

ಲಂಡನ್: ಬ್ರಿಟನ್ ಮೂಲದ ಬೆತ್ತಲೆ ಯೋಗ ಶಿಕ್ಷಕಿಯೊಬ್ಬಳು ತನ್ನ ಐಷಾರಾಮಿ ಜೀವನವನ್ನು ಬಿಟ್ಟು ದೂರದ ಹಾಗೂ ತಂತ್ರಜ್ಞಾನ ಮರೀಚಿಕೆಯಾಗಿರುವ ಅಮೇಜಾನ್ ದಟ್ಟಾರಣ್ಯದಲ್ಲಿ ತನ್ನ ಟಾಯ್ಬಾಯ್ (ಮಹಿಳೆಗಿಂದ ಪ್ರಿಯಕರನ ವಯಸ್ಸು ಕಡಿಮೆ ಇರುವುದು) ಲವ್ವರ್ ಜತೆ ವಾಸವಿದ್ದಾಳೆ. ವಿಶೇಷವೆಂದರೆ, ಚಾಕೋಲೆಟ್ ಕೃಷಿಕನಾಗಿರುವ ಟಾಯ್ಬಾಯ್ ಮೊದಲ ಪರಿಚಯವಾಗಿ ಕೇವಲ ಹತ್ತು ದಿನಗಳಷ್ಟೇ ಕಳೆದಿದೆ.
ವಿವರಣೆಗೆ ಬರುವುದಾದರೆ ಬ್ರಿಟನ್ ನಿವಾಸಿ ಕರೊಲಿನ್ ನೈಟ್ (33) ಪ್ರಸ್ತುತ ಆಕೆ ಹರಿಯುವ ನೀರಿಲ್ಲದ ಹಾಗೂ ನಾಗರಿಕತೆಯಿಂದ 70 ಮೈಲಿ ದೂರವಿರುವ ಅಮೆಜಾನ್ ಕಾಡಿನಲ್ಲಿ 19 ವರ್ಷದ ಟಾಯ್ಬಾಯ್ ಲವ್ವರ್ ರಾಮುಲೋ ಎಲಿಯರ್ ಹುವಾಮನ್ ರೋಕ್ ಜತೆಗಿದ್ದಾಳೆ. ರಾಮುಲೋ ಪೆರುವಿಯನ್ ಮೂಲದ ಕೊಕೋ ರೈತನಾಗಿದ್ದಾನೆ. ಕಾಡಿನ ಉಷ್ಣಾಂಶ, ಅತಿಯಾದ ಕೀಟಗಳನ್ನು ಲೆಕ್ಕಿಸದ ಕರೊಲಿನ್, ರಾಮುಲೋ ಪ್ರೀತಿಯಲ್ಲಿ ಬಿದ್ದ ನಂತರ ಜೀವನವು ಸಿಹಿಯಾಗಿರಲು ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾಳೆ.
ಕರೊಲಿನ್ ಆಕ್ಸ್ಫರ್ಡ್ ಮೂಲದವಳು. ಲಂಡನ್ನ ಟ್ರೆಂಡಿ ಸ್ಟೋಕ್ ನ್ಯೂವಿಂಗ್ಟನ್ನಲ್ಲಿ ಬೆತ್ತಲೆ ಯೋಗ ತರಗತಿಗಳು ಮತ್ತು ಮಸಾಜ್ ಥೆರಪಿ ಮಾಡುವ ಮೂಲಕ ಜೀವನ ನಡೆಸುತ್ತಿದ್ದಳು. ಲಂಡನ್ನಲ್ಲಿ ಮೊದಲ ಲಾಕ್ಡೌನ್ ಹೇರುವುದಕ್ಕೂ ಮುನ್ನವೇ ಕರೊಲಿನ್ ಯುಕೆಯಿಂದ ಪೆರುಗೆ ಹಾರಿದ್ದಳು. 2020ರ ಮಾರ್ಚ್ನಲ್ಲಿ 10 ದಿನಗಳ ಯೋಗ ತರಬೇತಿ ನೀಡಲೆಂದು ದಕ್ಷಿಣ ಅಮೆರಿಕಕ್ಕೆ ಹಾರಿದ್ದಳು. ಸ್ನೇಹಿತರೊಬ್ಬರ ಆಹ್ವಾನದ ಮೇರೆಗೆ ಪೋರ್ಟೊ ಮಾಲ್ಡೊನಾಡೊ ಬಳಿ ಇರುವ ಹೊಜಾ ನುವಾದಲ್ಲಿ ಯೋಗ ತರಬೇತಿ ನೀಡುತ್ತಿದ್ದಳು.
