marriage: ಕೆಲ ದಶಕಗಳ ಹಿಂದೆ ಬಾಲ್ಯ ವಿವಾಹ ನಡೆಯುವುದು ಸಾಮಾನ್ಯವಾಗಿತ್ತು. ಬಳಿಕ ಕಾನೂನು ಕಣ್ತಪ್ಪಿಸಿ ಕದ್ದು ಮುಚ್ಚಿ ಚಿಕ್ಕ ಮಕ್ಕಳಿಗೆ ಮದುವೆ ಮಾಡಿದರು. ಕಾಲ ಕಳೆದಂತೆ ವಧುವಿಗೆ 18 ಮತ್ತು ವರನಿಗೆ 21 ತುಂಬಿದ ಮೇಲೆ ವಿವಾಹವಾಗುತ್ತಿತ್ತು. ಆದರೀಗ, 25ರಿಂದ 30 ವಯಸ್ಸದಾದರೂ ಇನ್ನು ಮದುವೆಯ ಬಗ್ಗೆ ಇಂದಿನ ಯುವ ಜನಾಂಗ ಚಿಂತಿಸುತ್ತಿಲ್ಲ. ಆದಕ್ಕೆ ಕಾರಣ, ವಿದ್ಯೆ ಮತ್ತು ಅರಿವು ಎಂದು ಹೇಳಬಹುದು.
ಕೆಳದೆ ಕೆಲ ವರ್ಷಗಳಿಂದೆ ಒಂದು ವೇಳೆ 20ರಿಂದ 25ರೊಳಗೆ ಮದುವೆಯಾಗದಿದ್ದರೆ ಪಾಲಕರು ಒತ್ತಡ ಹೇರುತ್ತಿದ್ದರು. ಅಲ್ಲದೇ, ಸಾಮಾಜಿಕವಾಗಿ(ಸಂಬಂಧಿಕರು, ಗೆಳಯರು) ಒತ್ತಡ ಕೂಡ ಎದುರಿಸಬೇಕಾಗುತ್ತಿತ್ತು. ಆದರೆ, ಕೆಲ ವರ್ಷಗಳಿಂದ ಮದುವೆ ವಯಸ್ಸಿನ ಮೀತಿ ಹೆಚ್ಚಳವಾಗುತ್ತಿದೆ.ಇದರ ಇಂದಿನ ಕಾರಣ ಅರಿವು. ಈಗ ಅನೇಕ ಯುವಕರು ವೃತ್ತಿಜೀವನದಲ್ಲಿ ಯಶಸ್ವಿಯಾಗದೇ ಮದುವೆಯಾಗಲು ಬಯಸುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ, ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸುವುದಾಗಿದೆ. ಆದರೆ, ತಡವಾಗಿ ಮದುವೆಯಾಗುವುದರಿಂದ ಕೆಲ ಅನುಕೂಲ ಮತ್ತು ಅನಾನುಕೂಲಗಳು ಕೂಡ ಇವೆ.
ಅನುಕೂಲಗಳು..?
ವೃತ್ತಿಜೀವನದ ಸುಧಾರಿಸಲು ಸಾಕಷ್ಟು ಸಮಯ
ತಡವಾಗಿ ಮದುವೆಯಾಗುವುದರಿಂದ ವೃತ್ತಿ ಜೀವನದ ಸುಧಾರಿಸಲು ಸಾಕಷ್ಟು ಸಮಯ ಸಿಗುತ್ತದೆ. ಇದರಿಂದ ತನ್ನನ್ನು ತಾನು ಅಧ್ಯಯನ ಮಾಡಲು ಮತ್ತು ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಅವನು/ ಯಾರನ್ನೂ ಅವಲಂಭಿಸುವುದಿಲ್ಲ.
ಆರ್ಥಿಕ ಸ್ಥಿತಿ ಸುಧಾರಿಸಲು ಸಮಯ
ಮದುವೆ ನಂತರ ಜವಾಬ್ದಾರಿಗಳು ಹೆಚ್ಚಾಗುತ್ತದೆ. ಇದರಿಂದ ತನ್ನ ಕಾಲ ಮೇಲೆ ತಾನು ನಿಲ್ಲುವುದು ಮುಖ್ಯ. ಹೀಗಾಗಿ, ತಡವಾಗಿ ಮದುವೆಯಾಗುವುದರಿಂದ ತನ್ನ ಆರ್ಥಿಕ ಸ್ಥಿತಿ ಸುಧಾರಿಸಲು ಮತ್ತು ಗಳಿಸಲು ಸಮಯ ಸಿಕ್ಕುತ್ತದೆ.
