ಕೋಟ: ಯಕ್ಷಗಾನ ಒಂದು ಆರಾಧನಾ ಕಲೆ. ಇದರ ಮುಖ್ಯ ಆಶಯ ಸಂಸ್ಕೃತಿ ಉಳಿಸುವುದು, ಸಂಸ್ಕಾರ ಬೆಳೆಸುವುದು. ಪ್ರದರ್ಶನಗಳಿಂದ ಧರ್ಮ ಪ್ರಚಾರವಾಗುತ್ತದೆ. ಭಾರತೀಯ ಸಂಸ್ಕೃತಿ ಉಳಿಯುವಲ್ಲಿ ಸಹಕರಿಸುತ್ತದೆ. ಜನವಾನಸದ ಒಳಗೆ ಪುರಾಣಗಳ ಆಶಯವನ್ನು ಗಟ್ಟಿ ವಾಡುತ್ತದೆ ಎಂದು ಬಾಳೆಕುದ್ರು ಮಠದ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ಹೇಳಿದರು.

ಹಂಗಾರಕಟ್ಟೆ ಐರೋಡಿ ಯಕ್ಷಗಾನ ಕಲಾಕೇಂದ್ರ ಆಯೋಜಿಸಿದ್ದ 20 ದಿವಸಗಳ ನಲಿಕುಣಿ ಯಕ್ಷಗಾನ ತರಬೇತಿ ಶಿಬಿರದ ಸವಾರೋಪ ಸಮಾರಂಭದಲ್ಲಿ ಮಾತನಾಡಿದರು.
ಕಲಾಕೇಂದ್ರದ ಅಧ್ಯಕ್ಷ ಆನಂದ.ಸಿ.ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರು, ಶಿಕ್ಷಕರು ಹಾಗೂ ಆರ್ಥಿಕ ಸಹಾಯ ನೀಡಿದವರನ್ನು ಗೌರವಿಸಲಾಯಿತು. ಶಾಸಕ ಕಿರಣ್ ಕುವಾರ್ ಕೊಡ್ಗಿ ಉಪಸ್ಥಿತಿಯಲ್ಲಿ ಶಿಬಿರಾರ್ಥಿಗಳ ಯಕ್ಷಗಾನ ಪ್ರದರ್ಶನಗೊಂಡಿತು. ಲೆಕ್ಕಪತ್ರ ಪರಿಶೋಧಕ ಜತೀಂದ್ರ ಮರವಂತೆ ಉಪಸ್ಥಿತರಿದ್ದರು.
ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ ಸ್ವಾಗತಿಸಿದರು. ಸೀತಾರಾಮ ಸೋಮಯಾಜಿ ವಂದಿಸಿದರು. ಪತ್ರಕರ್ತ ಚಿತ್ತೂರು ಪ್ರಭಾಕರ ಆಚಾರ್ಯ ನಿರೂಪಿಸಿದರು.