ಬ್ಯಾಂಕಿಂಗ್ ವ್ಯವಸ್ಥೆ ದಿನೇದಿನೆ ಸರಳವಾಗುತ್ತಿದೆ. ಗ್ರಾಹಕರ ಹಿತದೃಷ್ಠಿಯಿಂದ ಅವರಿಗೆ ಅನುಕೂಲವಾಗಲು ಕೆಲ ಬ್ಯಾಂಕ್ಗಳು ಹಣಕಾಸು ಸೇವೆ ಒದಗಿಸಲು ಹೊಸ ಮತ್ತು ಸರಳಿಕೃತ ತಂತ್ರಜ್ಞಾನವನ್ನು ಬಳಸುತ್ತವೆ. ಇದೀಗ ಸೌತ್ ಇಂಡಿಯನ್ ಬ್ಯಾಂಕ್(ಎಸ್ಐಬಿ) SIB ಕ್ವಿಕ್ FD ಎಂಬ ಹೊಸ ಯೋಜನೆಯನ್ನು ಜಾರಿ ಮಾಡಿದೆ. ಇದರಲ್ಲಿ ಯಾರೂ ಬೇಕಾದರೂ ಸ್ಥಿರ(Fixed Deposit) ಠೇವಣಿ ಇಡಬಹುದು.ಈ ಪ್ರಕ್ರಿಯೆ ತುಂಬಾ ಸರಳವಾಗಿದ್ದು, ಹೇಗೆಂಬುದು ತಿಳಿಯೋಣ.
ಇದನ್ನೂ ಓದಿ:ಕುತ್ತಿಗೆ-ತಲೆ ನೋವನ್ನು ನಿರ್ಲಕ್ಷಿಸುತ್ತಿದ್ದೀರಾ?; ಎಚ್ಚರದಿಂದಿರಿ.. ಇದು ಅಪಾಯದ ಮುನ್ಸೂಚನೆ | Health Tips
ಬ್ಯಾಂಕ್ ಖಾತೆ ಇಲ್ಲದಿದ್ದರೂ FD
SIB ಕ್ವಿಕ್ FD ಹೊಸ ಯೋಜನೆಯಡಿಯಲ್ಲಿ ನೀವು ಠೇವಣಿ ಇಡಲು ಸೌತ್ ಇಂಡಿಯನ್ ಬ್ಯಾಂಕ್ನ ಅಕೌಂಟ್ ಹೊಂದಿರುವವರು ಮಾತ್ರವಲ್ಲ, ಇಲ್ಲಿ ಬೇರೆ ಯಾರದರೂ ಕೂಡ ಠೇವಣಿ ಇಡಬಹುದು. ಅಂದರೆ, ಬ್ಯಾಂಕ್ ಖಾತೆ ಹೊಂದಿಲ್ಲದವರಿಗೂ ಇದು ಅನುಮತಿಸುತ್ತದೆ.
ಈ ಪ್ರಕ್ರಿಯೆಯು ತುಂಬಾ ಸರಳವಾಗಿದೆ. ಎಲ್ಲವನ್ನೂ ಆನ್‌ಲೈನ್‌ನಲ್ಲಿ ಮಾಡಬಹುದು. KYC ಸಲ್ಲಿಸುವುದು ಒಂದೇ ಪ್ರಮುಖ ಕೆಲಸ. ನಿಮ್ಮ ಪ್ಯಾನ್ ಮತ್ತು ಆಧಾರ್ ದಾಖಲೆಗಳ ಆನ್‌ಲೈನ್ ಪ್ರತಿ ಸಿದ್ಧವಾಗಿದ್ದರೆ, ನೀವು ಕೇವಲ ಐದು ನಿಮಿಷಗಳಲ್ಲಿ SIB ಯೊಂದಿಗೆ ಸ್ಥಿರ ಠೇವಣಿ ಯೋಜನೆಯನ್ನು ಪ್ರಾರಂಭಿಸಬಹುದು.
ಇದನ್ನೂ ಓದಿ:ಕೇಂದ್ರ ಸರ್ಕಾರದಿಂದ ಕರ್ನಾಟಕದ 70000 ತಂಬಾಕು ಬೆಳೆಗಾರರಿಗೆ ನೆರವು ಘೋಷಣೆ|Tobacco Growers
UPI ಮೂಲಕ ಹಣ ಸಂದಾಯ
ನೀವು ಯಾವುದೇ ಸಮಯದಲ್ಲೂ ಆನ್‌ಲೈನ್‌ನಲ್ಲಿ SIB ಕ್ವಿಕ್ FD ತೆರೆಯಬಹುದು. ಅಲ್ಲದೆ, ಆನ್‌ಲೈನ್ ಮೂಲಕ ಯಾವುದೇ UPI ಮತ್ತು ಬ್ಯಾಂಕ್ ಮೂಲಕ ನೇರವಾಗಿ ಹಣ ಸಂದಾಯ ಮಾಡಬಹುದು. FDಗೆ ಕನಿಷ್ಠ ಮೊತ್ತ 1,000 ರೂ. ಠೇವಣಿ ಇಡಬಹುದು. ನಿಮ್ಮ ವಿವಿಧ ಅಗತ್ಯಗಳಿಗೆ ಇದು ಅನುಕೂಲಕರವಾಗಿದೆ. ಠೇವಣಿಯ ಮೇಲಿನ ಬಡ್ಡಿಯೂ ಆಕರ್ಷಕವಾಗಿದೆ. ಗಡುವಿನ ಮೊದಲು ಠೇವಣಿಗಳನ್ನು ಹಿಂಪಡೆಯಲು ಅವಕಾಶಗಳಿವೆ. ಐದು ಲಕ್ಷ ರೂಪಾಯಿಗಳವರೆಗಿನ ಮೊತ್ತಕ್ಕೆ ವಿಮಾ ರಕ್ಷಣೆಯೂ ಇದೆ.(ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ.
ಮ್ಯಾರೇಜ್ಗೆ ಸರಿಯಾದ ವಯಸ್ಸೇಷ್ಟು ಗೊತ್ತೆ?; ತಡವಾಗಿ ಮದುವೆಯಾಗುವುದರಿಂದ ಅನುಕೂಲ, ಅನಾನೂಕುಲಗಳೇನು? | Marriage