ಚಾಂಪಿಯನ್ಸ್ ಟ್ರೋಫಿ ವೇಳೆ ಪತ್ನಿಯರ ಜತೆ ಇರಲು ಅವಕಾಶ ನೀಡಿದ BCCI; ಆದರೆ ಈ ಷರತ್ತನ್ನು ಪಾಲಿಸಿದರೆ ಮಾತ್ರ

Virat Rohit Family

ಮುಂಬೈ: ಫೆಬವರಿ 19ರಿಂದ ಆರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿಯಿಂದಲೇ ನೂತನ ಪ್ರಯಾಣ ನಿಯಮಾವಳಿಯನ್ನು ಬಿಸಿಸಿಐ (BCCI) ಜಾರಿಗೊಳಿಸಿದ್ದು, ಇದರನ್ವಯ ಭಾರತ ತಂಡದ ಆಟಗಾರರು ದುಬೈಗೆ ಪ್ರಯಾಣ ಬೆಳೆಸಿದ ವೇಳೆ ಪತ್ನಿ, ಮಕ್ಕಳ ಸಹಿತ ಕುಟುಂಬ ಸದಸ್ಯರನ್ನು ಕರೆದೊಯ್ಯಲು ನಿರ್ಬಂಧ ಹೇರಲಾಗಿದ್ದು, ಇದೀಗ ಈ ನಿಯಮವನ್ನು ಬಿಸಿಸಿಯ ಸ್ವಲ್ಪಮಟ್ಟಿಗೆ ಸಡಿಲಿಸಿದೆ.

ಫೆ. 19ರಿಂದ ನಡೆಯಲಿರುವ ಐಸಿಸಿ ಟೂರ್ನಿಯಲ್ಲಿ ಭಾರತ ತಂಡ ಫೆ.20ರಂದು ಬಾಂಗ್ಲಾದೇಶ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಬಳಿಕ ಫೆ. 23ಕ್ಕೆ ಪಾಕಿಸ್ತಾನ ಮತ್ತು ಮಾ.2ಕ್ಕೆ ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ಟೂರ್ನಿಯ ಫೈನಲ್ ಮಾರ್ಚ್ 9ಕ್ಕೆ ನಿಗದಿಯಾಗಿದೆ. ಟೂರ್ನಿಯ ಒಟ್ಟಾರೆ ಅವಧಿ ಸುಮಾರು ಮೂರು ವಾರ ಆಗಿದೆ. ಹೀಗಾಗಿ ಕುಟುಂಬ ಸದಸ್ಯರಿಗೆ ಆಟಗಾರರ ಜತೆಗೆ ವಸತಿ ವ್ಯವಸ್ಥೆ ಮಾಡಲು ಬಿಸಿಸಿಐ (BCCI) ನಿರಾಕರಿಸಿದೆ. ಬಿಸಿಸಿಐನ ಹೊಸ ನಿಯಮಾವಳಿ ಅನ್ವಯ 45 ಅಥವಾ ಅದಕ್ಕಿಂತ ಹೆಚ್ಚು ದಿನಗಳ ಪ್ರವಾಸದ ವೇಳೆ ಆಟಗಾರರು ಗರಿಷ್ಠ 2 ವಾರಗಳನ್ನು ಕುಟುಂಬದೊಂದಿಗೆ ಕಳೆಯಲು ಅವಕಾಶ ಕಲ್ಪಿಸಲಾಗುತ್ತದೆ.

ಖಾಸಗಿ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗಿರುವ ವರದಿ ಪ್ರಕಾರ, ಬಿಸಿಸಿಐ ಟೀಮ್ ಇಂಡಿಯಾ ಆಟಗಾರರಿಗೆ ತಮ್ಮ ಕುಟುಂಬದವರ ಜೊತೆ ಇರಲು ಅವಕಾಶ ನೀಡಿದೆ ಎಂದು ಹೇಳಲಾಗಿದ್ದು, ಒಂದು ಷರತ್ತನ್ನು ವಿಧಿಸಲಾಗಿದೆ. ಅದೇನೆಂದರೆ ಆಟಗಾರರು ತಮ್ಮ ಕುಟುಂಬ ಸದಸ್ಯರೊಂದಿಗೆ ಇರಲು ಬರೀ ಒಂದು ಮ್ಯಾಚ್​ಗೆ ಇರಲು ಮಾತ್ರ ಅವಕಾಶ ಮಾಡಿಕೊಡಲಾಗಿದ್ದು, ಆಟಗಾರರು ಇದನ್ನು ವಿಸ್ತರಿಸಲು ಮನವಿ ಮಾಡಬಹುದು ಎಂದು ವರದಿಯಾಗಿದೆ.

