More

    ಶಿಕ್ಷಕರಿಗೆ ಸಂಬಳ ನೀಡಲು ಯಾವ ತನಿಖೆ ಬಾಕಿಯಿದೆ?; ಸಿಎಂಗೆ ಬಸನಗೌಡ ಪಾಟೀಲ್​ ಯತ್ನಾಳ್​ ಪ್ರಶ್ನೆ

    ಬೆಂಗಳೂರು: ಕಳೆದ ಎರಡು ದಿನಗಳ ಹಿಂದೆ ಬಿಬಿಎಂಪಿ ಗುತ್ತಿಗೆದಾರರ ಸಂಘದ ಸದಸ್ಯರು ಸಿಎಂ ಸಿದ್ದರಾಮಯ್ಯ ಅವರನ್ನು ಖುದ್ದಾಗಿ ಭೇಟಿ ಮಾಡಿ, ತಾವು ಎದುರಿಸುತ್ತಿರುವ ಪರಿಸ್ಥಿತಿಯನ್ನು ವಿವರಿಸಿದರು. ಈ ಮಧ್ಯೆ ಪ್ರತ್ಯೇಕ ಆರೋಪವನ್ನು ಕೂಡ ಮಾಡಿದರು. ಈ ಕುರಿತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಸಿಎಂ ಹೇಳಿಕೆಯನ್ನು ಉಲ್ಲೇಖಿಸಿ ಟ್ವೀಟ್​ ಮಾಡಿದ್ದಾರೆ.

    ಇದನ್ನೂ ಓದಿ: ಬೆಳಗಾವಿಯಲ್ಲಿ ಗೃಹಲಕ್ಷ್ಮೀ ಯೋಜನೆ ಚಾಲನೆ; 1ಲಕ್ಷ ಜನರು ಭಾಗಿ  

    “ಎಲ್ಲದಕ್ಕೂ ತನಿಖೆ ಬಾಕಿ ಇದೆ ಎಂದು ಹೇಳುತ್ತಿರುವ ಸಿದ್ದರಾಮಯ್ಯನವರೇ, ಕೆಎಸ್​ಆರ್​​ಟಿಸಿ ನೌಕರರಿಗೆ ಸಂಬಳ ನೀಡಲು ಯಾವ ತನಿಖೆ ಬಾಕಿಯಿದೆ? ಶಿಕ್ಷಕರಿಗೆ ಸಂಬಳ ನೀಡಲು, ಸಾರಿಗೆ ನಿಗಮಗಳಿಗೆ ಪೂರ್ಣ ಹಣ ಬಿಡುಗಡೆ ಮಾಡಲು ಯಾವ ತನಿಖೆ ಬಾಕಿ ಇದೆ” ಎಂದು ಪ್ರಶ್ನಿಸಿದ್ದಾರೆ.

    “ನಿಮ್ಮ ಗ್ಯಾರಂಟಿ ಘೋಷಣೆಯಲ್ಲಿ ಪದವೀಧರರಿಗೆ 3,000 ರೂ. ಹಾಗೂ ಡಿಪ್ಲೋಮಧರರಿಗೆ 1,500 ರೂ. ನೀಡಲು ಯಾವ ತನಿಖೆಯಿದೆ? ನಿಮ್ಮ ‘ಬ್ರದರ್’ ವಿರುದ್ಧ ಬಂದಿರುವ ಆರೋಪಗಳು ಸತ್ಯವೆಂದು ತಿಳಿದಿದ್ದರೂ ಸಹ ಯಾಕೆ ಅವರ ಪರವಹಿಸಿಕೊಂಡು ಮಾತನಾಡುತ್ತೀರಿ?” ಎಂದು ಟ್ವೀಟ್​ ಮೂಲಕ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.

    ಬಾಕ್ಸ್ ಆಫೀಸ್​ನಲ್ಲಿ ‘ಜೈಲರ್’ ದಾಖಲೆ; ಸ್ನೇಹಿತರೊಟ್ಟಿಗೆ ಹಿಮಾಲಯಕ್ಕೆ ತೆರಳಿದ ತಲೈವಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts