ಯಕ್ಷಗಾನದಿಂದ ಜನರಿಗೆ ಸಂಸ್ಕಾರ

appanna
ಹಂಗಾರಕಟ್ಟೆ ಐರೋಡಿ ಯಕ್ಷಗಾನ ಕಲಾಕೇಂದ್ರ ವತಿಯಿಂದ ಬಸ್ರೂರು ಅಪ್ಪಣ್ಣ ಹೆಗ್ಡೆಯವರನ್ನು ಅವರ ಸ್ವಗೃಹದಲ್ಲಿ ಸನ್ಮಾನಿಸಲಾಯಿತು.
Published on

ಕೋಟ: ಯಕ್ಷಗಾನ ಸಮಾಜವನ್ನು ಸಂಸ್ಕಾರವಂತರನ್ನಾಗಿ ರೂಪಿಸುತ್ತದೆ. ಜತೆಗೆ ಪೌರಾಣಿಕ ಜ್ಞಾನ ನೀಡುವ ಮೂಲಕ ಯಕ್ಷಗಾನ ಜನರನ್ನು ವಿದ್ಯಾವಂತರನ್ನಾಗಿ ಮಾಡುತ್ತದೆ. ಯಕ್ಷಗಾನ ಬೆಳೆಸಲು ಶ್ರಮಿಸುತ್ತಿರುವ ಕಲಾಕೇಂದ್ರದ ಕಾರ್ಯ ಶ್ಲಾಘನಾರ್ಹ ಎಂದು ಧಾರ್ಮಿಕ ಧುರೀಣ ಅಪ್ಪಣ್ಣ ಹೆಗ್ಡೆ ಹೇಳಿದರು.

ಹಂಗಾರಕಟ್ಟೆ ಐರೋಡಿ ಯಕ್ಷಗಾನ ಕಲಾಕೇಂದ್ರ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕಲಾಕೇಂದ್ರದ ಅಧ್ಯಕ್ಷ ಆನಂದ್ ಸಿ.ಕುಂದರ್, ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್, ಶುಭಹಾರೈಸಿದರು. ಭಾಗವತರಾದ ರಾಘವೇಂದ್ರ ಮಯ್ಯ ಮತ್ತು ಗಣೇಶ ಆಚಾರ್ಯ ಅವರು ವಿಷ್ಣುಮೂರ್ತಿ ಬೇಳೂರು ರಚಿಸಿದ ಅಪ್ಪಣ್ಣ ಹೆಗ್ಡೆಯವರ ಕುರಿತ ಯಕ್ಷಪದ್ಯ ಹಾಡಿದರು.

ವಾಸುದೇವ ಕಾರಂತ, ವೈಕುಂಠ ಹೇರ್ಳೆ, ಸೀತಾರಾಮ ಸೋಮಯಾಜಿ, ವಿಶ್ವೇಶ್ವರ ಹೊಳ್ಳ, ಪ್ರಭಾಕರ ಐತಾಳ್, ಅಂಬರೀಷ್ ಭಟ್ಟ, ಮಾಧವ ಮಣೂರು, ಗಣೇಶ ಚೇರ್ಕಾಡಿ, ದಿನೇಶ್ ಪಡಿಯಾರ್, ಮೇಘಶ್ಯಾಮ ಹೆಬ್ಬಾರ್, ರಾಘವೇಂದ್ರ ಹೊಳ್ಳ, ರಾಮನಾಥ ಅಲ್ಸೆ, ಶ್ರೀನಿವಾಸ ಉಪಾಧ್ಯ, ಸತ್ಯನಾರಾಯಣ ಭಟ್ಟ, ಕಲಾಕೇಂದ್ರದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿಷ್ಣುಮೂರ್ತಿ ಬೇಳೂರು ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net