ಲೋಕಸಭೆ ಚುನಾವಣೆಗೆ ಎಷ್ಟು ಫಿಕ್ಸ್ ಮಾಡಿದ್ದೀರಿ ಸಿದ್ದರಾಮಯ್ಯನವರೇ?; ಬಸನಗೌಡ ಪಾಟೀಲ್ ಯತ್ನಾಳ್​ ವ್ಯಂಗ್ಯ

Untitled design - 2023-08-09T143336.219
Published on

ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ​ ಟ್ವೀಟ್ ಮಾಡುವ ಮೂಲಕ ವ್ಯಂಗ್ಯವಾಡಿದ್ದು, ಲೋಕಸಭೆ ಚುನಾವಣೆಗೆ ಎಷ್ಟು ಫಿಕ್ಸ್ ಮಾಡಿದ್ದೀರಿ ಸಿದ್ದರಾಮಯ್ಯನವರೇ? ಎಂದು ಪ್ರಶ್ನಿಸಿದ್ದಾರೆ.

ಬಿಬಿಎಂಪಿ ಗುತ್ತಿಗೆದಾರರ ಸಂಘದ ಸದಸ್ಯರು ಮಂಗಳವಾರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಪಾಲಿಕೆಯ ವ್ಯಾಪ್ತಿಯಲ್ಲಿ ಕಳೆದ 28 ತಿಂಗಳ ಹಿಂದೆ ಪೂರ್ಣಗೊಳಿಸಿರುವ ಕಾಮಗಾರಿಗಳ ಬಿಲ್ ಪಾವತಿ ಬಾಕಿ ಉಳಿದಿದೆ ಎಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಸದ್ಯ ಈ ವಿಷಯವನ್ನು ಪ್ರತ್ಯೇಕವಾಗಿ ಮುಂದಿಟ್ಟ ಬಸನಗೌಡ ಪಾಟೀಲ್ ಯತ್ನಾಳ್, "ಬಿಜೆಪಿ ಸರ್ಕಾರದ ಹಗರಣಗಳನ್ನು ನ್ಯಾಯ ಮೂರ್ತಿಯವರ ನೇತೃತ್ವದ ಆಯೋಗದ ಮೂಲಕ ತನಿಖೆ ಮಾಡಿಸುತ್ತೇವೆ ಎಂದಿದ್ದ ಸಿದ್ದರಾಮಯ್ಯನವರು, ಈಗ ಗುತ್ತಿಗೆದಾರರು ಆರೋಪ ಮಾಡಿರುವ ಅವರ 'ಬ್ರದರ್' ವಿರುದ್ಧ ತನಿಖೆ ಮಾಡಿಸುತ್ತಾರಾ?" ಎಂದು ಟ್ವೀಟ್​ನಲ್ಲಿ ಪ್ರಶ್ನಿಸಿದ್ದಾರೆ.

"ಗುತ್ತಿಗೆದಾರರು ನೊಣವಿನಕೆರೆ ಅಜ್ಜಯ್ಯನವರ ಮಠಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಸವಾಲೆಸಗಿರುವುದು ನೋಡಿದರೆ 'ಬ್ರದರ್' ಡಿಮ್ಯಾಂಡ್ ಗುತ್ತಿಗೆದಾರರಿಗೆ ಬಹಳ ಸಂಕಷ್ಟಕ್ಕೆ ದೂಡಿದೆ. ಲೋಕಸಭೆ ಚುನಾವಣೆಗೆ ಎಷ್ಟು ಫಿಕ್ಸ್ ಮಾಡಿದ್ದೀರಿ ಸಿದ್ದರಾಮಯ್ಯನವರೇ? ನಿಮ್ಮ ಗಮನಕ್ಕೆ ಬಾರದೆ ನಿಮ್ಮ 'ಬ್ರದರ್' ನಿಮ್ಮನ್ನೂ ಮೀರಿಸಿದ್ದಾರಾ? ಕ್ರಮ ಕೈಗೊಳ್ಳುವಿರಾ? ಅಥವಾ ಅವರು ಗುತ್ತಿಗೆದಾರರೇ ಅಲ್ಲ ಅಂತ ಸರ್ಟಿಫಿಕೇಟ್ ನೀಡುತ್ತೀರಾ" ಎಂದು ಟ್ವೀಟ್​ ಮೂಲಕ ವ್ಯಂಗ್ಯವಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net