

ವುಹಾನ್: ಕರೊನಾ ವೈರಸ್ ಚೀನಾದಲ್ಲಿ ಹುಟ್ಟಿದರೂ ಇತರೆ ದೇಶಗಳಲ್ಲಿ ಅಧಿಕ ಜನರನ್ನು ಬಲಿ ಪಡೆದುಕೊಂಡಿದೆ. ಆದರೂ, ಚೀನಾದ ಕೋವಿಡ್ ಸಾವಿನ ಸಂಖ್ಯೆಯ ಮೇಲೆ ಹಿಂದಿನಿಂದಲೂ ಅನುಮಾನಗಳು ವ್ಯಕ್ತವಾಗುತ್ತಿದ್ದು, ಇದೀಗ ಅಲ್ಲಿನ ಸರ್ಕಾರದ ನಡೆಯಿಂದ ಮತ್ತಷ್ಟು ಸಂಶಯ ಹೊಗೆಯಾಡತೊಡಗಿದೆ.
ಕರೊನಾ ವೈರಸ್ ಚೀನಾದ ವುಹಾನ್ ನಗರದ ಜೀವಂತ ಪ್ರಾಣಿ ಮಾರುಕಟ್ಟೆಯಲ್ಲಿ ಸ್ಪೋಟಗೊಂಡಿತು ಎಂಬ ವಾದವಿದೆ. ವುಹಾನ್ ಒಂದರಲ್ಲೇ ಬಹುತೇಕ ಜನ ಅಸುನೀಗಿದ್ದು, ಇದೀಗ ಚೀನಾ ಸರ್ಕಾರ ಈ ಹಿಂದೆ ಘೋಷಿಸಿದ್ದ ಸಾವಿನ ಸಂಖ್ಯೆಗೆ ಶೇ. 50 ರಷ್ಟು ಮೃತರ ಸಂಖ್ಯೆ ಸೇರಿಸಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಚೀನಾ ಸರ್ಕಾರ 1,290 ಸಾವಿನ ಸಂಖ್ಯೆಯನ್ನು ಸೇರಿಸಿದ್ದ, ವುಹಾನ್ನಲ್ಲಿ ಕರೊನಾ ಮೃತರ ಸಂಖ್ಯೆ 3869ಕ್ಕೆ ಏರಿಕೆಯಾಗಿರುವುದು ಅನುಮಾನ ಮೂಡುವಂತಿದೆ.
ಅನೇಕ ಮರಣ ಪ್ರಕರಣಗಳನ್ನು ತಪ್ಪಾಗಿ ವರದಿ ಅಥವಾ ನಾಪತ್ತೆಯಾಗಿರುವುದು ಸಾಮಾನ್ಯವಾಗಿಯೇ ಚೀನಾ ಪಾರದರ್ಶಕತೆ ಬಗ್ಗೆ ಜಾಗತಿಕವಾಗಿ ಸಂಶಯಗಳು ಬೆಳೆದಿವೆ ಎಂದು ಚೀನಾ ಅಧಿಕಾರಿಗಳು ತಿಳಿಸಿದ್ದಾರೆ.
ಇದೀಗ ವುಹಾನ್ ಸಾವಿನ ಸಂಖ್ಯೆಯಲ್ಲಿ ಬದಲಾವಣೆ ಮಾಡಿರುವುದು ಚೀನಾದ ಕರೊನಾ ಸಾವಿನ ಸಂಖ್ಯೆ ಶೇ. 39 ರೊಂದಿಗೆ 4632ಕ್ಕೇರಿದೆ. ಈ ಹಿಂದೆ ಸಂಖ್ಯೆ 3331 ಇತ್ತು. ಇದಕ್ಕೆ ಸಂಬಂಧಪಟ್ಟ ಡಾಟಾವನ್ನು ಇಂದು ಬೆಳಗ್ಗೆಯಷ್ಟೇ ಚೀನಾ ಸರ್ಕಾರ ಬಿಡುಗಡೆ ಮಾಡಿದೆ.
ಸಾವಿನ ಸಂಖ್ಯೆ ಮಾತ್ರವಲ್ಲದೆ ಸೋಂಕಿತರ ಪ್ರಕರಣವನ್ನು ಸೇರಿಸಲಾಗಿದ್ದು, 11 ಮಿಲಿಯನ್ ಜನರು ಇರುವ ವುಹಾನ್ನಲ್ಲಿ 325 ಪ್ರಕರಣ ಸೇರಿಸುವುದರೊಂದಿಗೆ ಒಟ್ಟು 50,333 ಪ್ರಕರಣಗಳೆಂದು ಹೇಳಲಾಗಿದೆ. ಚೀನಾದ ಒಟ್ಟು 82,367 ಪ್ರಕರಣಗಳಲ್ಲಿ ಮೂರನೇ 2 ಭಾಗ ವುಹಾನ್ ನಗರಕ್ಕೆ ಸೇರಿದೆ.
ಕರೊನಾ ವೈರಸ್ ಹುಟ್ಟಿಗೆ ಪ್ರಾಣಿ ಮಾರುಕಟ್ಟೆಯಲ್ಲ, ವುಹಾನ್ ಲ್ಯಾಬ್ನಲ್ಲಿ ಸೋರಿಕೆ ಆಗಿರಬಹುದು ಎಂದು ಅಮೆರಿಕ ಆರಂಭದಿಂದಲೂ ಅನುಮಾನ ವ್ಯಕ್ತಪಡಿಸುತ್ತಾ ಬಂದಿದೆ. ಚೀನಾ ಪಾರ್ದರ್ಶಕತೆ ಬಗ್ಗೆ ಅಮೆರಿಕ ಟೀಕಿಸುತ್ತಾ ಬಂದಿದ್ದು, ಚೀನಾ ತನ್ನ ಸಂಖ್ಯೆಯಲ್ಲಿ ಬದಲಾವಣೆ ಮಾಡಿಕೊಂಡಿರುವುದಕ್ಕೆ ಕಾರಣ ಎನ್ನಲಾಗಿದೆ. ಆದರೂ ಇದು ಕೂಡ ನಿಖರವಲ್ಲ. ಚೀನಾ ಅಧಿಕೃತ ಸಾವಿನ ಸಂಖ್ಯೆಯನ್ನು ಮುಚ್ಚಿಡುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. (ಏಜೆನ್ಸೀಸ್)