Virat Rohit

ಜೂನ್-ಜುಲೈ-ಆಗಸ್ಟ್​ನಲ್ಲಿ ಭಾರತ ತಂಡ 5 ಟೆಸ್ಟ್ ಪಂದ್ಯಗಳ ಸರಣಿಗಾಗಿ ಇಂಗ್ಲೆಂಡ್​ಗೆ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸ 45 ದಿನಗಳಿಗೂ ಅಧಿಕ ಇರುವುದರಿಂದ ಆಗ ಆಟಗಾರರಿಗೆ 2 ವಾರಗಳ ಕಾಲ ಕುಟುಂಬದೊಂದಿಗೆ ಸಮಯ ಕಳೆಯಲು ಅವಕಾಶ ದೊರೆಯಲಿದೆ. ಕಳೆದ ಆಸ್ಟ್ರೇಲಿಯಾ ಪ್ರವಾಸದ ವೈಫಲ್ಯದ ಬಳಿಕ ಈ ಹೊಸ ನಿಯಮಾವಳಿಯನ್ನು ರೂಪಿಸಲಾಗಿದೆ. ಈ ನಡುವೆ ಕೆಲ ಆಟಗಾರರ ವಿಶೇಷ ಡಯಟ್ ಅಗತ್ಯಗಳಿಗೆ ತಕ್ಕಂತೆ ತಾನೇ ಕೆಲ ಬಾಣಸಿಗರನ್ನು ನೇಮಿಸಿಕೊಳ್ಳಲು ಬಿಸಿಸಿಐ ಪ್ರಯತ್ನಿಸುತ್ತಿದೆ ಎನ್ನಲಾಗಿದೆ.

ಈಗಾಗಲೇ ಕೆಲವು ಅಳವಡಿಕೆ: ಬಿಸಿಸಿಐ (BCCI) ರೂಪಿಸಿರುವ ಕಟ್ಟುನಿಟ್ಟಿನ ಹೊಸ ನಿಯಮಾವಳಿಗಳ ಪೈಕಿ ಕೆಲವು ಈಗಾಗಲೆ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಿಂದಲೇ ಜಾರಿಯಾಗಿವೆ. ತಂಡದ ಎಲ್ಲ ಆಟಗಾರರು ಒಟ್ಟಾಗಿ ಬಸ್​ನಲ್ಲೇ ಪ್ರಯಾಣಿಸುವುದು, ಅಭ್ಯಾಸದ ವೇಳೆ ಖಾಸಗಿ ವಾಹನದಲ್ಲಿ ಪ್ರಯಾಣಿಸದಿರುವುದು ಇದರಲ್ಲಿ ಪ್ರಮುಖವಾದವು. ಕಡ್ಡಾಯವಾಗಿ ದೇಶೀಯ ಕ್ರಿಕೆಟ್​ನಲ್ಲಿ ಆಡುವ ನಿಯಮವನ್ನೂ ಸ್ಟಾರ್ ಆಟಗಾರರು ಈಗಾಗಲೆ ಪಾಲಿಸಿದ್ದಾರೆ.

ಭಾರತದ ವಿರುದ್ಧ ಪಾಕಿಸ್ತಾನ ಮೇಲುಗೈ ಸಾಧಿಸುತ್ತದೆ; Champions Trophy ಹೈ ವೋಲ್ಟೇಜ್ ಪಂದ್ಯದ ಕುರಿತು ಯುವರಾಜ್ ಸಿಂಗ್​ ಹೇಳಿಕೆ ವೈರಲ್

ದಯವಿಟ್ಟು ಕ್ಷಮೆಯಿರಲಿ… ಮದುವೆಯಾದ ಎರಡೇ ದಿನಕ್ಕೆ ಕ್ಷಮೆಯಾಚಿಸಿದ ಡಾಲಿ Dhananjay

Share This Article

ನಿಮ್ಮ ಸಂಪತ್ತು ವೃದ್ಧಿಯಾಗಬೇಕಾ? ಅಕ್ಷಯ ತೃತೀಯದಂದು ಹೀಗೆ ಮಾಡಬೇಕು… Akshaya Tritiya

Akshaya Tritiya: ಅಕ್ಷಯ ತೃತೀಯ ಹಬ್ಬವನ್ನು ಹಿಂದೂಗಳು ಬಹಳ ಪವಿತ್ರವೆಂದು ಪರಿಗಣಿಸುತ್ತಾರೆ. ಈ ಅಕ್ಷಯ ತೃತೀಯ…

ರಾತ್ರಿ ಏನೂ ತಿನ್ನದೆ ಮಲಗುತ್ತಿದ್ದೀರಾ? ಆದರೆ ನೀವು ಖಂಡಿತವಾಗಿಯೂ ಈ ವಿಷಯಗಳನ್ನು ತಿಳಿದುಕೊಳ್ಳಬೇಕು…Health Tips

Health Tips: ಇತ್ತೀಚೆಗೆ, ಅನೇಕ ಜನರು ಸಮಯದ ಅಭಾವ, ಹಸಿವಿನ ಅಭಾವ, ಉದ್ವೇಗ ಸೇರಿದಂತೆ ವಿವಿಧ…

ದಿನಾ ಒಂದು ಮೊಟ್ಟೆ ತಿನ್ನಿರಿ; ದೇಹದ ಸಕಾರಾತ್ಮಕ ಬದಲಾಣೆಗಳನ್ನು ಒಮ್ಮೆ ನೋಡಿ!: | Positive Changes

Positive Changes : ಮೊಟ್ಟೆಗಳನ್ನು ಪೋಷಕಾಂಶಗಳ ಶಕ್ತಿ ಕೇಂದ್ರವೆಂದು ಪರಿಗಣಿಸಲಾಗುತ್ತದೆ. ಇದು ಪ್ರೋಟೀನ್, ಜೀವಸತ್ವಗಳು ಮತ್ತು…