ಪೆರುವಿಗೆ ಬಂದು ಇಳಿದಾಗಲೇ ಅದರ ಪ್ರಕೃತಿ ಸೌಂದರ್ಯಕ್ಕೆ ಮಾರು ಹೋಗಿದ್ದ ಕರೊಲಿನ್, ಬಿಡುವಿನ ವೇಳೆಯಲ್ಲಿ ಬೋಟ್ ಸವಾರಿ ಮತ್ತು ಚಾರಣ ಮಾಡುತ್ತಿದ್ದಳು. ಅಲ್ಲದೆ, ಪೆರು ದೇಶದ ಬಗ್ಗೆ ಇನ್ನಷ್ಟು ತಿಳಿಯುವ ಉದ್ದೇಶದಿಂದ ಹೆಚ್ಚು ದಿನ ಅಲ್ಲಿಯೇ ಉಳಿಯಲು ತೀರ್ಮಾನಿಸಿದಳು.
ಇದರ ನಡುವೆ ಅಲ್ಲಿಯೇ ಪ್ರಾಣಿಗಳನ್ನು ನೋಡಿಕೊಳ್ಳುತ್ತಾ ಕೈಯಾಳಾಗಿ ದುಡಿಯುತ್ತಿದ್ದುದ್ದನ್ನು ಕರೊಲಿನ್ ಗಮನಿಸಿದ್ದಾಳೆ. ಅಲ್ಲದೆ, ಆತನ ಪರಿಚಯವಾಗಿದೆ. ಬಳಿಕ ಸ್ನೇಹಿತರ ಜತೆಗೂಡಿ ಸುತ್ತಾಡುವಾಗ ರಾಮುಲೋನನ್ನು ಜತೆಯಲ್ಲಿ ಕರೆದೊಯ್ದಿದ್ದರು. ಆತ ತುಂಬಾ ನಾಚಿಕೆ ಸ್ವಭಾವದವನು ಮತ್ತು ನಾನು ಹೆಲೋ ಎಂದು ಹೇಳಿದಾಗಲೆಲ್ಲ ನಾಚಿಕೆಯಿಂದಲೇ ತನ್ನ ಕಣ್ಣುಗಳಿಂದ ನೆಲದತ್ತ ನೋಡುತ್ತಿದ್ದ ಎಂದು ಕರೊಲಿನ್ ಹೇಳಿದ್ದಾರೆ.
ಹೀಗಿರುವಾಗ ಒಮ್ಮೆ ಕ್ಯಾಂಪ್ನಲ್ಲಿ ಇಬ್ಬರು ಪರಸ್ಪರ ಮಾತನಾಡುವಾಗ ರಾಮುಲೋ ಓರ್ವ ಉತ್ತಮ ಮತ್ತ ಒಳ್ಳೆಯ ವ್ಯಕ್ತಿ ಎಂದು ಅನಿಸಿತು. ಇದಾದ ಬೆನ್ನಲ್ಲೇ ನಾನು ಆತನ ಕುರಿತಾಗಿ ಹೊಂದಿದ್ದ ಭಾವನೆಗಳು ಸ್ಪಷ್ಟವಾಗಿ ಹೇಳುವುದಕ್ಕಿಂತ ಅರ್ಥಗರ್ಭಿತವಾಗಿವೆ ಅನಿಸಿತು. ಹೀಗಿರುವಾಗ ಪೆರುವಿನಲ್ಲೂ ಸಹ ಕರೊನಾ ಲಾಕ್ಡೌನ್ ಘೋಷಣೆ ಮಾಡಿದರು. ಅಲ್ಲದೆ, 12 ಜನರ ನಮ್ಮ ತಂಡಕ್ಕೆ ಅಲ್ಲಿಯೇ ಉಳಿಯಲು ಅಥವಾ 70 ಮೈಲಿ ದೂರದ ಪೋರ್ಟೊ ಮಾಲ್ಡೊನಾಡೊವಿನಲ್ಲಿ ಉಳಿಯುವ ಎರಡು ಆಯ್ಕೆಯನ್ನು ನೀಡಿದರು. ಆದರೆ, ನಾನು ನನ್ನ ಮನಸ್ಸು ಹೇಳಿದಂತೆ ಕೇಳುವುದಾದರೂ ಬದುಕುಳಿಯುವ ದೃಷ್ಠಿಯಿಂದ ಪೋರ್ಟೊ ಮಾಲ್ಡೊನಾಡೊವಿನಲ್ಲಿ ಉಳಿದುಕೊಂಡೆ. ಆದರೂ ನನ್ನ ಮನಸ್ಸು ರಾಮುಲೋ ಕಡೆ ಸೆಳೆಯುತ್ತಿತ್ತು ಎಂದು ಕೆರೊಲಿನ್ ಹೇಳಿಕೊಂಡಿದ್ದಾಳೆ.
