಕೇಸರಿಮಯವಾಗಿ ಬದಲಾದ ಸಕ್ಕರೆ ನಾಡು

    ಇದೀಗ ಮಂಡ್ಯದಲ್ಲಿ ಉರಿಗೌಡ ನಂಜೇಗೌಡ ದ್ವಾರ ತೆರವುಗೊಳಿಸಿದ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ,ರವಿ ಪ್ರತಿಕ್ರಿಯಿಸಿ ಉರಿಗೌಡ ಮತ್ತು ನಂಜೇಗೌಡರ ದ್ವಾರವನ್ನು ಶಾಶ್ವತವಾಗಿ ನಿರ್ಮಾಣ ಮಾಡುತ್ತೇವೆ. ಪ್ರಧಾನಿ ಮೋದಿ ಸ್ವಾಗತಕ್ಕೆ ಹಾಕಿದ್ದ ಉರಿಗೌಡ ಮತ್ತು ನಂಜೇಗೌಡ ದ್ವಾರ ತೆರವುಗೊಳಿಸಬಾರದಿತ್ತು. ಯಾಕೆ ತೆರವುಗೊಳಿಸಿದ್ದಾರೆ ಎಂದು ಗೊತ್ತಿಲ್ಲ. ತಾತ್ಕಾಲಿಕ ದ್ವಾರವನ್ನು ತೆರವುಗೊಳಿಸಿದ್ರೆ ಏನಾಯ್ತು? ನಾವು ಶಾಶ್ವತ ದ್ವಾರ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಮೈ-ಬೆಂ ಹೆದ್ದಾರಿ ನಿರ್ಮಾಣದ ಕ್ರೆಡಿಟ್ ಪಾಲಿಟಿಕ್ಸ್ ವಿಚಾರ: ಜ್ಯೋತಿಷಿ ಕತೆ ಹೇಳಿ ಸುಮಲತಾ ತಿರುಗೇಟು

    ಉರಿಗೌಡ ಮತ್ತು ನಂಜೇಗೌಡ ಕಾಲ್ಪನಿಕ ವ್ಯಕ್ತಿಗಳಾಗಿದ್ದು, ನಿಜ ವ್ಯಕ್ತಿಗಳಂತೆ ಬಣ್ಣಿಸಲಾಗುತ್ತಿದೆ. ರಾಜಕೀಯ ಲಾಭಕ್ಕಾಗಿ ಬಿಜೆಪಿ ಮುಖಂಡರು ಟಿಪ್ಪುವನ್ನು ಕೊಂದ ದೋಷವನ್ನು ಒಕ್ಕಲಿಗ ಸಮುದಾಯದ ತಲೆಗೆ ಕಟ್ಟಲು ಮುಂದಾಗಿದ್ದಾರೆ ಎಂಬ ವಿರೋಧ ವ್ಯಕ್ತವಾದ ಬೆನ್ನಲ್ಲೇ ಮಹಾದ್ವಾರದ ಹೆಸರಿ ಬದಲಿಸಲಾಗಿತ್ತು.

    ಇದನ್ನೂ ಓದಿ: ಮೋದಿ ಭಾವಚಿತ್ರ ಇರುವ ಕಟೌಟ್, ಟೀ-ಶರ್ಟ್‌ ಪಡೆದುಕೊಳ್ಳಲು ಜನರಿಂದ ತಳ್ಳಾಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts