ಹೆಬ್ರಿ: ಸೇವೆಯ ಮೂಲಕ ಸಮಾಜಕ್ಕೆ ಅರಿವು ಮೂಡಿಸುವಲ್ಲಿ ಎನ್ನೆಸ್ಸೆಸ್ ಶಿಬಿರ ಮಹತ್ವದ ಪಾತ್ರವಹಿಸುತ್ತದೆ. ಅನುಭವ ಮತ್ತು ಪರಿಶ್ರಮಕ್ಕೆ ಎನ್ನೆಸ್ಸೆಸ್ ಹೆಚ್ಚು ಗಮನ ಹರಿಸಲು ಸಹಕಾರಿಯಾಗಿದೆ ಎಂದು ಎಳ್ಳಾರೆ ಲಕ್ಷ್ಮೀ ಜನಾರ್ದನ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ದಿನೇಶ್ ಕಿಣಿ ಹೇಳಿದರು.
ಮುನಿಯಾಲು ಸಮೀಪದ ಎಳ್ಳಾರೆ ಗ್ರಾಪಂ ವ್ಯಾಪ್ತಿಯ ಲಕ್ಷ್ಮೀ ಜನಾರ್ದನ ದೇವಾಲಯದ ಸಭಾಂಗಣದಲ್ಲಿ ನಿಟ್ಟೆ ಪ್ರಥಮ ದರ್ಜೆ ಕಾಲೇಜಿನ ಎನ್ನೆಸ್ಸೆಸ್ ಘಟಕ 33ನೇ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು.
ನಿಟ್ಟೆ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಸಂಯೋಜಕ ಪ್ರಕಾಶ್ ಬಿ. ಅಧ್ಯಕ್ಷತೆ ವಹಿಸಿದ್ದರು. ಕಡ್ತಲ ಗ್ರಾಪಂ ಅಧ್ಯಕ್ಷ ಸುಕೇಶ್ ಹೆಗ್ಡೆ, ಗ್ರಾಪಂ ಸದಸ್ಯ ದೇವೇಂದ್ರ ಕಾಮತ್, ಮುಖ್ಯಶಿಕ್ಷಕಿ ಅಶ್ವಿನಿ ಸುಕೇಶ್ ಹೆಗ್ಡೆ, ಎನ್ನೆಸ್ಸೆಸ್ ಅಧಿಕಾರಿ ದಿವ್ಯಾಕ್ಷ ಪ್ರಭು, ಸವಿತಾ ಕಾರಂತ್, ದೃತಿ ಗೌಡ ಉಪಸ್ಥಿತರಿದ್ದರು. ದೀಕ್ಷಿತ್ ಪ್ರಾರ್ಥಿಸಿದರು. ದೀಕ್ಷಾ ಕಾರ್ಯಕ್ರಮ ನಿರೂಪಿಸಿದರು. ಶ್ವೇತಾ ವಂದಿಸಿದರು.