ಟಿಕ್​ಟಾಕ್​ನಲ್ಲಿ ಅರೆಬೆತ್ತಲೆ ವಿಡಿಯೋ ಹರಿಬಿಡ್ತಿದ್ದ ಪ್ರಭಾವಿ ಮಹಿಳೆ ಗಂಡನಿಂದಲೇ ದುರಂತ ಅಂತ್ಯ!

Brazilian Woman
Published on

ಬ್ರಾಸಿಲಿಯಾ: ಅರೆಬೆತ್ತಲೆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದ ಬ್ರೆಜಿಲ್​ ಪ್ರಭಾವಿ ಮಹಿಳೆಯೊಬ್ಬಳು ತನ್ನ ಗಂಡನಿಂದಲೇ ಬರ್ಬರವಾಗಿ ಹತ್ಯೆಯಾಗಿದ್ದಾಳೆ. ಪತಿರಾಯ ತನ್ನ ಪತ್ನಿಯ ಮೇಲೆ 14 ಬಾರಿ ಗುಂಡು ಹಾರಿಸಿ ತಾನು ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಎಲಿಯಾನೆ ಫೆರೆರಾ ಸಿಯೋಲಿನ್ (35) ಎಂಬಾಕೆ ತನ್ನ ಪತಿ ಅಲೆಜಾಂಡ್ರೊ ಆಂಟೋನಿಯೊ ಅಗುಲೆರಾ ಕ್ಯಾಂಟಲ್ಲುಪಿ ಇಂದ ಹತ್ಯೆಯಾಗಿದ್ದಾಳೆ. ಜನವರಿ 24ರಂದು 6 ವರ್ಷದ ಮಗಳ ಮುಂದೆಯೇ ಈ ದುರ್ಘಟನೆ ನಡೆದಿದೆ.

ಬ್ರೆಜಿಲಿಯನ್​ ಮುನ್ಸಿಪಾಲಿಟಿ ಪೊಂಟಾ ಪೊರಾದ ತಮ್ಮ ನಿವಾಸದಲ್ಲಿ ದಂಪತಿಯ ಮೃತದೇಹಗಳು ಪತ್ತೆಯಾಗಿದ್ದು, ಗನ್ ಮತ್ತು ಕೆಲವು ಬುಲೆಟ್​ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತದೇಹದ ಮುಂದೆ ಮ್ಯಾಗಜಿನ್​ ಒಂದು ಬಿದ್ದಿರುವುದನ್ನು ಸಹ ಪೊಲೀಸರು ಗಮನಿಸಿದ್ದಾರೆ.

ಘಟನೆಗೆ 6 ವರ್ಷದ ಹೆಣ್ಣುಮಗಳು ಸಾಕ್ಷಿಯಾಗಿದ್ದು, ತಂದೆ-ತಾಯಿಯ ದುರಂತ ಸಾವಿನ ಬಳಿಕ ಆಕೆ ಸಂಬಂಧಿಕರು ಮಗುವನ್ನು ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದಾರೆ.

ಎಲಿಯಾನೆ ಫೆರೆರಾಳ ಟಿಕ್​ಟಾಕ್​ ವಿಡಿಯೋ ಸಮಂಧ ಇಬ್ಬರ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ. ಕೇವಲ ಮನೆಯಲ್ಲಿ ಮಾತ್ರವಲ್ಲದೇ ಸಾರ್ವಜನಿಕ ಸ್ಥಳಗಳಲ್ಲೂ ಅನೇಕ ಬಾರಿ ಇಬ್ಬರು ಕಿತ್ತಾಡಿಕೊಂಡಿದ್ದಾರೆಂದು ಅವರ ಆಪ್ತರು ತಿಳಿಸಿರುವುದಾಗಿ ಪೊಲೀಸ್​ ಅಧಿಕಾರಿ ಅನಾಲು ಫೆರಾಜ್​ ಅವರು ಮಾಹಿತಿ ನೀಡಿದ್ದಾರೆ.

ಅಂದಹಾಗೆ ಎಲಿಯಾನೆ ಫೆರೆರಾ ಟಿಕ್​ಟಾಕ್​ ಪೇಜ್​ನಲ್ಲಿ ಬರೋಬ್ಬರಿ 58 ಸಾವಿರ ಫಾಲೋವರ್ಸ್​ ಹೊಂದಿದ್ದಳು. ಪ್ರತಿದಿನ ಸಣ್ಣ ವಿಡಿಯೋ ತುಣುಕನ್ನು ಪೋಸ್ಟ್​ ಮಾಡುತ್ತಿದ್ದಳು. ಬಹುತೇಕ ವಿಡಿಯೋದಲ್ಲಿ ತುಂಡುಡುಗೆಯಲ್ಲಿ ಅರೆಬೆತ್ತಲೇಯಾಗೇ ಕಾಣಿಸಿಕೊಳ್ಳುತ್ತಿದ್ದಳು. ಇದೀ ವಿಚಾರ ಇಬ್ಬರ ನಡುವಿನ ಕಿತ್ತಾಟಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಸದ್ಯ ಪ್ರಕರಣ ದಾಖಲಾಸಿಕೊಂಡಿರುವ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net