ನೀವು ನಿತ್ಯ ಸೇವಿಸುವ ಈ ಆಹಾರಗಳು ನಿಮ್ಮ ಮೂಳೆಗಳನ್ನು ದುರ್ಬಲಗೊಳಿಸಬಹುದು ಎಚ್ಚರ!

Bones Health
Published on

ಯಾವುದೇ ವಯಸ್ಸಿನಲ್ಲಿ ಮೂಳೆಗಳ ಆರೋಗ್ಯ ತುಂಬಾ ಮುಖ್ಯ. ಚಿಕ್ಕ ವಯಸ್ಸಿನಲ್ಲಿ ಮೂಳೆಗಳ ಬೆಳವಣಿಗೆಯು ಎತ್ತರವನ್ನು ನಿರ್ಧರಿಸಲು ಸಹಾಯ ಮಾಡುತ್ತವೆ. ಇಡೀ ದೇಹದ ಆಧಾರಸ್ತಂಭವೇ ನಮ್ಮ ಮೂಳೆಗಳು. ಹೀಗಾಗಿ ಅವುಗಳನ್ನು ಬಲವಾಗಿ, ಆರೋಗ್ಯಯುತವಾಗಿ ಹಾಗೂ ಸ್ಥಿರವಾಗಿ ಇಟ್ಟುಕೊಳ್ಳಬೇಕಾಗಿರುವುದು ತುಂಬಾ ಅವಶ್ಯಕ.

ಇನ್ನು ವಯಸ್ಸಾದಂತೆ ಮೂಳೆಗಳು ಸಹ ದುರ್ಬಲವಾಗುತ್ತವೆ. ಆಸ್ಟಿಯೊಪೊರೋಸಿಸ್ ಅಥವಾ ಮೂಳೆ ಸವೆತದಂತಹ ಸಮಸ್ಯೆಗಳು ವಯಸ್ಸಾದಂತೆ ಕಾಣಿಸಿಕೊಳ್ಳುವುದು ಸಾಮಾನ್ಯ. ಮೂಳೆಗಳು ದುರ್ಬಲವಾದಲ್ಲಿ, ಬಿರುಕು ಮತ್ತು ಮುರಿತಗಳು ಸಂಭವಿಸುತ್ತವೆ. ಚಿಕ್ಕ ವಯಸ್ಸಿನಿಂದಲೇ ಮೂಳೆಗಳ ಮೇಲೆ ಕಾಳಜಿ ವಹಿಸಿ, ಅವುಗಳು ಬಲವಾಗಿ ಇಟ್ಟುಕೊಳ್ಳುವುದು ಮುಖ್ಯವಾಗಿದೆ. ಮೂಳೆಗಳು ಬಲವಾಗಿರಬೇಕೆಂದರೆ ಅದಕ್ಕೆ ಸೂಕ್ತವಾದ ಆಹಾರಗಳನ್ನು ಸೇವಿಸಬೇಕು. ಕೆಲವು ಆಹಾರಗಳು ಮೂಳೆಗಳ ಆರೋಗ್ಯವನ್ನು ಕಾಪಾಡುತ್ತವೆ. ಅದೇ ರೀತಿ ಕೆಲವು ಆಹಾರಗಳು ಮೂಳೆಗಳನ್ನು ದುರ್ಬಲಗೊಳಿಸುತ್ತವೆ.

1. ಕೆಫಿನ್​ ಮತ್ತು ಸಕ್ಕರೆ ಅಂಶವಿರುವ ಸಾಫ್ಟ್​ ಡ್ರಿಂಕ್ಸ್​ ಮೂಳೆಗಳ ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಇವುಗಳನ್ನು ಸೇವಿಸುವುದರಿಂದ ಮೂಳೆಗಳಲ್ಲಿನ ಕ್ಯಾಲ್ಸಿಯಂ ಕಡಿಮೆಯಾಗಿ, ಮೂಳೆಗಳು ದುರ್ಬಲವಾಗುತ್ತವೆ.

2. ಟೊಬ್ಯಾಕೋ ದೇಹ ಮತ್ತು ಮೂಳೆಗಳಿಗೆ ಹಾನಿಕಾರಕ. ಇದು ದೇಹದಲ್ಲಿರುವ ಕ್ಯಾಲ್ಸಿಯಂ ಪ್ರಮಾಣ ಕಡಿಮೆ ಮಾಡುತ್ತದೆ. ಅದರ ಬದಲಿಗೆ ನಿಕೋಟಿನ್ ಅನ್ನು ಸಂಗ್ರಹಿಸುತ್ತದೆ. ಇದು ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯನ್ನು ತಡೆಯುತ್ತದೆ. ಇದರಿಂದ ಮೂಳೆಗಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

3. ಟೀ, ಕೊಕೊಕೋಲಾ, ಚಾಕೋಲೇಟ್​ ಮತ್ತು ಕಾಫಿಯಂತಹ ಪಾನೀಯಗಳು ಸಹ ಮೂಳೆಗಳ ದುರ್ಬಲಕ್ಕೆ ಕಾರಣವಾಗುತ್ತವೆ. ಹೀಗಾಗಿ ಇವುಗಳನ್ನು ಮಿತವಾಗಿ ಸೇವಿಸಿ.

4. ಅತಿಯಾದ ಸಕ್ಕರೆ ಮತ್ತು ಉಪ್ಪುಯುಕ್ತ ಆಹಾರಗಳು ಸಹ ಮೂಳೆಗಳಿಗೆ ಹಾನಿಕಾರಕ. ಹೆಚ್ಚು ಉಪ್ಪು ಮತ್ತು ಸಕ್ಕರೆಯನ್ನು ತಿನ್ನುವುದು ಕ್ಯಾಲ್ಸಿಯಂ ವಿಸರ್ಜನೆಯನ್ನು ಹೆಚ್ಚಿಸುತ್ತದೆ. ಇದು ಮೂಳೆಯ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

5. ಫಾಸ್ಟ್ ಫುಡ್ ಎಂಬುದು ಇಂದು ಅನೇಕರನ್ನು ಆವರಿಸಿದೆ. ಅನೇಕರು ಜನರು ಫಾಸ್ಟ್​ ಫುಡ್​ಗೆ ಮಾರು ಹೋಗಿದ್ದಾರೆ. ಆದರೆ, ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕ ಎಂದು ಕೆಲವರಿಗೆ ತಿಳಿದಿಲ್ಲ. ಅತಿಯಾಗಿ ಫಾಸ್ಟ್ ಫುಡ್ ತಿನ್ನುವುದರಿಂದ ದುರ್ಬಲ ಮೂಳೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಬರಬಹುದು. ಹೀಗಾಗಿ ಫಾಸ್ಟ್​ ಫುಡ್​ ಕೂಡ ಮಿತಿ ಇರಲಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net