

ರಾಯಚೂರು: ಮೈಕ್ ಹಚ್ಚ ಬೇಡಿ ಎಂದು ಬುದ್ಧಿವಾದ ಹೇಳಲು ಬಂದ ದೇವದುರ್ಗದ ಲೇಡಿ ತಹಸೀಲ್ದಾರ್ಗೆ ಆವಾಜ್ ಹಾಕಿದ ಯುವಕರು, ಸುಪ್ರೀಂಕೋರ್ಟ್ ಕಾನೂನಿನ ಪಾಠ ಮಾಡಿದ್ದಾರೆ. ಆ ವಿಡಿಯೋ ವೈರಲ್ ಆಗಿದೆ.
ದೇವದುರ್ಗ ಪಟ್ಟಣದ ಶಾಂತಿ ನಗರದಲ್ಲಿ ಯುವಕರು ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ. ಮೂರ್ತಿ ಪ್ರತಿಷ್ಠಾಪನ ಸ್ಥಳದಲ್ಲಿ ಮೈಕ್ ಹಚ್ಚಿ ಹೆಚ್ಚು ಸೌಂಡ್ ಕೊಡಲಾಗಿತ್ತು. ಸೋಮವಾರ ಇಲ್ಲಿಗೆ ಬಂದ ಪ್ರಭಾರಿ ತಹಸೀಲ್ದಾರ್ ಸಂತೋಷಿ ರಾಣಿ ಅವರು ಮೈಕ್ ಬಳಸದಂತೆ ತಿಳಿಹೇಳಿದ್ದಾರೆ. ಇದಕ್ಕೆ ಬಗ್ಗೆ ಯುವಕರು ತಹಸೀಲ್ದಾರ್ ಅವರನ್ನೇ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿರಿ ಪೊಲೀಸ್ ಕಮಿಷನರ್ಗೆ ಡಿಕೆಶಿ ಅವಾಜ್!
ವರ್ಷದಲ್ಲಿ ಹನ್ನೊಂದು ದಿನ ಕೂರಿಸುವ ಗಣೇಶನಿಗೆ ನಿರ್ಬಂಧ ಹಾಕುವ ನೀವುಗಳು ಮಸೀದಿಯಲ್ಲಿ ವರ್ಷ ಪೂರ್ತಿ ಮೈಕ್ ಹಾಕಿ ಗದ್ದಲ ಮಾಡುವವರಿಗೆ ಏಕೆ ನಿರ್ಬಂಧ ಹಾಕಲ್ಲ? ಸುಪ್ರೀಂ ಕೋರ್ಟ್ ಆದೇಶ ಗೊತ್ತೈತಿ ನಿಮ್ಗೆ... ಎಂದು ಯುವಕರು ತಹಸೀಲ್ದಾರ್ರನ್ನು ತರಾಟೆಗೆ ತೆಗೆದುಕೊಂಡರು. ನಮ್ಮ ಮೇಲೆ ಕೇಸ್ ಫೈಲ್ ಮಾಡ್ತೀರಾ ಮಾಡಿ, ಗಣೇಶ ಪ್ರತಿಷ್ಠಾಪನೆ ವಿಚಾರವಷ್ಟೇ ನಿಮ್ಮ ಡ್ಯೂಟಿನಾ? ನಿಮಗೆ ಬೇರೆ ಕೆಲಸ ಇಲ್ವಾ? ಆ ಕೆಲಸಗಳನ್ನು ಮೊದಲು ಮಾಡಿ ಎಂದು ಆವಾಜ್ ಹಾಕಿದರು.
ಯುವಕರ ಆವಾಜ್ಗೆ ಸೈಲಂಟ್ ಆಗಿ ನಿಂತ ತಹಸೀಲ್ದಾರ್, ಸ್ಥಳಕ್ಕೆ ಪೊಲೀಸರನ್ನು ಕರೆಸಿದರು. ಪೊಲೀಸರ ಬಳಿಯೂ ಅರೆಸ್ಟ್ ವಾರೆಂಟ್ ಕೊಡ್ರೆ ನಾವೆಲ್ಲರೂ ಬರ್ತೇವೆ.. ನಾವು ಗಣೇಶ ಹಬ್ಬ ಮಾಡೋಕು ನೀವು ಯಾಕೆ ಅಡ್ಡಿ ಮಾಡೋದು? ನಾವು ನಮ್ಮ ಸಂಸ್ಕೃತಿಯನ್ನು ಆಚರಣೆ ಮಾಡುತ್ತಿದ್ದೇವೆ... ಎಂದು ಅವಾಜ್ ಹಾಕಿದರು. ಈ ವಿಡಿಯೋ ವೈರಲ್ ಆಗಿದೆ.