ಸ್ಪಂದನ ಯುವಕ ಸಂಘ ಕಟ್ಟಡ ಉದ್ಘಾಟನೆ

sangha
Published on

ಕುಂದಾಪುರ: ಮಂಕಿ-ಗುಜ್ಜಾಡಿ ಸ್ಪಂದನ ಯುವಕ ಸಂಘದ ಕಟ್ಟಡ ಉದ್ಘಾಟನೆ ಹಾಗೂ 12ನೇ ವಾರ್ಷಿಕೋತ್ಸವ ಸಂಭ್ರಮ ಮಂಕಿ ಶ್ರೀ ರಾಮ ಭಜನಾ ಮಂದಿರದ ವಠಾರದಲ್ಲಿ ಭಾನುವಾರ ಜರುಗಿತು.

ಮಂಕಿಯ ಹಿರಿಯ ನಾಗರಿಕ ವೆಂಕಟಾಚಲ ನಾವುಡ ಧ್ವಜಾರೋಹಣ ನೆರವೇರಿಸಿದರು. ಗುಜ್ಜಾಡಿ ಗ್ರಾಪಂ ಅಧ್ಯಕ್ಷ ತಮ್ಮಯ್ಯ ದೇವಾಡಿಗ ಮತ್ತು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಯು.ರಾಜೇಶ್ ಕಾರಂತ್ ಉಪ್ಪಿನಕುದ್ರು ಅವರು ನೂತನ ಕಟ್ಟಡ ಉದ್ಘಾಟಿಸಿದರು. ಶಾಸಕ ಗುರುರಾಜ್ ಗಂಟಿಹೊಳೆ 12ನೇ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ದಿವಾಕರ್ ಆಚಾರ್, ರಾಜು ಮಾಸ್ಟರ್, ಮರವಂತೆ ಶಾಲೆ ಮುಖ್ಯ ಶಿಕ್ಷಕ ಭಾಸ್ಕರ ಮಯ್ಯ, ಮಂಕಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಗೀತಾ ಭಾಸ್ಕರ ಮಯ್ಯ, ಎಸ್‌ಡಿಎಂಸಿ ಅಧ್ಯಕ್ಷೆ ರೇಷ್ಮಾ ಆಚಾರ್ಯ, ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ಸಂತೋಷ್ ಎಂ., ಸ್ಪಂದನ ಯುವಕ ಸಂಘ ಗೌರವಾಧ್ಯಕ್ಷ ಕಿಶೋರ್ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು. ರಘು ಎಂ. ಸ್ವಾಗತಿಸಿದರು. ಸುಜಾತ ದೇವಾಡಿಗ, ರೇಷ್ಮಾ ಕುಂದರ್, ಸುಜಾತ ಸಂತೋಷ್ ಮಂಕಿ ಪ್ರಾರ್ಥಿಸಿದರು. ಸತೀಶ್ ಪಿ. ವರದಿ ವಾಚಿಸಿದರು. ಸುಧೀರ್ ಎಂ. ಮತ್ತು ಸಾಯಿರಾಜ ದೇವಾಡಿಗ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ರಾಘವೇಂದ್ರ ಕುಂದರ್ ಸಹಕರಿಸಿದರು. ಅಕ್ಷಯ್ ಪಿ. ವಂದಿಸಿದರು. ಸುಂದರ್ ಗಂಗೊಳ್ಳಿ ಮತ್ತು ಸುಧೀರ್ ಪಿ. ನಾಯ್ಕ ಕಾರ್ಯಕ್ರಮ ನಿರೂಪಿಸಿದರು.

ಸನ್ಮಾನ

ರಾಜು ಮಾಸ್ಟರ್, ಶ್ರೀಲತಾ ಹಾಗೂ ನೀಲು ನರಸಿಂಹ ಮೊಗವೀರ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net