

ವಿಜಯವಾಣಿ ಸುದ್ದಿಜಾಲ ಉಡುಪಿ
ಅತ್ತ ಪ್ರಾಣಿಯೂ ಅಲ್ಲದ. ಇತ್ತ ಮನುಷ್ಯನೂ ಅಲ್ಲದ ನರಸಿಂಹ ದೇವರದ್ದು ಅತಿ ಬುದ್ಧಿವಂತ ಅವತಾರ. ಶ್ರೀಮನ್ನಾರಾಯಣನ ವಿಪರೀತ ಕೋಪದ ಅವತಾರವಿದು. ಸಿಟ್ಟು ಎಷ್ಟಿದಿಯೋ ಅಷ್ಟೇ ಸಮಾಧಾನಿ, ಪ್ರಸನ್ನಚಿತ್ತ. ನರಸಿಂಹನ ಪ್ರಾರ್ಥನೆಯಿಂದ ದುರಿತ ಕಷ್ಟಗಳೆಲ್ಲವೂ ನಿವಾರಣೆ ಆಗುತ್ತದೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಇದಕ್ಕೂ ಮೊದಲು ಪುತ್ತಿಗೆ ಮಠದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ಮಠದ ದಿವಾನ ನಾಗರಾಜ ಆಚಾರ್ಯ ನರಸಿಂಹ ಜಯಂತಿ ಆಚರಣೆಯ ಮಹತ್ವ ವಿವರಿಸಿದರು.
ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ನ ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ ಅಂಬಲಪಾಡಿ, ನಗರಸಭಾ ಮಾಜಿ ಸದಸ್ಯ ನರಸಿಂಹ ನಾಯಕ ಮಣಿಪಾಲ, ಮಠದ ಪ್ರಮುಖರಾದ ರಘುಪತಿ ರಾವ್, ಕಲಾವಿದರಾದ ರಾಮಕೃಷ್ಣ ಕೊಡಂಚ, ಕಾರ್ತಿಕ ಇನ್ನಂಜೆ, ಮುರಳಿ, ಕಾವ್ಯಾ ಹೆಬ್ಬಾರ್, ಕೌಶಿಕ ಹೆಬ್ಬಾರ, ನಿತ್ಯಾನಂದ ನಾಯಕ ಹಾಗೂ ಭಜನಾ ಮಂಡಳಿಗಳ ಸದಸ್ಯರು ಉಪಸ್ಥಿತರಿದ್ದರು.