ಸಿನಿಮಾ

ಪ್ರಿಯಕರನ ಹೆಸರು ಬಯಲಿಗೆ: ಚಿಂತೆಗೀಡಾದ ನಟಿ

ಹೈದರಾಬಾದ್​: ಚಿತ್ರರಂಗದ ಅನೇಕ ಸಿನಿತಾರೆಯರು ತಮ್ಮ ವೈಯುಕ್ತಿಕ ಜೀವನದ ಬಗ್ಗೆ ಸಾರ್ವಜನಿಕರಿಂದ ಗುಟ್ಟಾಗಿಡಲು ಯತ್ನಿಸುತ್ತಾರೆ. ಈ ಕುರಿತು ಎಲ್ಲಿಯೂ ಹೇಳಿಕೊಳ್ಳವುದಿಲ್ಲ. ಆದರೆ, ಇಲ್ಲೊಬ್ಬ ಯುವನಟಿಯು ಮಾಡಿಕೊಂಡ ಯಡವಟ್ಟಿನಿಂದಾಗಿ ಆಕೆಯ ಪ್ರಿಯಕರನ ಹೆಸರು ಬೆಳಕಿಗೆ ಬಂದಿದೆ.

ತೆಲುಗಿನ ಖ್ಯಾತ ನಟಿ ಡಿಂಪಲ್ ಹಯಾತಿ ಇತ್ತೀಚಿಗೆ ಪಾರ್ಕಿಂಗ್​ ವಿಚಾರದಲ್ಲಿ ಐಪಿಎಸ್​ ಅಧಿಕಾರಿಯೊಬ್ಬರ ಜತೆಗೆ ಕಿರಿಕ್ ಮಾಡಿಕೊಂಡಿದ್ದರು. ಈ​ ಪ್ರಕರಣದಲ್ಲಿ ಆಕೆಯ ಬಾಯ್​ಫ್ರೆಂಡ್​ ಹೆಸರು ಬೆಳಕಿಗೆ ಬಂದಿದೆ. ಇದರಿಂದಾಗಿ ಆಕೆ ಮುಜುಗರವನ್ನು ಅನುಭವಿಸುವಂತಾಗಿದೆ.

ಇದನ್ನೂ ಓದಿ: ರೈಲ್ವೆ ಇಂಜಿನ್-ಬೋಗಿಗಳ ನಡುವೆ ತಪ್ಪಿದ ಸಂಪರ್ಕ..!

ಹಯಾತಿಯ ಬಾಯ್​ಫ್ರೆಂಡ್ ವಿಕ್ಟರ್ ಡೇವಿಡ್ ಹೆಸರು ಬಯಲಿಗೆ ಬಂದಿದ್ದು, ಇದು ಆಕೆಯನ್ನು ಚಿಂತೆಗೀಡು ಮಾಡಿದೆ. ಸುಮಾರು ವರ್ಷಗಳಿಂದ ಗುಟ್ಟಾಗಿಟ್ಟಿದ್ದ ವಿಚಾರ ಸದ್ಯ ಬಯಲಿಗೆ ಬಂದಿದ್ದು, ಇವರಿಬ್ಬರು ಸುಮಾರು ವರ್ಷಗಳಿಂದ ಸಂಬಂಧದಲ್ಲಿದ್ದರು ಎಂಬುದನ್ನು ಬಹಿರಂಗಪಡಿಸಿದೆ..

ಬಾಯ್​ಫ್ರೆಂಡ್ ಹೆಸರು ಲೀಕ್ ಆಗಿರುವ ಕಾರಣ ನಟಿ ಚಿಂತೆಗೊಳಗಾಗಿದ್ದು, ಈ ಬಗ್ಗೆ ಅನೇಕ ಟಿ-ಟೌನ್ ಜನರು ಆಕೆಗೆ ಬಾಯ್‌ಫ್ರೆಂಡ್ ವಿಷಯವನ್ನು ಏಕೆ ಪ್ರಸ್ತಾಪಿಸಲಿಲ್ಲ ಎಂದು ಆಕೆಗೆ ಕರೆ ಮಾಡಿದ್ದಾರೆಂದು ಹೇಳಲಾಗುತ್ತಿದೆ.(ಏಜೆನ್ಸೀಸ್​)

Latest Posts

ಲೈಫ್‌ಸ್ಟೈಲ್