ಯಕ್ಷಗಾನದಿಂದ ಸಂಸ್ಕಾರಕ್ಕೆ ಉಳಿಗಾಲ

vaddarse
ಶ್ರೀ ಮಹಾಲಿಂಗೇಶ್ವರ ಕಲಾರಂಗ ವಡ್ಡರ್ಸೆ ಚಿಣ್ಣರ ಒಡ್ಡೋಲಗ ಯಕ್ಷಗಾನ ತರಬೇತಿ ಕಾರ್ಯಕ್ರಮವನ್ನು ದೇವದಾಸ್‌ರಾವ್ ಕೂಡ್ಲಿ ಉದ್ಘಾಟಿಸಿದರು
Published on

ಕೋಟ: ಯಕ್ಷಗಾನದ ಮೂಲಕ ಸಂಸ್ಕಾರ ಹಾಗೂ ಸಂಸ್ಕೃತಿ ಉಳಿವು ಸಾಧ್ಯ. ಕಲೆಯ ಬಗ್ಗೆ ಕೀಳರಿಮೆ ಭಾವನೆ ಮಾಡದೇ ಕಲೆಗೆ ಪ್ರೋತ್ಸಾಹ ನೀಡಬೇಕು ಎಂದು ಯಕ್ಷ ಗುರು ದೇವದಾಸ್‌ರಾವ್ ಕೂಡ್ಲಿ ಹೇಳಿದರು.

ಅವರು ವಡ್ಡರ್ಸೆಯ ಶ್ರೀ ಮಹಾಲಿಂಗೇಶ್ವರ ಕಲಾರಂಗದ 7ನೇ ವರ್ಷದ ಚಿಣ್ಣರ ಒಡ್ಡೋಲಗ ಯಕ್ಷಗಾನ ತರಬೇತಿ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು. ಪ್ರಸಾದ್ ಕುಮಾರ್ ಮೊಗೆಬೆಟ್ಟು ಮಹಾಲಿಂಗೇಶ್ವರ ಕಲಾರಂಗದ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು. ದೇವಸ್ಥಾನ ಉತ್ಸವ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಹಾಡಿಮನೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಸಂಘದ ಅಧ್ಯಕ್ಷ ಸಚಿನ್ ಶೆಟ್ಟಿ ಯಾಳಕ್ಲು ಅಧ್ಯಕ್ಷತೆ ವಹಿಸಿದ್ದರು. ಅರುಣಾ ಐತಾಳ್ ಪ್ರಾರ್ಥಿಸಿದರು. ಸತೀಶ್ ವಡ್ಡರ್ಸೆ ಪ್ರಸ್ತಾವನೆಗೈದರು. ನಾಗರಾಜ ಆಚಾರ್ಯ ಸ್ವಾಗತಿಸಿದರು. ಗುರುಪ್ರಸಾದ್ ಐತಾಳ್ ವಂದಿಸಿದರು. ಪದ್ಮನಾಭ ಆಚಾರ್ಯ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net