ವೃದ್ಧನ ಪ್ರೀತಿಯ ಬಲೆಯಲ್ಲಿ ಬಿದ್ದ ಯುವತಿ! ಆಕೆ ಕೊಟ್ಟ ಕಾರಣ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಚಿತ | Young Girl Loves Old Man

Young Girl Loves Old Man
Published on

Young Girl Loves Old Man : ಸಾಮಾನ್ಯವಾಗಿ ಕೆಲ ಯುವಕರು ಆಂಟಿಯರ ಕಡೆಗೆ ಆಕರ್ಷಿತರಾಗುತ್ತಾರೆ ಎಂದು ಹೇಳುತ್ತಾರೆ. ಆದರೆ, ಯುವತಿಯರು ಈ ವಿಚಾರದಲ್ಲಿ ವಿಭಿನ್ನರು. ತಮ್ಮ ಸಮನಾದ ವಯಸ್ಸಿನ ಅಥವಾ ತಮಗಿಂತ ನಾಲ್ಕು ಅಥವಾ ಐದು ವರ್ಷ ದೊಡ್ಡವರ ಜತೆ ಸಂಬಂಧದಲ್ಲಿರಲು ಬಯಸುತ್ತಾರೆ. ಬಹುತೇಕ ಯುವತಿಯರು ವಯಸ್ಸಾದವರನ್ನು ಇಷ್ಟಪಡುವುದಿಲ್ಲ.

ಆದರೆ, ಕೆಲವು ಮಹಿಳೆಯರು ಇತರ ಹುಡುಗಿಯರಿಗಿಂತ ಭಿನ್ನವಾಗಿ ವರ್ತಿಸುತ್ತಾರೆ. ಆಸ್ಟ್ರೇಲಿಯಾದ ಮೆಲ್ಬೋರ್ನ್ ಮೂಲದ ಮಾಡೆಲ್ ನೋವಾ ಹಾಥಾರ್ನ್ (29) ಅಂತಹ ವರ್ಗಕ್ಕೆ ಸೇರಿದ್ದಾರೆ. ಈ ಸುಂದರಿ ತನಗಿಂತ 34 ವರ್ಷ ದೊಡ್ಡವನಾದ ಜೇಮ್ಸ್​ ಎಂಬಾತನನ್ನು ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದಾಳೆ.

Nova Hawthorne 1

ಅಂದಹಾಗೆ ಇವರಿಬ್ಬರೂ ಆನ್‌ಲೈನ್‌ನಲ್ಲಿ ಭೇಟಿಯಾದರು. ಜೇಮ್ಸ್ ತನಗೆ ಉಡುಗೊರೆಗಳನ್ನು ನೀಡುವ ಮೂಲಕ ನನ್ನಲ್ಲಿ ವಿಶೇಷ ಭಾವನೆ ಮೂಡಿಸುತ್ತಿದ್ದರು. ಅಲ್ಲದೆ, ಆಗಾಗ ಸರ್ಪ್ರೈಸ್​ ನೀಡುತ್ತಿದ್ದರು. ಅದಕ್ಕಾಗಿಯೇ ನಾನು ಅವನನ್ನು ಪ್ರೀತಿಸಲು ಶುರು ಮಾಡಿದೆ. ಕಾಲಕ್ರಮೇಣ ಇಬ್ಬರ ನಡುವೆ ಉತ್ತಮ ಸಂಬಂಧ ಬೆಳೆದಿದ್ದು, ಈಗ ವಯಸ್ಸಿನ ಅಂತರವು ತಮ್ಮ ಸಂಬಂಧದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎನ್ನುತ್ತಾರೆ ನೋವಾ.

ನಾವು ಮೊದಲು ಭೇಟಿಯಾದ ದಿನದಿಂದ, ನಾವು ಅದ್ಭುತವಾದ ಬಾಂಧವ್ಯವನ್ನು ಹೊಂದಿದ್ದೇವೆ. ಜೇಮ್ಸ್​ ಅವರು ನನ್ನನ್ನು ತುಂಬಾ ಅರ್ಥಮಾಡಿಕೊಂಡಿದ್ದಾರೆ. ನಾವೀಗ ಒಬ್ಬರಿಗೊಬ್ಬರು ಪರಿಪೂರ್ಣರಾಗಿದ್ದೇವೆ. ತನಗಿಂತ ದೊಡ್ಡವನಾದ ಜೇಮ್ಸ್ ಜತೆ ಆರಂಭದ ದಿನಗಳಲ್ಲಿ ಪ್ರಮುಖ ವಿಷಯಗಳನ್ನು ಆಗಾಗ ಚರ್ಚಿಸುತ್ತಿದ್ದೆ. ಇದರಿಂದಲೇ ಜೇಮ್ಸ್ ತುಂಬಾ ಒಳ್ಳೆಯ ಹೃದಯದ ವ್ಯಕ್ತಿ ಮತ್ತು ಆತ ತನಗೆ ಸರಿಯಾದ ವ್ಯಕ್ತಿ ಎಂದು ಅರಿತುಕೊಂಡೆ. ಜೇಮ್ಸ್​ ಬುದ್ಧಿವಂತಿಕೆ ಮತ್ತು ದಯೆ ನನ್ನನ್ನು ಆಕರ್ಷಿಸಿತು ಎಂದು ನೋವಾ ಹೇಳಿದ್ದಾರೆ.

Nova Hawthorne 2

ತನಗಿಂತ ಹೆಚ್ಚು ವಯಸ್ಸಾದ ವ್ಯಕ್ತಿಯನ್ನು ಪ್ರೀತಿಸುವುದರಲ್ಲಿ ಯಾವುದೇ ನೋವಿಲ್ಲ. ಜೇಮ್ಸ್​ನಲ್ಲಿ ನಾನು ದೊಡ್ಡ ಸಂತೋಷವನ್ನು ಕಂಡುಕೊಂಡಿದ್ದೇನೆ. ಆತ ತುಂಬಾ ಪ್ರಬುದ್ಧ ಮತ್ತು ನಿಜವಾದ ಮನುಷ್ಯನಂತೆ ವರ್ತಿಸುತ್ತಾನೆ. ಟ್ರಾಫಿಕ್ ಸಮಸ್ಯೆ ಬಗ್ಗೆ ದೂರು ನೀಡುವುದನ್ನು ಹೊರತುಪಡಿಸಿ, ಆತ ಯಾವಾಗಲೂ ತುಂಬಾ ಶಾಂತವಾಗಿರುತ್ತಾನೆ. ಅವನು ತುಂಬಾ ಪ್ರಾಮಾಣಿಕ ಮತ್ತು ಆತ ಭಾವನೆಗಳೊಂದಿಗೆ ಆಟವಾಡುವುದಿಲ್ಲ. ನನಗೆ ಆತ ಶಿಕ್ಷಕನ ರೀತಿ. ಅವನಿಂದಲೇ ನಾನು ಆತ್ಮವಿಶ್ವಾಸವನ್ನು ಪಡೆದೆ ಮತ್ತು ಹೇಗೆ ಬದುಕಬೇಕೆಂದು ಕಲಿತೆ. ಆತ ನನಗೆ ನೀಡಿದ ಅತ್ಯಮೂಲ್ಯ ಉಡುಗೊರೆ ಅಂದರೆ ಅದು ಜ್ಞಾನ ಎಂದು ನೋವಾ ಹೇಳುತ್ತಾರೆ. ಸದ್ಯ ಇವರಿಬ್ಬರ ಪ್ರೇಮ ಪ್ರಕರಣ ಭಾರಿ ವೈರಲ್​ ಆಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net