ಹೀಗೆ ಹತ್ತು ದಿನಗಳ ಲಾಕ್ಡೌನ್ ಹೇಗೋ ಕಳೆಯಿತು. ಅಷ್ಟು ದಿನ ಆತನ ಸಂಪರ್ಕವಿಲ್ಲದೆ ಬೇಸರವಾಗಿತ್ತು. ಹೀಗಿರುವಾಗ ಹೊಸ ಫೋನ್ ಖರೀದಿಸಿ ಆತನೇ ನನಗೆ ಫೇಸ್ಬುಕ್ ಮೆಸೇಜ್ ಮಾಡಿದ್ದ. ಮೊದಲು ಇಬ್ಬರು ವಯಸ್ಸಿನ ಅಂತರದ ಬಗ್ಗೆ ಮಾತನಾಡಿದೆವು. ಇದಾದ ಬಳಿಕ ನಿಮಗೆ ಏನೋ ಹೇಳಬೇಕೆಂದು, ಬಹುಶಃ ನಾನು ನಿಮ್ಮ ಪ್ರೀತಿಸುತ್ತಿದ್ದೇನೆಂದು ಹೇಳಿದ. ನನಗೆ ಮಾತ್ರ ಆ ಭಾವನೆ ಇದೆ ಅಂದುಕೊಂಡಿದ್ದೆ. ಕೇವಲ 10 ದಿನದಲ್ಲಿ ನನ್ನಲ್ಲೂ ಅದೇ ಭಾವನೆ ಮೂಡಿತ್ತು. ತಕ್ಷಣ ನಾನೂ ಕೂಡ ನಿನ್ನನ್ನು ಪ್ರೀತಿಸುತ್ತಿದ್ದೇನೆಂದು ಹೇಳಿದೆ ಎಂದು ಕರೊಲಿನ್ ತಿಳಿಸಿದ್ದಾರೆ.
ಪ್ರೇಮ ನಿವೇದನೆಯಾದ ಬಳಿಕ ಇಬ್ಬರು ಅಮೇಜಾನ್ ಅರಣ್ಯದಲ್ಲಿ ಸಾಕಷ್ಟು ಎಂಜಾಯ್ ಮಾಡಿದ್ದಾರೆ. ಕರೊಲಿನಾಗಾಗಿ ರಾಮುಲೋ ಪೋರ್ಟೊ ಮಾಲ್ಡೊನಾಡೊಗು ಬಂದು ಅರಣ್ಯದಲ್ಲಿ ಮೂರು ವಾರ ಕೆಲಸ ಇದೆ ಎಂದು ಮರಳಿದ್ದ. ಈ ಸಮಯದಲ್ಲಿ ನನಗೆ ಏಕಾಂಗಿ ಭಾವನೆ ಕಾಡಿತು. ಮೂರು ವಾರಗಳ ನಂತರ ಆತ ಮರಳಿದಾಗ ನನ್ನ ಜತೆಯೇ ಬಂದು ನೆಲೆಸು ಎಂದು ಆಹ್ವಾನಿಸಿದ. ನನ್ನ ಜತೆ ತಾಯಿ, ಆರು ಮಂದಿ ಸಹೋದರ-ಸಹೋದರಿಯರು ಇದ್ದಾರೆ ಎಂದನು. ನಾನು ಕೂಡ ಒಪ್ಪಿಕೊಂಡು ಅವನ ಜತೆ ಹೋದೆ ಎಂದಳು. ನಮಗಾಗಿಯೇ ಮರದಲ್ಲಿ ಮಾಡಿದ ಸಣ್ಣ ಮನೆಯೊಂದಿತ್ತು. ಹೀಗೆ ಜೀವನ ಸಾಗುತ್ತಿದೆ. ದಿನಬೆಳಗಾದರೆ ಕೋತಿ ಮತ್ತು ಪಕ್ಷಿಗಳ ಶಬ್ಧಗಳು ನಮ್ಮ ಎಚ್ಚರಿಸುತ್ತವೆ. ಸದ್ಯದ ಜೀವನ ಸುಗಮವಾಗಿ ಸಾಗಿದೆ ಎಂದು ಕರೊಲಿನ್ ಹೇಳಿಕೊಂಡಿದ್ದಾಳೆ. (ಏಜೆನ್ಸೀಸ್)