ಪಟ್ನಾ: ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳವು (Maha Kumbh Mela) ಒಂದಿಲ್ಲೊಂದು ಕಾರಣಕ್ಕೆ ಇಡೀ ವಿಶ್ವದ ಗಮನ ಸೆಳೆಯುತ್ತಿದೆ. ಈಗಾಗಲೇ ಕೋಟ್ಯಂತರ ಭಕ್ತರು ಕುಂಭಮೇಳಕ್ಕೆ ಭೇಟಿ ನೀಡಿ ಪುಣ್ಯಸ್ನಾನ ಮಾಡಿದ್ದು, ಗಿನ್ನಿಸ್ಗ್ ದಾಖಲೆಗೆ ಭಾಜನವಾಗಿದೆ. ಫೆಬ್ರವರಿ 26ರಂದು ಮಹಾಕುಂಭಮೇಳವು ಸಂಪನ್ನಗೊಳ್ಳಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಇದೀಗ ಮಹಾಕುಂಭಮೇಳಕ್ಕೆ (Maha Kumbh Mela) ತೆರಳುತ್ತಿದ್ದಾಗ ಆಶ್ಚರ್ಯಕರ ಘಟನೆಯೊಂದು ನಡೆದಿದ್ದು, ಮಹಿಳೆಯರು ನೀಡಿದ ಉತ್ತರ ಕೇಳಿ ಅಧಿಕಾರಿಗಳು ದಂಗಾಗಿದ್ಧಾರೆ.
ಬಿಹಾರದ ಬಕ್ಸರ್ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಡಿಆರ್‌ಎಮ್ ರೈಲಿನಲ್ಲಿ ಟಿಕೆಟ್ಗಳನ್ನು ಪರಿಶೀಲಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಮಹಿಳೆಯರು ನೀಡಿದ ಉತ್ತರ ಕೇಳಿ ಅಧಿಕಾರ ಒಂದು ಕ್ಷಣ ಆಘಾತಕ್ಕೊಳಗಾಗಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
#Watch: बिहार के बक्सर रेलवे स्टेशन पर दानापुर मंडल के डीआरएम जयंत चौधरी को कुंभ जा रही महिलाओं ने टिकट मांगने पर ऐसा जवाब दिया कि वे चौंक गए। महिलाओं ने नरेंद्र मोदी का नाम ले कर उन्हें चुप करा दिया। अफसर ने उन्हें नियम समझाया कि बगैर टिकट नहीं चलना चाहिए।#Bihar #Buxar pic.twitter.com/MJLQqcDtWQ
— Hindustan (@Live_Hindustan) February 17, 2025
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಡಣಾಪುರ ಡಿಆರ್‌ಎಮ್ ಜಯಂತ್ ಕಾಂತ್ ಚೌಧರಿ ಬಕ್ಸರ್ ರೈಲು ನಿಲ್ದಾಣದಲ್ಲಿ ಟಿಕೆಟ್ಗಳನ್ನು ಪರಿಶೀಲಿಸುತ್ತಿದ್ದರು. ತಪಾಸಣೆಯ ವೇಳೆ ಕೆಲವು ಮಹಿಳೆಯರು ಟಿಕೆಟ್ ಇಲ್ಲದೇ ಪ್ರಯಾಣಿಸುತ್ತಿರುವುದು ಕಂಡು ಬಂದಿದ್ದು, ಕೂಡಲೇ ಅಧಿಕಾರಿ ಅವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಮಹಿಳೆಯರು ಪ್ರಧಾನಿ ಮೋದಿ ಮಹಿಳೆಯರು ರೈಲಿನಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು ಎಂದು ಹೇಳಿದ್ದಾರೆ. ಅದಕ್ಕಾಗಿ ನಾವು ಟಿಕೆಟ್ ತೆಗೆದುಕೊಳ್ಳದೇ ಮಹಾಕುಂಭ ಮೇಳ (Maha Kumbh Mela) ನಡೆಯುತ್ತಿರುವ ಪ್ರಯಾಗ್ರಾಜ್ಗೆ ಹೋಗುತ್ತಿದ್ದೇವೆ ಎಂದು ಉತ್ತರ ನೀಡಿದ್ದಾರೆ.
ಮಹಿಳೆಯರ ಉತ್ತರ ಕೇಳಿ ಒಂದು ಕ್ಷಣ ಆಘಾತಕ್ಕೊಳಗಾದ ಅಧಿಕಾರಿಯು ಏನು ಮಾತನಾಡದೆ ನಕ್ಕು ಸುಮ್ಮನಾಗಿದ್ದಾರೆ. ಆ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಈ ರೀತಿಯ ಯಾವುದೇ ಘೋಷಣೆಯನ್ನು ಮಾಡಿಲ್ಲ. ನಿಮಗೆ ಯಾರೋ ಸುಳ್ಳು ಮಾಹಿತಿ ನೀಡಿದ್ದಾರೆ. ಟಿಕೆಟ್ ಇಲ್ಲದೇ ಪ್ರಯಾಣಿಸುವುದು ರೈಲ್ವೆ ಕಾನೂನುಗಳಿಗೆ ವಿರುದ್ಧವಾಗಿದೆ ಎಂದು ಮಹಿಳೆಯರಿಗೆ ಸ್ಪಷ್ಟಪಡಿಸಿದ್ದಾರೆ. ಆದರೆ, ಟಿಕೆಟ್ ಇಲ್ಲದೇ ಪ್ರಯಾಣಿಸಿದ್ದಕ್ಕೆ ದಂಡ ವಿಧಿಸಿದರೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ.
ಚಾಂಪಿಯನ್ಸ್ ಟ್ರೋಫಿ ವೇಳೆ ಪತ್ನಿಯರ ಜತೆ ಇರಲು ಅವಕಾಶ ನೀಡಿದ BCCI; ಆದರೆ ಈ ಷರತ್ತನ್ನು ಪಾಲಿಸಿದರೆ ಮಾತ್ರ
ದಯವಿಟ್ಟು ಕ್ಷಮೆಯಿರಲಿ… ಮದುವೆಯಾದ ಎರಡೇ ದಿನಕ್ಕೆ ಕ್ಷಮೆಯಾಚಿಸಿದ ಡಾಲಿ Dhananjay