

ಕೋಟ: ಮಣೂರು ಪಡುಕರೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ ವತಿಯಿಂದ ಉಡುಪಿ ಯಕ್ಷಶಿಕ್ಷಣ ಟ್ರಸ್ಟ್ ಸಹಯೋಗದಲ್ಲಿ ವಿದ್ಯಾರ್ಥಿಗಳ ಯಕ್ಷಗಾನ ಕಲಿಕಾ ತರಬೇತಿ ಶಿಬಿರ ಇತ್ತೀಚೆಗೆ ಉದ್ಘಾಟನೆಗೊಂಡಿತು. ಗೀತಾನಂದ ಟ್ರಸ್ಟ್‌ನ ಪ್ರವರ್ತಕ ಆನಂದ ಸಿ.ಕುಂದರ್ ಉದ್ಘಾಟಿಸಿದರು.
ಎಸ್‌ಡಿಎಂಸಿ ಅಧ್ಯಕ್ಷ ರಾಘವೇಂದ್ರ ಕಾಂಚನ್ ಅಧ್ಯಕ್ಷತೆ ವಹಿಸಿದ್ದರು. ರಾಮ್‌ದಾಸ್ ನಾಯಕ್ ಸ್ವಾಗತಿಸಿದರು. ರಾಜೀವ್ ವಂದಿಸಿದರು. ಹೆರಿಯ ನಿರೂಪಿಸಿದರು. ರಾಘವೇಂದ್ರ ಗಿಳಿಯಾರು ಸಹಕರಿಸಿದರು. ಬಳಿಕ ಹರ್ಷಿತಾ ಅಮಿನ್ ಸಂಕೇತ್ ತಂಡದಿಂದ ಯಕ್ಷಗಾನ ಪ್ರಾತ್ಯಕ್ಷತೆ ಜರುಗಿತು.