ಲಕ್ಷಗೀತಾ ಲೇಖನ ಸಮರ್ಪಣೆಗೆ ಸಿಎಂ ಆದಿತ್ಯನಾಥ್ ಗೆ ಆಹ್ವಾನ

yogi
Published on

ಉಡುಪಿ: ಪರ್ಯಾಯ ಪುತ್ತಿಗೆ  ಮಠಾಧೀಶರಾದ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ್ಮ ಚತುರ್ಥ ಕೃಷ್ಣಪೂಜಾ ಸೇವೆಯ ನಿಮಿತ್ತ ಕೋಟಿ ಗೀತಾ ಲೇಖನ ಯಜ್ಞ ಹಮ್ಮಿಕೊಂಡಿದ್ದಾರೆ. ಇದರ ಮೊದಲ ಹಂತವಾಗಿ ಲಕ್ಷ ಗೀತಾ ಲೇಖನಗಳ ಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಮಂಗಳವಾರ ಆಹ್ವಾನಿಸಲಾಯಿತು.

 ಪುತ್ತಿಗೆ  ಶ್ರೀಗಳ ಸೂಚನೆಯಂತೆ ಪರ್ಯಾಯ ಸಮಿತಿಯ ಕಾರ್ಯಾಧ್ಯಕ್ಷ, ಮಾಜಿ ಶಾಸಕ ಕೆ. ರಘುಪತಿ ಭಟ್ ಅವರು ಲಕ್ನೋದಲ್ಲಿ ಸಿಎಂ ಆದಿತ್ಯನಾಥ್  ಅವರನ್ನು ಭೇಟಿ ಮಾಡಿ, ಶ್ರೀಗಳ ಬಿನ್ನಹ ಅರ್ಪಿಸಿ,  ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ವಿನಂತಿಸಿದರು.

 ಈ ಸಂದರ್ಭದಲ್ಲಿ ಯೋಗೀಜಿ ಪುತ್ತಿಗೆ ಶ್ರೀಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಕೋಟಿಗೀತಾ ಲೇಖನ ಯಜ್ಞದ ಪುಣ್ಯದ ಕಾರ್ಯವನ್ನು ಮುಕ್ತವಾಗಿ ಪ್ರಶಂಸಿಸಿದರು. ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು. 

ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳ ಆಪ್ತ ಕಾರ್ಯದರ್ಶಿ ವಾಸುದೇವ ಭಟ್ ಪೆರಂಪಳ್ಳಿ , ಬಿಜೆಪಿ ಪ್ರಮುಖರಾದ ಮಹೇಶ್ ಠಾಕೂರ್ , ಸುವರ್ಧನ್ ನಾಯಕ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net