ವಿಜಯೇಂದ್ರ ಅಸಮರ್ಥತೆಯಿಂದಲೇ ಎಲ್ಲ ಹೋರಾಟಗಳು ವಿಫಲವಾಗಿವೆ; BJP ಶಿಸ್ತು ಸಮಿತಿಯ ನೋಟಿಸ್​ಗೆ ಯತ್ನಾಳ್​ ರಿಪ್ಲೈ

Yatnal Vijayendra

ಬೆಂಗಳೂರು: ಸ್ವಪಕ್ಷದ ನಾಯಕರ ವಿರುದ್ಧ ಸರಣಿ ಹೇಳಿಕೆಗಳನ್ನು ಕೊಡುವ ಮೂಲಕ ಪಕ್ಷಕ್ಕೆ ಮುಜುಗರವನ್ನುಂಟು ಮಾಡಿದ್ದ ಶಾಸಕ ಬಸನ್​ಗೌಡ ಪಾಟೀಲ್ ಯತ್ನಾಳ್​ಗೆ ಬಿಜೆಪಿ (BJP) ಶಿಸ್ತು ಸಮಿತಿ ನೋಟಿಸ್​ ಜಾರಿ ಮಾಡಿತ್ತು. ಇದೀಗ ನೋಟಿಸ್​ಗೆ ಪ್ರತಿಕ್ರಿಯಿಸಿರುವ ಶಾಸಕ ಬಸನ್​ಗೌಡ ಪಾಟೀಲ್ ಯತ್ನಾಳ್​ ವಿಜಯೇಂದ್ರರನ್ನು ಕೆಳಗಿಳಿಸುವಂತೆ ಆಗ್ರಹಿಸಿದ್ದಾರೆ.

ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಶಿಸ್ತು ಸಮಿತಿಯ ನೋಟಿಸ್​ಗೆ ಯತ್ನಾಳ್​ ಪ್ರತಿಕ್ರಿಯಿಸಿದ್ದು, ಇ-ಮೇಲ್ ಮೂಲಕ 9 ಪುಟಗಳ ಉತ್ತರವನ್ನು ನೀಡಿರುವುದಾಗಿ ವರದಿಯಾಗಿದೆ. ಪಕ್ಷದ (BJP) ಶಿಸ್ತು ಸಮಿತಿ ಯಾವ ಕ್ರಮ ಜರುಗಿಸುತ್ತದೆ ಎಂದು ಕಾದು ನೋಡಬೇಕಿದೆ.

ಪತ್ರದಲ್ಲೇನಿದೆ? 

ಪಕ್ಷದ ರಾಜ್ಯಾಧ್ಯಕ್ಷರಾಗಿರುವ ಬಿಜಯೇಂದ್ರ ಸ್ವಜನ ಪಕ್ಷಪಾತ ಮಾಡುತ್ತಿದ್ದಾರೆ. ಅವರು ಪಕ್ಷದ ಹಿರಿಯರು ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ (BJP) ಕೈಗೊಂಡ ಎಲ್ಲ ಹೋರಾಟಗಳು ವಿಫಲವಾಗಿವೆ. ಇದಕ್ಕೆ ವಿಜಯೇಂದ್ರ ಅವರ ಅಸಮರ್ಥತೆಯೇ ಕಾರಣ.

B Y Vijayendra

ನಾನು ಯಾವುದೇ ಬಣ ರಾಜಕಾರಣ ಮಾಡಿಲ್ಲ. ಪಕ್ಷಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಯಾವುದೇ ಕೆಲಸ ಮಾಡಿಲ್ಲ. ಪಕ್ಷದ ಚೌಕಟ್ಟಿನೊಳಗೆಯೇ ವಕ್ಸ್ ಆಸ್ತಿ ವಿರುದ್ಧದ ಹೋರಾಟ ನಡೆಸಿದ್ದೇನೆ. ತಂಡವಾಗಿ ನಡೆಸಿದ ಆ ಹೋರಾಟ ಯಶಸ್ಸು ಕಂಡಿದೆ. ವಕ್ಫ್ ಕುರಿತ​ ಹೋರಾಟವನ್ನು ಉನ್ನತ ನಾಯಕರು ಸಮರ್ಥಿಸಿದ್ದಾರೆ. ಬಿ.ವೈ.ವಿಜಯೇಂದ್ರ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಕಾರ್ಯಕರ್ತರು, ನಾಯಕರ ಭಾವನೆಯನ್ನು ವ್ಯಕ್ತಪಡಿಸಿದ್ದೇನೆ.

