ಯಂತ್ರಶ್ರೀ ಕೃಷಿ ತರಬೇತಿ ಕಾರ್ಯಕ್ರಮ

krushi
ಕೃಷಿ ತರಬೇತಿ ಕಾರ್ಯಕ್ರಮವನ್ನು ವಡ್ಡರ್ಸೆ ಗ್ರಾಪಂ ಅಧ್ಯಕ್ಷ ಲೋಕೇಶ್ ಕಾಂಚನ್ ಉದ್ಘಾಟಿಸಿದರು
Published on

ಕೋಟ: ಬ್ರಹ್ಮಾವರ ತಾಲೂಕು ಪಾಂಡೇಶ್ವರ ವಲಯದ ಕಾವಡಿ ಕಾರ್ಯಕ್ಷೇತ್ರದಲ್ಲಿ ಯಂತ್ರಶ್ರೀ ಕೃಷಿ ತರಬೇತಿ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.
ವಡ್ಡರ್ಸೆ ಗ್ರಾಪಂ ಅಧ್ಯಕ್ಷ ಲೋಕೇಶ್ ಕಾಂಚನ್ ಉದ್ಘಾಟಿಸಿದರು. ಯಂತ್ರಶ್ರೀ ಯೋಜನೆಯ ಸಸಿ ಮಡಿ ತಯಾರಿ ಮತ್ತು ನಿರ್ವಹಣೆ, ಯಂತ್ರಶ್ರೀ ನಾಟಿಯ ವಿಧಾನದ ಬೀಜಗಳ ಸಂಸ್ಕರಣೆ ಬಗ್ಗೆ ಪ್ರಗತಿಪರ ರೈತ ಶ್ರೀನಿವಾಸ್ ಉಡುಪ ಮಾಹಿತಿ ನೀಡಿದರು.

ತಾಲೂಕು ಕೃಷಿ ಮೇಲ್ವಿಚಾರಕ ರಾಘವೇಂದ್ರ ಸಾಂಪ್ರದಾಯಿಕ ಭತ್ತ ನಾಟಿ ಹಾಗೂ ಯಂತ್ರಶ್ರೀ ಭತ್ತ ನಾಟಿಗೂ ಇರುವ ವ್ಯತ್ಯಾಸದ ಬಗ್ಗೆ ತಿಳಿಸಿದರು. ಸಾಹೇಬರಕಟ್ಟೆ ವ್ಯವಸಾಯ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಧಿಕಾರಿ ಚಂದ್ರಶೇಖರ್ ಶೆಟ್ಟಿ, ಕೃಷಿಕ ರಾಜು ಶೆಟ್ಟಿ, ಒಕ್ಕೂಟದ ಅಧ್ಯಕ್ಷ ವೇದಾವತಿ ರಾವ್, ಯುವ ರೈತ ವಿನೋದ್, ಶೌರ್ಯ ಟೀಂ ಸದಸ್ಯರಾದ ಕಾಳಿಂಗ ಪೂಜಾರಿ, ಊರಿನ ರೈತರು, ಪ್ರಗತಿಬಂಧು ಸ್ವಸಹಾಯ ಸಂಘದ ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾವಡಿ ವ್ಯಾಪ್ತಿಯ ಸೇವಾ ಪ್ರತಿನಿಧಿ ರಮೇಶ್ ವಂದಿಸಿದರು. ಮೇಲ್ವಿಚಾರಕಿ ಜಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net