More

    ವೈಜ್ಞಾನಿಕ ಮನೋಭಾವ ಹೆಚ್ಚಿಸಲಿದೆ ಗ್ರಹಗಳ ವೀಕ್ಷಣೆ

    ಮದ್ದೂರು: ಗ್ರಹ-ನಕ್ಷತ್ರ ಪುಂಜಗಳ ವೀಕ್ಷಣೆ ಗ್ರಾಮೀಣ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಹೆಚ್ಚಿಸುತ್ತದೆ ಎಂದು ಶ್ರೀ ವೆಂಕಟೇಶ್ವರ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಶಿವಮೂರ್ತಿ ಕೀಲಾರ ಹೇಳಿದರು.

    ಅಭಿನವ ಭಾರತಿ ಸಮೂಹ ಶಿಕ್ಷಣ ಟ್ರಸ್ಟ್ ಮತ್ತು ಆಸ್ಟ್ರೋ ಸ್ಟೇಲ್ಲಾರ್ಸ್ ಅಕಾಡೆಮಿ ಸಹಯೋಗದಲ್ಲಿ ತಾಲೂಕಿನ ಮೂಡಲದೊಡ್ಡಿ (ಶ್ರೀಪತಿ) ಗ್ರಾಮದಲ್ಲಿರುವ ಶ್ರೀ ವೆಂಕಟೇಶ್ವರ ವಿದ್ಯಾನಿಕೇತನ ಶಾಲೆಯಲ್ಲಿ ಬುಧವಾರ ಟೆಲಿಸ್ಕೋಪ್ ಮೂಲಕ ನಕ್ಷತ್ರ ಮತ್ತು ಮಂಗಳ, ಬುದ್ಧ, ಶನಿ ಗ್ರಹಗಳ ವೀಕ್ಷಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

    ಪ್ರಸ್ತುತ ಜಾಗತಿಕ ಪ್ರಪಂಚದಲ್ಲಿ ವೈಜ್ಞಾನಿಕ ವಿಚಾರ, ಆವಿಷ್ಕಾರ, ಸಂಶೋಧನೆಗಳು ನಡೆಯುತ್ತಿದ್ದು, ಇಂತಹ ವಿಜ್ಞಾನ- ತಂತ್ರಜ್ಞಾನ-ವೈಜ್ಞಾನಿಕ ವಿಷಯಗಳನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.

    ಗ್ರಾಮೀಣ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದು ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಲು ಇಂತಹ ಕಾರ್ಯಕ್ರಮಗಳು ಸ್ಫೂರ್ತಿ ನೀಡುತ್ತದೆ. ಅಖಂಡತೆಯ ವೈಜ್ಞಾನಿಕ ವಿಸ್ಮಯ ಕಣ್ಣೆದುರು ಕಂಡಾಗ ರೋಮಾಂಚನವಾಗುವುದರ ಜತೆಗೆ ತಂತ್ರಜ್ಞಾನದ ಬಗ್ಗೆ ಜ್ಞಾನ ಹೊಂದಬಹುದಾಗಿದೆ ಎಂದರು.

    ಪ್ರಸ್ತುತ ಗ್ರಾಮೀಣ ವ್ಯಾಪ್ತಿಯಲ್ಲಿ ಗುಣಮಟ್ಟದ ಶಿಕ್ಷಣ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ಸಿಗುತ್ತಿದ್ದು, ಪ್ರತಿ ಮಗುವಿಗೂ ತಂತ್ರಜ್ಞಾನದ ಶಿಕ್ಷಣ ಲಭ್ಯವಾಗಿ ಪ್ರತಿಭಾವಂತರನ್ನಾಗಿಸುವ ಕಾರ್ಯವನ್ನು ಶಾಲೆಗಳು ಮಾಡುತ್ತಿವೆ. ಈ ನಿಟ್ಟಿನಲ್ಲಿ ಸಂಸ್ಥೆ ಒಂದು ಹೆಜ್ಜೆ ಮುಂದುವರಿದಿದ್ದು, ಟೆಲಿಸ್ಕೋಪ್ ಮೂಲಕ ಆಕಾಶಕಾಯದಲ್ಲಿರುವ ಗ್ರಹಗಳನ್ನು ವಿದ್ಯಾರ್ಥಿಗಳಿಗೆ ವೀಕ್ಷಣೆ ಮಾಡಿಸಿದೆ ಎಂದರು.

    ಮಂಡ್ಯ ತಾಲೂಕಿನ ಕೀಲಾರ ಮತ್ತು ಈಚಗೆರೆ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಇದೇ ವೇಳೆ ಗ್ರಹ-ನಕ್ಷತ್ರಗಳನ್ನು ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ಆಸ್ಟ್ರೋ ಸ್ಟೇಲ್ಲಾರ್ಸ್ ಸಂಸ್ಥೆಯ ಪ್ರಜ್ವಲ್ ಮತ್ತು ಶಿವಪ್ರಕಾಶ್ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts