ಯಕ್ಷಗಾನಕ್ಕೆ ಬೇಕು ವಿಪುಲ ಅವಕಾಶ

kalakendra
Published on

ಕೋಟ: ಯಕ್ಷಗಾನ ಕರಾವಳಿಯ ಕಲೆಯಾದರೂ ಇದು ಬೆಳೆಯಲು ವಿಪುಲ ಅವಕಾಶಬೇಕು. ಯಕ್ಷ ಅಭಿಮಾನಿಗಳ ಸಂಖ್ಯೆ ಬೆಳೆಯಬೇಕು ಎಂದು ಅಮೆರಿಕಾದ ಪಟ್ಲ ಫೌಂಡೇಶನ್ ಅಧ್ಯಕ್ಷ ಗುಂಡ್ಮಿ ಅರವಿಂದ ಉಪಾಧ್ಯ ತಿಳಿಸಿದರು.

ಇತ್ತೀಚೆಗೆ ಅಗಲಿದ ಹಂಗಾರಕಟ್ಟೆ-ಐರೋಡಿ ಯಕ್ಷಗಾನ ಕಲಾಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಗುಂಡ್ಮಿ ರಾಮಕೃಷ್ಣ ಐತಾಳರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕುಂದಾಪುರದ ಕಲಾಕ್ಷೇತ್ರ ಕಿಶೋರ ಕುಮಾರ, ನಿವೃತ್ತ ಅಧ್ಯಾಪಕ ಶ್ರೀನಿವಾಸ ಸೋಮಯಾಜಿ ನುಡಿನಮನ ಸಲ್ಲಿಸಿದರು. ಕಲಾಕೇಂದ್ರದ ನಿರಖು ಠೇವಣಿ ಯೋಜನೆಗೆ ಆರ್ಥಿಕ ಸಹಾಯ ನೀಡಿದ ಸುಶೀಲಾ ಹೊಳ್ಳ ಅವರನ್ನು ಗೌರವಿಸಲಾಯಿತು. ಸಾಲಿಗ್ರಾಮ ದೇವಸ್ಥಾನ ನಿಕಟಪೂರ್ವ ಅಧ್ಯಕ್ಷ ಅನಂತಪದ್ಮನಾಭ ಐತಾಳ ಉಪಸ್ಥಿತರಿದ್ದರು. ಕಾರ್ಯದರ್ಶಿ ರಾಜಶೇಖರ ಹೆಬ್ಬಾರ ಸ್ವಾಗತಿಸಿದರು. ರಾಮಚಂದ್ರ ಐತಾಳ ಕಾರ್ಯಕ್ರಮ ನಿರೂಪಿಸಿದರು. ಸೀತಾರಾಮ ಸೋಮಯಾಜಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net