ಆಯತಪ್ಪಿ ಬಿದ್ದ ಮಹಿಳೆಯನ್ನು ರಕ್ಷಿಸಿದ ಆರ್​ ಪಿ ಎಫ್​ ಮಹಿಳಾ ಸಿಬ್ಬಂದಿ

udp-20-railway
Published on

ಉಡುಪಿ: ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ರೈಲು ಹತ್ತುವಾಗ ಆಯತಪ್ಪಿ ಬಿದ್ದ ಮಹಿಳೆಯನ್ನು ರಕ್ಷಿಸಿದ ಆರ್​ ಪಿ ಎಫ್​ ಸಿಬ್ಬಂದಿ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆವ್ಯಕ್ತವಾಗಿದೆ.

ಭಟ್ಕಳಕ್ಕೆ ತೆರಳುತ್ತಿದ್ದ ಯುವತಿಯೊಬ್ಬರು ಮಂಗಳೂರು&ಮಾಡ್ಗಾವ್​ ಪ್ಯಾಸೆಂಜರ್​ ರೈಲು ಹತ್ತುವಾಗ ಹಠಾತ್ತನೆ ಜಾರಿಬಿದ್ದು, ಎರಡೂ ಕಾಲುಗಳು ಪ್ಲಾಟ್​ಫಾಮ್​ರ್ ಮತ್ತು ರೈಲಿನ ನಡುವೆ ಸಿಕ್ಕಿಕೊಂಡವು. ಇದನ್ನು ಗಮನಿಸಿದ ಆರ್​ ಪಿ ಎಫ್​ ಸಿಬ್ಬಂದಿ ಅರ್ಪಣಾ ಕೆಟಿ ಆಕೆಯನ್ನು ರಸಿ ಪ್ಲಾಟ್​ ಾರಂನಲ್ಲಿ ಕುಳ್ಳಿರಿಸಿದರು. ವಾಕಿ ಟಾಕಿ ಮೂಲಕ ಗಾರ್ಡ್​ ಮತ್ತು ಲೋಕೋ ಪೈಲಟ್​ಗೆ ತಿಳಿಸುವ ಮೂಲಕ ಈ ನಡುವೆ ಕರ್ತವ್ಯದಲ್ಲಿದ್ದ ರೈಲ್ವೆ ಸಿಬ್ಬಂದಿ ರೈಲನ್ನು ನಿಲ್ಲಿಸಿದರು. ಪ್ಲಾಟ್​ಫಾಮ್​ರ್ನಲ್ಲಿದ್ದ ಇನ್ಸ್​ಪೆಕ್ಟರ್​ ಆರ್​ಪಿಎಫ್​ ಸ್ಥಳಕ್ಕಾಗಮಿಸಿ ಯುವತಿಯ ಅರೋಗ್ಯ ವಿಚಾರಿಸಿ, ಯಾವುದೇ ಸಮಸ್ಯೆ ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡು ರೈಲು ಹತ್ತಲು ಸಹಾಯ ಮಾಡಿದರು. ಭಟ್ಕಳದಲ್ಲಿ ಕರ್ತವ್ಯದಲ್ಲಿದ್ದ ಆರ್​ಪಿಎಫ್​ ಸಿಬ್ಬಂದಿ ಪ್ರಯಾಣಿಕೆಯನ್ನು ಭೇಟಿ ಮಾಡಿ ವಿವರಗಳನ್ನು ಸಂಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net