ರಿಂಗ್​ರೋಡ್​ನಲ್ಲಿ ವಿದ್ಯಾರ್ಥಿಗಳಿಂದ ಅಪಾಯಕಾರಿ Stunt​; ಇಬ್ಬರು ಅರೆಸ್ಟ್​, ವಿಡಿಯೋ ವೈರಲ್

Car Stunt
Published on

ಹೈದರಾಬಾದ್: ರಾತ್ರಿ ವೇಳೆ ದುಬಾರಿ ಬೆಲೆಯ ಕಾರುಗಳಲ್ಲಿ ಅಪಾಯಕಾರಿ ಸ್ಟಂಟ್​ (Dangerous Stunt) ಮಾಡುತ್ತಿದ್ದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿರುವ ಘಟನೆ ಹೈದ್ರಾಬಾದ್​ನಲ್ಲಿ ನಡೆದಿದೆ. ಘಟನೆ ಸಂಬಂಧ ಪೊಲೀಸರು ಇಬ್ಬರು ಯುವಕರು ಹಾಘೂ ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆದಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.

ಬಂಧಿತರನ್ನು ರಾಜೇಂದ್ರನಗರದ ನಿವಾಸಿ ಮೊಹಮ್ಮದ್ ಒಬೈದುಲ್ಲಾ (25) ಮತ್ತು ಮಲಕ್‌ಪೇಟೆ ನಿವಾಸಿ ಜೊಹೇರ್ ಸಿದ್ದಿಕಿ (25) ಎಂದು ಗುರುತಿಸಲಾಗಿದೆ. ಯುವಕರು ಐಷಾರಾಮಿ ಕಾರಿನಲ್ಲಿ ಸ್ಟಂಟ್ (Dangerous Stunt) ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಘಟನೆ ಕುರಿತು ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಶಂಶಾಬಾದ್ ರಿಂಗ್​ರಸ್ತೆಯಲ್ಲಿ ಆರೋಪಿಗಳು ಅಪಾಯಕಾರಿ ಸ್ಟಂಟ್ (Stunt) ಮಾಡಿದ್ದು, ಹತ್ತಿರದಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಇವರ ಕೃತ್ಯ ಸೆರೆಯಾಗಿದೆ. ಬಂಧಿತ ಆರೋಪಿಗಳು ಕಾರಿನ ನಂಬರ್ ಪ್ಲೇಟ್ ತೆಗೆದು ಈ ರೀತಿ ಮಾಡಿದ್ದು, ಅದಾಗ್ಯೂ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲಾಗಿದೆ.

ಬಂಧಿತರಿಂದ ಫಾರ್ಚ್ಯೂನರ್ ಹಾಗೂ ಬಿಎಂಡಬ್ಲ್ಯೂ ಕಾರನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಇದಲ್ಲದೆ ಕಾರಿನ ಮೇಲೆ ಇರುವ ಪ್ರಕರಣಗಳ ಬಗ್ಗೆ ಪರಿಶೀಲಿಸಲಾಗುತ್ತಿದ್ದು, ಶೀಘ್ರದಲ್ಲೇ ಮತ್ತಷ್ಟು ಮಾಹಿತಿ ನೀಡಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net