ಇನ್ನು ಆರೇ ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಬೀಳುತ್ತೆ ಎಂದ ಯತ್ನಾಳ್!

Yatnal
Published on

ವಿಜಯಪುರ: ಇನ್ನು ಕೆಲವೇ ಕೆಲವು ತಿಂಗಳುಗಳಲ್ಲಿ ಬಹುಮತದಿಂದ ಆಯ್ಕೆಯಾದ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಯತ್ನಾಳ್ ಹೇಳಿದ್ದಾರೆ.

ನಿನ್ನೆ ರಾತ್ರಿ ವಿಜಯಪುರದಲ್ಲಿ ಚುನಾವಣೆಯಲ್ಲಿ ಶ್ರಮಿಸಿದ ಕಾರ್ಯಕರ್ತರಿಗೆ ಔತಣ ಕೂಟ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಈ ರೀತಿಯಾಗಿ ಭವಿಷ್ಯ ನುಡಿದಿದ್ದಾರೆ. ಇದೇ ಸಂದರ್ಭದಲ್ಲಿ ಹಾಗೆ ಯಾಕೆ ಆಗಲಿದೆ ಎನ್ನುವುದಕ್ಕೂ ಕಾರಣ ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಯತ್ನಾಳ್, “ಇನ್ನು 6 ತಿಂಗಳಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಬೀಳುತ್ತೆ. ಅಲ್ಲಿಯ ವರೆಗೆ ಸಮಾಧಾನದಿಂದ ಇರಬೇಕು. ಅವರ ಕಾಂಗ್ರೆಸ್ ಶಾಸಕರಿಗೇ ಅನುದಾನ ಇಲ್ಲ ಕೊಡೋಕೆ.

ರೊಕ್ಕ ಇಲ್ಲ, ಅನುದಾನ ಕೇಳಬೇಡಿ ಎನ್ನುತ್ತಾರೆ. ಅವರ ಶಾಸಕರೇ ಅಳುತ್ತಿದ್ದಾರೆ. ಇನ್ನು ವಿರೋಧ ಪಕ್ಷದ ನಮಗೆ ಎಲ್ಲಿಂದ ಅನುದಾನ ಕೊಡ್ತಾರೆ? ಅದಕ್ಕೆ ನೀವು ಕೆಲ ದಿನಗಳ ಕಾಲ ರೆಸ್ಟ್ ಮಾಡಿ. 6-7 ತಿಂಗಳು ಕಷ್ಟ ಇದೆ, ನಂತರ ನಮ್ಮ ಸರಕಾರ ಬರುತ್ತೆ ಮತ್ತೆ ಅನುದಾನ ಸಿಗುತ್ತೆ” ಎಂದು ಭಾಷಣದಲ್ಲಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net