ರಕ್ತದಾನ ಪುಣ್ಯ ಕಾರ್ಯ : ಬಂಟಕಲ್ಲು ಕಾಲೇಜಿನಲ್ಲಿ ಡಾ.ಬಿಸ್ಮಿತಾ ಅಭಿಪ್ರಾಯ

blood camp
ಬಂಟಕಲ್ಲಿ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರ ನಡೆಯಿತು
Published on

ಶಿರ್ವ: ಆರೋಗ್ಯವಂತ ವ್ಯಕ್ತಿಯು ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ರಕ್ತದಾನ ಮಾಡಬಹುದು. ರಕ್ತದಾನ ಮಾಡುವ ಮೂಲಕ ಇನ್ನೊಬ್ಬರ ಜೀವ ಉಳಿಸುವ ಪುಣ್ಯ ನಮ್ಮದಾಗುತ್ತದೆ ಎಂದು ಕೆಎಂಸಿ ಮೆಡಿಕಲ್ ಆಫೀಸರ್ ಡಾ.ಬಿಸ್ಮಿತಾ ಹೇಳಿದರು.

ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಎನ್ನೆಸ್ಸೆಸ್, ಯುವ ರೆಡ್‌ಕ್ರಾಸ್ ಘಟಕ, ರೋಟರ‌್ಯಾಕ್ಟ್ ಕ್ಲಬ್, ರಕ್ತ ಕೇಂದ್ರ ಕಸ್ತೂರಿ ಬಾ ಆಸ್ಪತ್ರೆ ಮಣಿಪಾಲ ಸಹಯೋಗದೊಂದಿಗೆ ಬುಧವಾರ ಕಾಲೇಜಿನಲ್ಲಿ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಡಾ.ನಾಗರಾಜ್ ಭಟ್ ಡೀನ್ ಅಕಾಡೆಮಿಕ್, ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್‌ಕ್ರಾಸ್ ಘಟಕ, ರೋಟರ‌್ಯಾಕ್ಟ್ ಕ್ಲಬ್ ಸಂಯೋಜಕ ನಾಗರಾಜ್ ರಾವ್, ಡಾ.ಸುದರ್ಶನ್ ರಾವ್, ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್, ಡೀನ್ (ಆಂತರಿಕ ಗುಣಮಟ್ಟ ಕೋಶ) ಮತ್ತು ವಿವಿಧ ವಿಭಾಗದ ಮುಖ್ಯಸ್ಥರು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಆಕಾಶ್ ಪ್ರಾರ್ಥಿಸಿದರು. ಆದಿತ್ಯ ಪ್ರಕಾಶ್ ಸ್ವಾಗತಿಸಿದರು. ಅನಘಾ ಭಟ್ ಕಾರ್ಯಕ್ರಮ ನಿರೂಪಿಸಿದರು. ಧೀರಜ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net