ಡಬ್ಲ್ಯುಡಬ್ಲ್ಯುಇ ರೀತಿ ಬದಲಾದ ಸೆಲೆಬ್ರಿಟಿ ಕ್ರಿಕೆಟ್​ ಲೀಗ್:​​ ಕ್ರೀಡಾಂಗಣದಲ್ಲೇ ಬಡಿದಾಡಿಕೊಂಡ ಕಲಾವಿದರು

Bangla Cricket
Published on

ಢಾಕಾ: ಕ್ರಿಕೆಟ್​ ಒಂದು ಜೆಂಟಲ್​ಮೆನ್​ ಗೇಮ್​, ಆದರೆ ಯಾವಾಗಲೂ ಅಲ್ಲ! ಕೆಲವೊಮ್ಮೆ ಕ್ರೀಡಾಸ್ಫೂರ್ತಿಗೆ ಸಾಕ್ಷಿಯಾಗುವ ಕ್ರೀಡಾಭಿಮಾನಿಗಳು ಇನ್ನು ಕೆಲವೊಮ್ಮೆ ಕ್ರೀಡಾಂಗಣದಲ್ಲಿ ನಡೆಯುವ ನಿರಾಶಾದಾಯಕ ಘಟನೆಗಳನ್ನೂ ನೋಡುತ್ತಾರೆ. ಇದೀಗ ಬಾಂಗ್ಲಾದೇಶದ ಸೆಲೆಬ್ರಿಟಿ ಕ್ರಿಕೆಟ್​ ಲೀಗ್​ನಲ್ಲೂ ಇದೇ ರೀತಿಯ ಪ್ರಸಂಗ ಜರುಗಿದೆ.

ನಿರ್ದೇಶಕರಾದ ಮೊಸ್ತಫಾ ಕಮಲ್​ ರಾಜ್​ ಮತ್ತು ದಿಪಾಂಕರ್​ ದಿಪೊನ್​ ಎರಡೂ ತಂಡಗಳ ಕ್ರಿಕೆಟ್​ ಸ್ಪರ್ಧೆಯು ಕೆಲ ಕಾಲ ವರ್ಲ್ಡ್​ ರೆಸ್ಟಲಿಂಗ್​ ಎಂಟರ್ಟೈನ್ಮೆಂಟ್​ (ಡಬ್ಲ್ಯುಡಬ್ಲ್ಯುಇ) ಪಂದ್ಯವಾಗಿ ಬದಲಾಯಿತು.

ಅಂಪೈರ್​ ತಪ್ಪು ನಿರ್ಣಯದಿಂದಾಗಿ ಕ್ರೀಡಾಂಗಣದಲ್ಲೇ ಎರಡೂ ತಂಡಗಳ ನಡುವೆ ಜಗಳ ನಡೆಯಿತು. ಈ ವೇಳೆ 6 ಆಟಗಾರರು ಗಾಯಗೊಂಡಿದ್ದಾರೆ. ಅಲ್ಲದೆ, ಈ ಒಂದು ಘಟನೆಯಿಂದ ಸಮಿಫೈನಲ್​ಗೂ ಮುಂಚೆಯೇ ಇಡೀ ಟೂರ್ನಮೆಂಟ್​ ರದ್ದಾಯಿತು.

ಬೌಂಡರಿ ಮತ್ತು ಔಟ್ ಕುರಿತಾದ ಅಂಪೈರ್​ ತೀರ್ಮಾನದಿಂದ ಅಸಮಧಾನಗೊಂಡು ಕಿತ್ತಾಡಿಕೊಂಡರು. ಸ್ನೇಹಮಯವಾಗಿದ್ದ ಕ್ರೀಡಾಕೂಟ ಒಂದು ಸಣ್ಣ ಎಡವಟ್ಟಿನಿಂದ ರಣಾಂಗಣವಾಗಿ ಕೊನೆಗೆ ಪಂದ್ಯವೇ ರದ್ದಾಯಿತು.

ಈ ತಿಂಗಳ ಆರಂಭದಲ್ಲಿ ಶ್ರೀಲಂಕಾ ರಾಜಧಾನಿ ಕೊಲಂಬೋದಲ್ಲಿರುವ ಪ್ರೇಮದಾಸ ಸ್ಟೇಡಿಯಂನಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ನಡೆದ ಏಷ್ಯಾಕಪ್​ ಟೂರ್ನಿಯ ಸೂಪರ್​ 4 ಪಂದ್ಯದ ನಂತರ ಉಭಯ ದೇಶಗಳ ಕ್ರೀಡಾಭಿಮಾನಿಗಳು ಪರಸ್ಪರ ಕಿತ್ತಾಡಿಕೊಂಡಿದ್ದರು. ಭಾರತ, ಲಂಕಾ ವಿರುದ್ಧ 41 ರನ್​ಗಳ ಅಂತರದಲ್ಲಿ ಪಂದ್ಯ ಗೆದ್ದಿದ್ದರಿಂದ ಹತಾಶೆಗೊಂಡ ಲಂಕಾ ಕ್ರೀಡಾಭಿಮಾನಿಗಳು ಭಾರತ ಕ್ರೀಡಾಭಿಮಾನಿಗಳ ಮೇಲೆ ದಾಳಿ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಭಾರತದ ಕ್ರೀಡಾಭಿಮಾನಿಗಳು ಸಹ ಪ್ರತಿದಾಳಿ ಮಾಡಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net