ಯಕ್ಷಗಾನ ಕಲಿಕೆ ನಿರಂತರವಾಗಿರಲಿ : ಶಿಬಿರ ಸಮಾರೋಪದಲ್ಲಿ ಚಂದ್ರ ಪೂಜಾರಿ ಕದ್ರಿಕಟ್ಟು ಅನಿಸಿಕೆ

yakshagana
ಕೋಟ ಮಹಿಳಾ ಮಂಡಲದಲ್ಲಿ ಯಕ್ಷಗಾನ ತರಬೇತಿ ಶಿಬಿರ ಸಮಾರೋಪದಲ್ಲಿ ಯಕ್ಷಗುರು ನರಸಿಂಹ ತುಂಗ ಅವರನ್ನು ಸನ್ಮಾನಿಸಲಾಯಿತು
Published on

ವಿಜಯವಾಣಿ ಸುದ್ದಿಜಾಲ ಕೋಟ

ಇಂದು ಯಕ್ಷಗಾನದಂತಹ ಕಲೆ ಅಭ್ಯಸಿಸಲು ಸಾಕಷ್ಟು ಅವಕಾಶ ಇದೆ. ಆದರೆ ಹಾಗೆ ಕಲಿಯುತ್ತಿರುವವರು ಮಧ್ಯದಲ್ಲೇ ಅದನ್ನು ನಿಲ್ಲಿಸಿಬಿಡುತ್ತಾರೆ. ಇದು ಯೋಗ್ಯವಲ್ಲ. ಬದಲಾಗಿ ಕಲಿಕೆ ನಿರಂತರವಾಗಿ ಮುಂದುವರಿಯಬೇಕು ಎಂದು ಕೋಟ ಗ್ರಾಪಂ ಸದಸ್ಯ ಚಂದ್ರ ಪೂಜಾರಿ ಕದ್ರಿಕಟ್ಟು ಹೇಳಿದರು.
ರಸರಂಗ ಕೋಟ, ಕೋಟ ಮಹಿಳಾ ಮಂಡಲದಲ್ಲಿ 21 ದಿನಗಳ ಕಾಲದ ನಡೆದ ಯಕ್ಷಗಾನ ತಾಳ, ಹೆಜ್ಜೆ, ಅರ್ಥ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿ ಯಕ್ಷ ಗುರು ನರಸಿಂಹ ತುಂಗ ಅವರನ್ನು ಅಭಿನಂದಿಸಲಾಯಿತು. ಕೋಟ ಮಹಿಳಾ ಮಂಡಲ ಅಧ್ಯಕ್ಷೆ ಗೀತಾ ಕುಂದರ್, ರಸರಂಗದ ಅಧ್ಯಕ್ಷೆ ಸುಧಾ ಮಣೂರು ಉಪಸ್ಥಿತರಿದ್ದರು. ಶಿಬಿರಾರ್ಥಿ ಮಾನಸ ಮಯ್ಯ ಸ್ವಾಗತಿಸಿ, ಡಾ.ಸರಿತಾ ಉಪಾಧ್ಯಾಯ ವಂದಿಸಿದರು. ಶಿಬಿರಾರ್ಥಿಗಳಾದ ಶಿವಪ್ರಭಾ ಅಲ್ಸೆ ಹಾಗೂ ಪ್ರಭಾವತಿ ಆಚಾರ್ಯ ಅನಿಸಿಕೆ ವ್ಯಕ್ತಪಡಿಸಿದರು. ಮೂಕಾಂಬಿಕಾ ಮಯ್ಯ ಪ್ರಾರ್ಥಿಸಿ, ವನಿತಾ ಉಪಾಧ್ಯ ಕಾರ್ಯಕ್ರಮ ನಿರೂಪಿಸಿದರು. ನಂತರ ಸುಧಾ ಮಣೂರು ನಿರ್ದೇಶನದಲ್ಲಿ ‘ಕೃಷ್ಣಲೀಲೆ’ ಯಕ್ಷಗಾನ ಪ್ರಸಂಗ ಪ್ರದರ್ಶನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net