

ಮಲಾವಿ: ಸೆಕ್ಸ್ ವರ್ಕರ್ ಜತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ವೇಳೆ 35 ವರ್ಷದ ವ್ಯಕ್ತಿಯೊಬ್ಬ ಮೃತಪಟ್ಟಿರುವ ದಾರುಣ ಘಟನೆ ಆಗ್ನೇಯ ಆಫ್ರಿಕಾದ ಮಲಾವಿ ನಗರದಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಮೃತ ವ್ಯಕ್ತಿಯನ್ನು ಚಾರ್ಲ್ಸ್ ಮಜಾವಾ ಎಂದು ಗುರುತಿಸಲಾಗಿದೆ. ಸಾವಿಗೆ ಅತಿಯಾದ ಲೈಂಗಿಕ ಉತ್ಸಾಹವೇ ಕಾರಣ ಎಂದು ಸ್ಥಳೀಯ ಪತ್ರಿಕೆ ನ್ಯಾಸಾ ಟೈಮ್ಸ್ ವರದಿ ಮಾಡಿದೆ. ಮರಣೋತ್ತರ ವರದಿಯ ಪ್ರಕಾರ ಸಂಭೋಗೋದ್ರೇಕದ ಪರಾಕಾಷ್ಠೆಯಿಂದಾಗಿ ಮೆದುಳಿನ ರಕ್ತನಾಳಗಳು ಛಿದ್ರಗೊಂಡು ಮೃತಪಟ್ಟಿದ್ದಾನೆಂದು ತಿಳಿದುಬಂದಿದೆ.
ಮಜವಾ ಮೃತದೇಹವನ್ನು ಮಟೆಪ್ವೇದಲ್ಲಿರುವ ಆತನ ನಿವಾಸಕ್ಕೆ ಕಳುಹಿಸಿಕೊಡಲಾಗಿದೆ. ಪೊಲೀಸ್ ಅಧಿಕಾರಿ ಹೇಳುವ ಪ್ರಕಾರ ಸೆಕ್ಸ್ ವರ್ಕರ್ ಜತೆ ಮಜಾವಾ ರೂಮ್ ಒಂದನ್ನು ಬುಕ್ ಮಾಡಿದ್ದನಂತೆ. ಲೈಂಗಿಕ ಕ್ರಿಯೆ ನಡೆಸುತ್ತಿರುವ ನಡುವೆಯೇ ಮಜವಾ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಈ ಬಗ್ಗೆ ಸೆಕ್ಸ್ ವರ್ಕರ್ ತಕ್ಷಣ ಸಹೋದ್ಯೋಗಿಗಳಿಗೆ ತಿಳಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಮಜವಾ ಸಾವು ಕುರಿತು ಪೊಲೀಸರು ಯಾವುದೇ ಪ್ರಕರಣವನ್ನು ದಾಖಲಿಸಿಲ್ಲ. ಇದರಲ್ಲಿ ಯಾರದ್ದು ತಪ್ಪಿಲ್ಲ ಎಂದು ನಿರ್ಧರಿಸಿರುವ ಪೊಲೀಸರು ಸೆಕ್ಸ್ ವರ್ಕರ್ ಪಾತ್ರವನ್ನು ನಿರಾಕರಿಸಿ ಪ್ರಕರಣವನ್ನು ಕೈಬಿಟ್ಟಿದ್ದಾರೆ.
2016ರಲ್ಲಿ ಯುಎಸ್ ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ನೀಡಿದ ವರದಿಯನ್ನು ನಾವಿಲ್ಲಿ ನೆನಪು ಮಾಡಿಕೊಳ್ಳಬೇಕಾಗುತ್ತದೆ. ಅತಿಯಾದ ಲೈಂಗಿಕತೆಯು ಅಥೌಆ ಭಾವೋದ್ರೇಕವು ಹೃದಯದ ರಕ್ತನಾಳದ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ವಿಶೇಷವಾಗಿ ವಯಸ್ಸಾದ ಪುರುಷರಲ್ಲಿ, ವಾರಕ್ಕೊಮ್ಮೆ ಅಥವಾ ಹೆಚ್ಚು ಬಾರಿ ಲೈಂಗಿಕ ಕ್ರಿಯೆ ನಡೆಸುವುದು ಹೃದಯ ಸಂಬಂಧಿ ಅಪಾಯಗಳು ದ್ವಿಗುಣಗೊಳಿಸುತ್ತದೆ ಎಂದು ವರದಿ ಎಚ್ಚರಿಸಿದೆ.
ಜನವರಿ 8ರಂದು ಮಹಾರಾಷ್ಟ್ರದ ನಾಗ್ಪುರ ಮೂಲದ ವ್ಯಕ್ತಿ ಸೆಕ್ಸ್ ವೇಳೆಯೇ ದುರಂತ ಸಾವಿಗೀಡಾಗಿದ್ದ. ಪ್ರಿಯಕರನನ್ನು ಖುರ್ಚಿ ಮೇಲೆ ಕೂರಿಸಿ, ನೈಲಾನ್ ಹಗ್ಗದಿಂದ ಆತನ ಕೈ ಕಾಲುಗಳನ್ನು ಮಹಿಳೆ ಕಟ್ಟಿದ್ದಳು. ಸ್ವಲ್ಪ ಜಾಸ್ತಿಯೇ ಥ್ರಿಲ್ ಇರಲಿ ಎಂದು ಕುತ್ತಿಗೆಯ ಭಾಗದಲ್ಲೂ ಹಗ್ಗ ಕಟ್ಟಿದ್ದಳು. ಅದಾದ ಮೇಲೆ ಬಾತ್ರೂಂಗೆ ಹೋಗಿ ಬರುವಷ್ಟರಲ್ಲಿ ಖುರ್ಚಿ ಸ್ಲಿಪ್ ಆಗಿ, ಕುತ್ತಿಗೆಯಲ್ಲಿದ್ದ ಹಗ್ಗ ಸಿಕ್ಕಿ ಹಾಕಿಕೊಂಡು ಸಾವಿಗೀಡಾಗಿದ್ದ. ಮೃತನ ಸಂಬಂಧಿಕರ ದೂರಿನಂತೆ ಮಹಿಳೆ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್)