

ವಿಜಯವಾಣಿ ಸುದ್ದಿಜಾಲ ಕಾರ್ಕಳ ಭೂ ಮಸೂದೆ ಕಾನೂನು, ಉಚಿತ ವಿದ್ಯುತ್ ಯೋಜನೆ, ಸಾಲಮೇಳ, ಸಿಇಟಿ ಪರೀಕ್ಷೆ ಸಹಿತ ಪಂಚ ಗ್ಯಾರಂಟಿ ಯೋಜನೆಗಳನ್ನು ನೀಡಿ ಬಡವರ ಕಷ್ಟಕ್ಕೆ ಕೈಜೋಡಿಸಿದ್ದು ಕಾಂಗ್ರೆಸ್ ಮಾತ್ರ ಎಂಬುದು ಸಾಬೀತಾಗಿದೆ ಎಂದು ಗ್ಯಾರಂಟಿ ಸಮಿತಿ ಜಿಲ್ಲಾ ಉಪಾಧ್ಯಕ್ಷ ಉದಯಕುಮಾರ್ ಶೆಟ್ಟಿ ಮುನಿಯಾಲು ಹೇಳೀದರು. ಶಕ್ತಿ ಯೋಜನೆ ಅನ್ವಯ ರಾಜ್ಯಾದ್ಯಂತ ಮಹಿಳಾ ಪ್ರಯಾಣಿಕರ ಸಂಖ್ಯೆ 500 ಕೋಟಿ ತಲುಪಿರುವ ಹಿನ್ನೆಲೆಯಲ್ಲಿ ಬಂಡಿಮಠ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಸಂಭ್ರಮಾಚರಣೆಯಲ್ಲಿ ಮಾತನಾಡಿದರು. ಕಾರ್ಕಳ ಬ್ಲಾಕ್ ಅಧ್ಯಕ್ಷ ಶುಭದ ರಾವ್ ಶುಭಹಾರೈಸಿದರು. ಸರ್ಕಾರಿ ಬಸ್‌ಗೆ ಪೂಜೆ ಸಲ್ಲಿಸಲಾಯಿತು. ಬಳಿಕ ಚಾಲಕ ಕೇಶವ ಜಿ.ಎಚ್. ಹಾಗೂ ನಿರ್ವಾಹಕ ಶಿವಪುತ್ರ ಕುಂಬಾರ ಅವರನ್ನು ಸನ್ಮಾನಿಸಲಾಯಿತು. ವಕೀಲ ಶೇಖರ ಮಡಿವಾಳ, ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್‌ಚಂದ್ರ ಪಾಲ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಭಾನು ಭಾಸ್ಕರ ಪೂಜಾರಿ, ಮುಖಂಡರಾದ ಅನಿತಾ ಡಿಸೋಜ, ಕೃಷ್ಣ ಶೆಟ್ಟಿ, ಉದಯ ಶೆಟ್ಟಿ ಕುಕ್ಕುಂದೂರು, ಕಿರಣ್ ಹೆಗ್ಡೆ, ಸೂರಜ್ ಶೆಟ್ಟಿ ನಕ್ರೆ, ಸುಧಾಕರ ಶೆಟ್ಟಿ ಮುಡಾರು, ರಾಜೇಂದ್ರ ದೇವಾಡಿಗ ಮತ್ತು ರೀನಾ ಡಿಸೋಜ, ವಿವಿಧ ಘಟಕಗಳ ಹಾಗೂ ಗ್ರಾಮೀಣ ಸಮಿತಿ ಅಧ್ಯಕ್ಷರು, ಜನಪ್ರತಿನಿಧಿಗಳು, ಗ್ಯಾರಂಟಿ ಸಮಿತಿ ಸದಸ್ಯರು, ಮಹಿಳಾ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು. ಫಿಲಿಪ್ ಮಸ್ಕರನೇನಸ್ ಸ್ವಾಗತಿಸಿದರು. ಹೇಮಂತ ಆಚಾರ್ಯ ವಂದಿಸಿದರು. ಪ್ರದೀಪ್ ಬೇಲಾಡಿ ಕಾರ್ಯಕ್ರಮ ನಿರೂಪಿಸಿದರು.
ಸರ್ಕಾರ ಮಹತ್ವಾಕಾಂಕ್ಷಿಗಳ ಪೈಕಿ ಒಂದಾದ ಶಕ್ತಿ ಯೋಜನೆ ಯಶಸ್ವಿಯಾಗಿದ್ದು, ಟೀಕಿಸುತ್ತಿದ್ದ ಬಿಜೆಪಿಗರಿಗೆ ಮಹಿಳೆಯರು ತಕ್ಕ ಉತ್ತರ ನೀಡಿದ್ದಾರೆ. ಶುಭದ ರಾವ್, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ https://www.vijayavani.net/development-is-stunted-by-population-growth https://www.vijayavani.net/congress-protests-in-front-of-vaddarse-grama