ಕನಸು ನನಸಾಗಿಸಲು ಅವಕಾಶ
ತಡವಾಗಿ ಮದುವೆಯಾಗುವುದರ ದೊಡ್ಡ ಪ್ರಯೋಜನವೆಂದರೆ ಒಬ್ಬ ವ್ಯಕ್ತಿಗೆ ತನ್ನ ಕನಸುಗಳನ್ನು ನನಸಾಗಿಸಲು ಸಾಕಷ್ಟು ಸಮಯ ಸಿಗುತ್ತದೆ. ಇದರಲ್ಲಿ ಪ್ರಯಾಣ, ಅಧ್ಯಯನದಲ್ಲಿ ಯಶಸ್ಸು ಸಾಧಿಸುವುದು ಅಥವಾ ಒಂದು ನಿರ್ದಿಷ್ಟ ಕ್ಷೇತ್ರದಲ್ಲಿ ನಿಮಗಾಗಿ ಹೆಸರು ಗಳಿಸುವುದು ಸೇರಿವೆ.
ಸಂಬಂಧದ ಬಗ್ಗೆ ಉತ್ತಮ ತಿಳುವಳಿಕೆ
ಒಬ್ಬ ವ್ಯಕ್ತಿಯು ತಡವಾಗಿ ಮದುವೆಯಾದಾಗ, ಸಂಬಂಧಗಳ ಬಗೆಗಿನ ಅವನ ಆಲೋಚನೆ ಮತ್ತು ವರ್ತನೆ ಬದಲಾಗುತ್ತದೆ. ಸಂಬಂಧದಲ್ಲಿನ ಯಾವುದೇ ರೀತಿಯ ಸಮಸ್ಯೆಯನ್ನು ಶಾಂತವಾಗಿ ಮತ್ತು ಬುದ್ಧಿವಂತಿಕೆಯಿಂದ ಪರಿಹರಿಸಲು ಅವನು ಕಲಿಯುತ್ತಾನೆ.
ಅನಾನುಕೂಲಗಳೇನು..?
ಮಹಿಳೆಯರು ಗರ್ಭಧರಿಸುವಲ್ಲಿ ವಿಳಂಬ
ತಡವಾಗಿ ಮದುವೆಯಾಗುವುದರಿಂದ ಮಹಿಳೆಯರ ದೇಹದಲ್ಲಿ ಹಾರ್ಮೋನ್ಗಳ ಬದಲಾವಣೆಯಾಗುತ್ತದೆ.ಇದು ಗರ್ಭವ್ಯವಸ್ಥೆಯಲ್ಲಿ ಸಮಸ್ಯೆಗಳನ್ನು ಹುಟ್ಟುಹಾಕಬಹುದು. ಅಲ್ಲದೆ, ಗರ್ಭಧಾರಣೆ ಸಮಸ್ಯೆ ಉಂಟಾಗುವುದು.
ಸಂಗಾತಿ ಹುಡುಕುವಲ್ಲಿ ಸಮಸ್ಯೆ
ಮದುವೆಗೆ ಲೇಟ್ ಅದಂತೆ ಸಂಗಾತಿಯನ್ನು ಹುಡುಕು ಸಮಸ್ಯೆಯಾಗುತ್ತದೆ. ನಮ್ಮ ವಯಸ್ಸಿಗೆ ತಕ್ಕಂತೆ ಹುಡುಗಿ/ಹುಡುಗಿ ಸಿಗಲು ಕಷ್ಟವಾಗುತ್ತದೆ.
ದೈಹಿಕ ಅನ್ಯೋನ್ಯತೆ ಕಡಿಮೆ
ವಯಸ್ಸಾದಂತೆ ದೈಹಿಕ ಶಕ್ತಿ ಕುಂದುತ್ತದೆ. ಇದರಿಂದ ಇಬ್ಬರ ದೈಹಿಕಸುಖದಲ್ಲಿ ಅನ್ಯೋನ್ಯತೆ ಕಡಿಮೆಯಾಗುತ್ತದೆ. ಇದು ಇಬ್ಬರ ಸಂಬಂಧ ಮೇಲೂ ಪರಿಣಾಮ ಬೀರುತ್ತದೆ.
ವಯಸ್ಸಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು
ವಯಸ್ಸು ಹೆಚ್ಚಾದಂತೆ, ಅನೇಕ ರೀತಿಯ ರೋಗಗಳ ಅಪಾಯವು ಹೆಚ್ಚಾಗುತ್ತದೆ. ತಡವಾಗಿ ಮದುವೆಯಾದ ನಂತರ ಒಬ್ಬ ವ್ಯಕ್ತಿಗೆ ಯಾವುದೇ ಆರೋಗ್ಯ ಸಮಸ್ಯೆ ಎದುರಾದರೆ ಅದು ಸಂಗಾತಿಗಳು ಮತ್ತು ಅವರ ಕುಟುಂಬಗಳಿಗೆ ಸವಾಲಾಗಿ ಪರಿಣಮಿಸಬಹುದು.
ಸಾಮಾನ್ಯವಾಗಿ ಮದುವೆಗೆ ಹುಡುಗಿಗೆ 21 ಮತ್ತು ಹುಡುಗನಿಗೆ 25 ವಯಸ್ಸಿರಬೇಕು ಎಂದು ತಜ್ಞರು ಹೇಳುತ್ತಾರೆ.(ಏಜೆನ್ಸೀಸ್)