ಸಿನಿಮಾ

ಗೋಮಾಂಸಯುಕ್ತ ಸಮೋಸಾ ಮಾರುತ್ತಿದ್ದ ವ್ಯಕ್ತಿ ಅರೆಸ್ಟ್​​

ಗುಜರಾತ್: ಉತ್ತರ ಭಾರತದ ಅತೀ ವಿಶೇಷವಾದ ತಿಂಡಿಗಳಲ್ಲಿ, ಜನಪ್ರಿಯವಾದ ತಿಂಡಿಗಳಲ್ಲಿ ಸಮೋಸಾ ಕೂಡಾ ಒಂದಾಗಿದೆ. ಸಮೋಸಾ ಎಂದರೆ ಹಲವರಿಗೆ ತುಂಬಾ ಇಷ್ಟ. ಹೀಗೆ ಗ್ರಾಹಕರಿಗೆ ಗೋಮಾಂಸ ತುಂಬಿರುವ ಸಾಮೋಸ ತಿನ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್​ ಪೊಲೀಸರು ಇಸ್ಮಾಯಿಲ್ ಯುಸೂಫ್​​​ನನ್ನು ಬಂಧಿಸಿದ್ದಾರೆ.

ಸೂರತ ಜಿಲ್ಲೆಯ ಕೋಸಾಡಿ ಗ್ರಾಮದಲ್ಲಿ ಖಾದ್ಯಪದಾರ್ಥಗಳ ಮಾರಾಟ ಮಾಡುತ್ತಿದ್ದ ಇಸ್ಮಾಯಿಲ್ ಯುಸೂಫ್​​ ಗೋಮಾಂಸ ತುಂಬಿದ್ದ ಸಾಮೋಸ ಮಾರುತ್ತಿದ್ದನು. ಖಚಿತ ಮಾಹಿತಿಯೆ ಮರೆಗೆ ಪೊಲೀಸರು ದಾಳಿ ಮಾಡಿ ಆರೋಪಿಯ ಜೆತೆಗೆ ಗೋಮಾಂಸವನ್ನು ತುಂಬಿದ ಸಮೋಸಾಗಳನ್ನು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಬೆಳಗಾಗುವಷ್ಟರಲ್ಲಿ ಕೋಟ್ಯಧಿಪತಿಯಾದ ಕೂಲಿ ಕಾರ್ಮಿಕ; 17 ರೂ. ಇದ್ದ ಬ್ಯಾಂಕ್ ಖಾತೆಯಲ್ಲೀಗ 100 ಕೋಟಿ ರೂ.!

ಗೋಮಾಂಸವಿದ್ದ ಸಾಮೋಸಗಳನ್ನು ತಯಾರಿಸಲು ಸುಲೇಮಾನ ಮತ್ತು ನಗೀನ ವಸಾವಾ ಇವರಿಂದ ಗೋಮಾಂಸವನ್ನು ಖರೀದಿಸುತ್ತಿದ್ದನೆಂದು ಒಪ್ಪಿಕೊಂಡಿದ್ದಾನೆ. ಕೊಸಾಡಿ ಗ್ರಾಮದ ನದಿ ದಡದ ಬಳಿ ಸುಲೇಮಾನ್ ಮತ್ತು ನಾಗೀನ್ ಗೋಹತ್ಯೆ ಮಾಡುತ್ತಾರೆ. ಅಲ್ಲಿಂದ ಮಾಂಸ ಖರೀದಿ ಮಾಡುತ್ತೇನೆಂದು ಮಾಹಿತಿ ನೀಡಿದ್ದಾನೆ. ಈ ಕುರಿತಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಫೋರೆನ್ಸಿಕ್ ವಿಜ್ಞಾನ ಪ್ರಯೋಗಶಾಲೆಯ ಅಧಿಕಾರಿಗಳು ನೀಡಿರುವ ಪ್ರಮಾಣಪತ್ರದಲ್ಲಿ ವಶಪಡಿಸಿಕೊಂಡಿರುವ ಸಾಮೋಸಗಳಲ್ಲಿ ಗೋಮಾಂಸವಿರುವುದು ದೃಢಪಟ್ಟಿದೆ. ತದನಂತರ ಗುಜರಾತ ಪೊಲೀಸರು ಆರೋಪಿಯ ವಿರುದ್ಧ ದೂರನ್ನು ದಾಖಲಿಸಿ ತನಿಖೆಯನ್ನು ಪ್ರಾರಂಭಿಸಿದ್ದಾರೆ.

ಕಲುಷಿತ ನೀರು ಸೇವಿಸಿ 30ಕ್ಕೂ ಹೆಚ್ಚು ಜನ ಅಸ್ವಸ್ಥ

Latest Posts

ಲೈಫ್‌ಸ್ಟೈಲ್