ಕಾಪು ದೇವಳ ಮುಸ್ಟಿ ಕಾಣಿಕೆ ಸಮರ್ಪಣೆ

kapu
ಕಾಪು ಶ್ರೀ ಮೂರನೇ ಮಾರಿಯಮ್ಮ ದೇವಿ ಸನ್ನಿಧಾನದಲ್ಲಿ ಅನಂತರಾಮ ತಂತ್ರಿ ಮತ್ತು ಕೆ.ಪಿ.ಶ್ರೀನಿವಾಸ ತಂತ್ರಿ ಮಡುಂಬು ನೇತೃತ್ವದಲಿ ಮುಷ್ಠಿಕಾಣಿಕೆ ಸಮರ್ಪಿಸಲಾಯಿತು.
Published on

ಪಡುಬಿದ್ರಿ: ಕಾಪು ಶ್ರೀ ಮೂರನೇ ಮಾರಿಯಮ್ಮ ದೇವಿಯ ಗದ್ದುಗೆ ಸ್ಥಾಪನೆಗೊಂಡು ನೂರು ವರ್ಷಗಳು ಪೂರ್ಣಗೊಂಡ ಸ್ಮರಣೆಗಾಗಿ ಸಮರ್ಪಿಸಲು ಉದ್ದೇಶಿರುವ 90 ಕೆ.ಜಿ. ತೂಕದ ನೂತನ ರಜತ ಗದ್ದುಗೆ ನಿರ್ಮಾಣ ಪೂರ್ವಭಾವಿ ಪ್ರಾಯಶ್ಚಿತ್ತ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಮುಸ್ಟಿಕಾಣಿಕೆ ಸಮರ್ಪಿಸಲಾಯಿತು.

ಅನಂತರಾಮ ತಂತ್ರಿ ಮತ್ತು ಕೆ.ಪಿ.ಶ್ರೀನಿವಾಸ ತಂತ್ರಿ ಮಡುಂಬು ನೇತೃತ್ವದಲ್ಲಿ ಮುಸ್ಟಿಕಾಣಿಕೆ ಸಮರ್ಪಣಾ ಕಾರ್ಯಕ್ರಮ ಸಂಪನ್ನಗೊಂಡಿತು.

ಮೂರನೇ ಮಾರಿಯಮ್ಮ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನೋಹರ್ ಎಸ್.ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಶಶಿಧರ್ ಶೆಟ್ಟಿ ಎರ್ಮಾಳು, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಶ್ರೀಕರ ಶೆಟ್ಟಿ ಕಲ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ನಾರಾಯಣ ತಂತ್ರಿ, ರವಿ ಭಟ್ ಮಂದಾರ, ಶಶಿಧರ ಸುವರ್ಣ, ಸದಾನಂದ ಸುವರ್ಣ, ನಾಗರಾಜ್ ಎಸ್., ಶಾಂತಲತಾ ಎಸ್.ಶೆಟ್ಟಿ, ಅಶ್ವಿನಿ ಬಂಗೇರ, ಶ್ರೀಕಾಂತ್ ಸೇರಿಗಾರ್, ಹೊಸ ಮಾರಿಗುಡಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಮಾಜಿ ಆಡಳಿತ ಮೊಕ್ತೇಸರ ಮೋಹನ್ ಬಂಗೇರ, ವಿಕ್ರಂ ಕಾಪು, ಅನಿಲ್ ಬಲ್ಲಾಳ್ ಕಾಪು ಬೀಡು, ರಮೇಶ್ ಹೆಗ್ಡೆ ಕಲ್ಯ, ರವಿರಾಜ ಶೆಟ್ಟಿ ಪಂಜಿತ್ತೂರುಗುತ್ತು, ರತ್ನಾಕರ ಹೆಗ್ಡೆ ಕಲೀಲಬೀಡು, ರಮೇಶ್ ಶೆಟ್ಟಿ ಕೊಲ್ಯ, ಅರುಣ್ ಶೆಟ್ಟಿ ಪಾದೂರು, ಅನಿಲ್ ಕುಮಾರ್, ರತ್ನಾಕರ ಶೆಟ್ಟಿ, ಶಿಲ್ಪಾ ಜಿ.ಸುವರ್ಣ, ರವೀಂದ್ರ ಮಲ್ಲಾರು, ಶೇಖರ್ ಕೋಟ್ಯಾನ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net