ಕರ್ನಾಟಕದಲ್ಲಿ ಬಿಜೆಪಿಯೊಳಗೆ ಕುಟುಂಬ ರಾಜಕಾರಣ, ಸ್ವಜನಪಕ್ಷಪಾತಕ್ಕೆ ಅಂತ್ಯ ಹಾಡಬೇಕು. ಮುಂದಿನ ಚುನಾವಣೆ ವೇಳೆಗೆ ಬಿಜೆಪಿ ಬಲಗೊಳ್ಳಬೇಕೆಂದರೆ, ಈಗಲೇ ರಾಜ್ಯಾಧ್ಯಕ್ಷರನ್ನು ಬದಲಿಸಬೇಕು. ಎಲ್ಲರನ್ನು ವಿಶ್ವಾಸದಿಂದ ನಿಭಾಯಿಸಬಲ್ಲವರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಿಸಬೇಕು ಎಂದು ಶಿಸ್ತು ಸಮಿತಿಯ ನೋಟಿಸ್​ಗೆ ಶಾಸಕ ಬಸನ್​ಗೌಡ ಪಾಟೀಲ್ ಯತ್ನಾಳ್​ ಪ್ರತಿಕ್ರಿಯಿಸಿರುವುದಾಗಿ ತಿಳಿದು ಬಂದಿದೆ.

ರಿಂಗ್​ರೋಡ್​ನಲ್ಲಿ ವಿದ್ಯಾರ್ಥಿಗಳಿಂದ ಅಪಾಯಕಾರಿ Stunt​; ಇಬ್ಬರು ಅರೆಸ್ಟ್​, ವಿಡಿಯೋ ವೈರಲ್

ದೇಶದ ಅಭಿವೃದ್ಧಿಗಾಗಿ ಪ್ರಧಾನಿ‌ ಹುದ್ದೆಯನ್ನು‌ ಮೋದಿ ಬೇರೆಯವರಿಗೆ ಬಿಟ್ಟುಕೊಡಲಿ: Santosh Lad

Share This Article

18 ತಿಂಗಳ ನಂತರ ಸಿಂಹ ರಾಶಿಗೆ ಕೇತು ಸಂಚಾರ: ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ! Zodiac Signs

Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅನೇಕ ಗ್ರಹಗಳು ತಮ್ಮ ರಾಶಿಚಕ್ರ ಚಿಹ್ನೆಗಳನ್ನು ಆಗಾಗ…

ಬೆಣ್ಣೆಯಂತೆ ಕೊಬ್ಬು ಕರಗಬೇಕೆ; ಉತ್ತಮ ಫಲಿತಾಂಶಕ್ಕಾಗಿ ಮನೆಯಲ್ಲಿರುವ ಈ ವಸ್ತುಗಳನ್ನು ಬಳಸಿ | Health Tips

ಕೆಲವರು ಹೊರಗೆ ಊಟ ಮಾಡಿದ ನಂತರವೂ ತೆಳ್ಳಗಿರುತ್ತಾರೆ. ಯಾವುದೇ ಜಿಮ್ ಅಥವಾ ವ್ಯಾಯಾಮವನ್ನೂ ಮಾಡುವುದಿಲ್ಲ. ಏಕೆಂದರೆ…

ಶೀತ & ಜ್ವರವಿದ್ದಾಗ ಹುಳಿ ಮೊಸರು ಸೇವಿಸಬಹುದೇ?; ಇಲ್ಲಿದೆ ಉಪಯುಕ್ತ ಮಾಹಿತಿ | Health Tips

ಶೀತ ಮತ್ತು ಜ್ವರದ ಚಿಕಿತ್ಸೆಯ ಜತೆಗೆ ಹಲವು ರೀತಿಯ ಮುನ್ನೆಚ್ಚರಿಕೆಗಳನ್ನು ಸಹ ತೆಗೆದುಕೊಳ್ಳಬೇಕಾಗುತ್ತದೆ. ಮೊಸರು ಸೇವಿಸದಿರುವುದು…