ಕಾರ್ಕಳ: ಕ್ರೀಡಾ ಪ್ರತಿಭೆ ಪ್ರೋತ್ಸಾಹಿಸಿದರೆ ಅವರಿಗೆ ಸಾಧನೆ ಮಾಡುವಲ್ಲಿ ಪ್ರೇರಣೆಯಾಗುತ್ತದೆ. ದ್ರುವಿ ಶಾಲಾ ವಿಭಾಗದ ಪಂದ್ಯದಲ್ಲಿ ರಾಷ್ಟ್ರದ ಮಟ್ಟದ ಸಾಧನೆ ಮಾಡಿದ ಕಾರ್ಕಳದ ಪ್ರಥಮ ವಿದ್ಯಾರ್ಥಿನಿ. ಅವರ ಸಾಧನೆ ಶ್ಲಾಘನೀಯ ಎಂದು ಕ್ರೀಡಾ ಪ್ರೋತ್ಸಾಹಕ ಶುಭದ ರಾವ್ ಹೇಳಿದರು.
ಆಂಧ್ರಪ್ರದೇಶದ ವಿಜಯವಾಡದಲ್ಲಿ ಆಯೋಜಿಸಿದ 68ನೇ ರಾಷ್ಟ್ರೀಯ ಶಾಲಾ ಬಾಲಕಿಯರ ವಾಲಿಬಾಲ್ ಕ್ರೀಡಾಕೂಟದಲ್ಲಿ ರಾಷ್ಟ್ರಕ್ಕೆ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಪಡೆದ ರಾಜ್ಯ ಬಾಲಕಿಯರ ತಂಡ ಪ್ರತಿನಿಧಿಸಿದ ಕಾರ್ಕಳ ಎಸ್.ಎನ್.ವಿ. ಕಾಲೇಜಿನ ವಿದ್ಯಾರ್ಥಿ ಸಾಂತ್ರಬೆಟ್ಟು ದ್ರುವಿ ಅವರಿಗೆ ಜೋಡುರಸ್ತೆ ದುರ್ಗಾ ಫ್ರೆಂಡ್ಸ್ ವಾಲಿಬಾಲ್ ಕ್ರೀಡಾಂಗಣದಲ್ಲಿ ಭವ್ಯ ಸ್ವಾಗತ ನಡೆಯಿತು.
ವಾಲಿಬಾಲ್ ತರಬೇತುದಾರದ ಸಂತೋಷ್ ಡಿಸೋಜ, ಜೀವನ್ ಡಿಸಿಲ್ವಾ, ಜಯರಾಜ್ ಪೂಜಾರಿ, ವೆಂಕಟೇಶ್ ಪ್ರಭು, ಕ್ರೀಡಾ ಪ್ರೋತ್ಸಾಹಕ ಸಂದೇಶ್ ವರ್ಮ, ಪ್ರತಿಮಾ ಡಿಸೋಜ, ದ್ರುವಿ ಪೋಷಕ ದಂಪತಿಗಳಾದ ರಾಜೇಂದ್ರ ಪ್ರಸಾದ್ ಮತ್ತು ಪ್ರಿಯಾ, ದುರ್ಗಾ ಪ್ರೆಂಡ್ಸ್ ತಂಡದ ಆಟಗಾರು ಉಪಸ್ಥಿತರಿದ್ದರು.